Friday, July 4, 2025

Latest Posts

ಪುನೀತ್ ಗೆ ಕಾವೇರಿನದಿಯಲ್ಲಿ ತರ್ಪಣ ಬಿಟ್ಟ ವಿನೋದ್ ರಾಜ್ ಮತ್ತು ಲೀಲಾವತಿ..!

- Advertisement -

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಟ್ಟಾತ್ ನಿಧನದಿಂದ ಇಡಿ ಅಭಿಮಾನಿವರ್ಗ ಹಾಗೂ ಕುಟುಂಬಸ್ಥರು ದುಃಖ ಪಡುವಂತಾಗಿದೆ. ಇಂದಿಗೆ ಅಪ್ಪು ನಮ್ಮನಗಲಿ 11 ದಿನಗಳು ಕಳೆದಿವೆ. ಇನ್ನೂ ಪುನೀತ್ ಕುಟುಂಬಸ್ಥರು, ಇಂದು 11ನೇ ದಿನದ ಕಾರ್ಯವನ್ನು ಪುನೀತ್ ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ನೆರವೇರಿಸಲಾಗಿದೆ. ಹಾಗೇಯೆ ರಾಜ್ಯಾದ್ಯಂತ ಅಭಿಮಾನಿಗಳು ಅಪ್ಪು 11ನೇ ದಿನದ ಪುಣ್ಯ ಸ್ಮರಣೆಯನ್ನು ಮಾಡುತ್ತಿದ್ದಾರೆ.

ಇನ್ನೂ ಅಪ್ಪು ಮರಣದ ವಿಷಯತಿಳಿದಾಗಿನಿಂದಲೇ ದುಃಖತಪ್ತರಾಗಿದ್ದ ಸ್ಯಾಂಡಲ್ವುಡ್‌ನ ಹಿರಿಯ ಕಲಾವಿದರಾದ ಲೀಲಾವತಿ ಹಾಗೂ ವಿನೊದ್ ರಾಜ್ ಅವರು ಇಂದು ಕಾವೇರಿನದಿಯಲ್ಲಿ ತರ್ಪಣ ಬಿಡುವ ಮೂಲಕ ಪುನೀತ್ 11ನೇ ದಿನದ ಕರ‍್ಯವನ್ನು ಮಾಡಿದ್ದಾರೆ.

ಇಂದಿಗೆ ಪುನೀತ್ ನಿಧನರಾಗಿ 11 ದಿನಗಳು ಕಳೆದಿವೆ, ಆದ ಕಾರಣ ನಟ ವಿನೊದ್ ರಾಜ್ ಹಾಗೂ ಅವರ ತಾಯಿ ಲೀಲಾವತಿಯವರು ಇಂದು ಕಾವೇರಿನದಿಯಲ್ಲಿ ಅಪ್ಪುಗೆ ತರ್ಪಣ ಅರ್ಪಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾo ಬಳಿಯ ಸಂಗಮದಲ್ಲಿ ಕಾರ್ಯನಿರ್ವಹಿಸಿದ್ದು, ವೈದಿಕ ಕ್ರಿಯಾ ಕರ್ಮದ ಕಾರ್ಯ ನೆರವೇರಿಸಿದ ನಟ ವಿನೋದ್, ತಾಯಿ ಮತ್ತು ಬಂಧುಗಳ ಜೊತೆ ವೈದಿಕ ಕಾರ್ಯವನ್ನು ಮಾಡಿದ್ದು, ಸ್ಥಳದಲ್ಲೇ ಆಶ್ಲೇಶ ಬಲಿ ಹಾಗೂ ನಾರಾಯಣ ಬಲಿ ಪೂಜೆಯನ್ನು ಮಾಡಿ, ತರ್ಪಣವನ್ನು ಕಾವೇರಿ ನದಿಗೆ ವಿನೋದ್ ಅವರೆ ಬಿಡುವ ಮೂಲಕ ಪುನೀತ್ ಪುಣ್ಯಸ್ಮರಣೆ ಮಾಡಿದ್ದಾರೆ.

ಪುನೀತ್ ಎಲ್ಲರ ಜೊತೆ ಸಾಕಷ್ಟು ಹೊಂದಾಣಿಕೆ ಇಂದ ಲವಲವಿಕೆ ಇಂದ ಇದ್ದರು, ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನ ನೀಡಿದಂತ ನಟನನ್ನು ಕಳೆದು ಕೊಂಡು ಕರ್ನಾಟಕ ಚಿತ್ರರಂಗಕ್ಕೆ ಹಾಗೆ ನಮಗೆ ಸಾಕಷ್ಟು ನೋವು ಉಂಟಾಗಿರೋ ಅಂತದ್ದು, ಅವರು ಇದ್ದು ಕನ್ನಡ ಚಿತ್ರರಂಗಕ್ಕೆ ಇನ್ನೂ ಹೆಸರನ್ನು ತಂದು ಕೊಡಬೇಕಿತ್ತು ಆದರೆ ಅವರನ್ನು ಕಳೆದು ಕೊಂಡಿದ್ದೇವೆ ಹಾಗಾಗಿ ಅವರ ಆತ್ಮಕ್ಕೆ ಶಾಂತಿಯನ್ನ ಕರ‍್ಬೆಕು ಮತ್ತೆ ಒಂದು ಸದ್ಗತಿ ಮಾಡೋನಿಟ್ಟಿನಲ್ಲಿ ಈ ಕಾರ್ಯವನ್ನು ಮಾಡ್ತಿದ್ದೇವೆ ಎಂದು ವಿನೋದ್ ರಾಜ್ ವಿಷಯವನ್ನು ಹಂಚಿಕೊoಡಿದ್ದಾರೆ.

ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.

- Advertisement -

Latest Posts

Don't Miss