Tuesday, November 18, 2025

Latest Posts

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಧಾರವಾಡದಲ್ಲಿ ಮೌನಾಕ್ರೋಶ: ಪ್ರಗತಿಪರ ಸಂಘಟನೆಗಳಿಗೆ ವಿದ್ಯಾರ್ಥಿಗಳು ಸಾಥ್

- Advertisement -

Hubli News: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿವಿಬಿ ವಿದ್ಯಾರ್ಥಿನಿ ನೇಹಾ ಹಾಗೂ ಅಂಜಲಿ ಅಂಬಿಗೇರ್ ಹತ್ಯೆ ಪ್ರಕರಣ ಸೇರಿದಂತೆ ರಾಜ್ಯದ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ‌ ದೌರ್ಜನ್ಯ ಖಂಡಿಸಿ‌ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅಗ್ರಹಸಿ ಧಾರವಾಡದಲ್ಲಿ ಪ್ರಗತಿಪರ ಸಂಘಟನೆಗಳು ಮೌನವಾಗಿ ಪ್ರತಿಭಟನೆ ಮೆರವಣಿಗೆ ನಡೆಸಿ ‌ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಗತೊಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಕಡಪಾ ಮೈದಾನದಿಂದ ಆರಂಭವಾದ ಮೌನ ಪ್ರತಿಭಟನೆ ಮೆರವಣಿಗೆ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮೌನವಾಗಿ ಪ್ಲೆಕ್ಸ್ ಕಾರ್ಡ ಹಿಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಪ್ರಗತಿಪರ ಸಂಘಟನೆಗಳ‌ ಆಕ್ರೋಶಕ್ಕೆ ವಿದ್ಯಾರ್ಥಿಗಳು ಸಾಥ್ ನೀಡಿದರು. ರಾಜ್ಯದಲ್ಲಿ ದಿನದಿಂದ ದಿನದಿಂದ ದಿನಕ್ಕೆ ಮಹಿಳಾ ದೌರ್ಜನ್ಯ ಹಾಗೂ ಹತ್ಯೆಗಳು ಹೆಚ್ಚಾಗುತ್ತಿವೆ.

ಅಲ್ಲದೆ ರಾಜ್ಯದ ಸಂಸದ ಪ್ರಜ್ವಲ್ ರೇವಣ್ಣ ಮಹಿಳಾ ಲೈಗಿಂಕ ದೌರ್ಜನ್ಯದಿಂದಾ ಮಾನಸಿಕವಾಗಿ ಮಹಿಳೆಯರಿಗೆ ನೋವುಂಟು ಮಾಡಿದೆ. ಈ ಕೂಡಲೇ ಮಹಿಳೆಯರ ವಿದ್ಯಾರ್ಥಿನಿಯರ ಕೊಲೆ ದೌರ್ಜನ್ಯ ತಡೆಯಬೇಕು. ಜತೆಗೆ ಸಂಸದ ಪ್ರಜ್ವಲ ರೇವಣ್ಣ ಅವರನ್ನು ಆದಷ್ಟು ಬೇಗ ಬಂಧನ ಮಾಡಬೇಕು, ಅವರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕು ಎಚ್ಚರಿಕೆ ನೀಡಿದರು.

ಅಕೌಂಟೆಂಟ್ ಸೂಪರಿಡೆಂಟ್ ಸಾವು: ಕಾಂಗ್ರೆಸ್ ಸಚಿವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಆಗ್ರಹ

Political News: ಸಚಿವ ನಾಗೇಂದ್ರ ವಜಾಕ್ಕೆ ಪಿ.ರಾಜೀವ್ ಒತ್ತಾಯ

ಅಕ್ರಮ ಹೊಟೇಲ್ ವಾರದೊಳಗೆ ತೆರವುಗೊಳಿಸಬೇಕು: ಯಶ್ಪಾಲ್ ಸುವರ್ಣ ಆಗ್ರಹ

- Advertisement -

Latest Posts

Don't Miss