ದುಬೈ: ಪಾಕ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಬೆನ್ನಲ್ಲೆ ವಿರಾಟ್ ಕೊಹ್ಲಿ ಕೆಲ ಮಾಜಿ ಕ್ರಿಕೆಟಿಗರಿಗೆ , ಕ್ರಿಕೆಟ್ ಪಂಡಿತರಿಗೆ ಮಾತಿನಲ್ಲೆ ಚಾಟಿ ಬೀಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನನ್ನ ಮೇಲೆ ನಿಜವಾದ ಪ್ರೀತಿ ಇದ್ದರೆ ನನ್ನ ಫಾರ್ಮ್ ಬಗ್ಗೆ , ನ್ಯೂನ್ಯತೆಗಳ ಬಗ್ಗೆ ವೈಯಕ್ತಿಕವಾಗಿ ಕರೆ ಮಾಡಿ ಅಥವಾ ಸಿಕ್ಕಾಗ ಹೇಳಿ ನಾನು ಮುಕ್ತವಾಗಿ ಆಲಿಸುವೆ.
ಅದು ಬಿಟ್ಟು ಟಿವಿ ಮುಂದೆ, ಮೈಕ್ ಮುಂದೆ ಇಡೀ ಜಗತ್ತಿಗೆ ತಿಳಿಯುವಂತೆ ಹೇಳಿದರೆ ನನಗದು ಯಾವುದೇ ರೀತಿಯಲ್ಲೂ ಮಾನ್ಯವೆನಿಸೋದಿಲ್ಲ ಎಂದು ವಿರಾಟ್ ಕಿಡಿಕಾರಿದ್ದಾರೆ.
ದ್ರಾವಿಡ್ ಮತ್ತು ನಾಯಕ ರೋಹಿತ್ ಕಾರ್ಯವೈಖರಿಗೆ ವಿರಾಟ್ ಮೆಚ್ಚುಗೆ ಸೂಚಿಸಿದ್ದಾರೆ. ತಂಡದ ವಾತಾವರಣ ಚೆನ್ನಾಗಿದೆ. ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶವಿದೆ.
ವೈಫಲ್ಯ ಬದಲಿಸುವ ಬದಲು ಮತ್ತೆ ಸಾಮಥ್ರ್ಯ ಪ್ರದರ್ಶಿಸಲು ಅವಕಾಶವಿದೆ. ನನ್ನ ವಾಪಸಾತಿಗೂ ಬಲ ತಂದಿದೆ ಎಂದು ವಿರಾಟ್ ಮೆಚ್ಚುಗೆ ಸೂಚಿಸಿದ್ದಾರೆ.