Viral Video: ಮಂಗನನ್ನು ಓಡಿಸಲು ಹೋಗಿ ವಿದ್ಯುತ್ ತಗುಲಿ ಸಾವನ್ನಪ್ಪಿದ ಯುವಕ

Viral News: ಸಾವು ಯಾರಿಗೆ..? ಹೇಗೆ..? ಯಾವಾಗ ಬರುತ್ತದೆ ಅಂತಾ ಯಾರಿಗೂ ತಿಳಿದಿರುವುದಿಲ್ಲ. ಕೆಲವರು ಇಳಿ ವಯಸ್ಸಿನ ತನಕ ಬದುಕಿ, ಅನಾರೋಗ್ಯದಿಂದ ಸಾವನ್ನಪ್ಪಿದರೆ, ಇನ್ನು ಕೆಲವರು ಸಣ್ಣ ವಯಸ್ಸಿಗೆ ಇಹಲೋಕ ತ್ಯಜಿಸುತ್ತಾರೆ. ಅದೆಲ್ಲ ಅವರವರ ಹಣೆಬರಹ. ಅದೇ ರೀತಿ ಇಲ್ಲೋರ್ವ ಬಾಳಿಬದುಕಬೇಕಾದ ಯುವಕ, ಮಂಗ ಓಡಿಸಲು ಹೋಗಿ, ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ.

ಮಧ್ಯ ಪ್ರದೇಶದ ಛತ್ತಾಪುರದಲ್ಲಿ ಈ ಘಟನೆ ನಡೆದಿದ್ದು, ಪ್ರದೀಪ್ ರಾಯ್ಕ್ವಾರ್ ಅಲಿಯಾಸ್ ರಾನು ಎಂಬಾತ, ಹೋಟೇಲ್ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಹೋಟೇಲ್ ಬಳಿ ಮಂಗ ಬಂದ ಕಾರಣ, ಮಂಗವನ್ನು ಓಡಿಸಲು ಆತ ಕಬ್ಬಿಣದ ಕೋಲಿನ ಸಹಾಯ ಪಡೆದಿದ್ದಾನೆ.

ಆದರೆ ದುರಾದೃಷ್ಟವಶಾತ್ ಕಬ್ಬಿಣದ ಕೋಲು ಎಕ್ಸ್‌ಟೆನ್ಶನ್ ವಾಯರ್‌ಗೆ ತಾಕಿ, ವಿದ್ಯುತ್ ತಗುಲಿ ಆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

About The Author