Political News: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಏನೇ ಮಾಡಿದ್ರೂ ಮೋದಿ, ಅಮಿತ್ ಶಾ, ಪಾಪ ಹೋಗಲ್ಲ. ಗಂಗಾ ಸ್ನಾನ ಮಾಡಿದ ತಕ್ಷಣ ಪಾಪ ಹೋಗಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಸರಿಯಾಗಿಯೇ ಹೇಳಿದ್ದಾರೆ ಅಂತ ಕಾರ್ಮಿಕ ಸಚಿವ ಸಂತೋಷ ಲಾಡ್ ಖರ್ಗೆ ಪರ ಬ್ಯಾಟ್ ಬೀಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ದೇಶದ ಆರ್ಥಿಕ ವ್ಯವಸ್ಥೆ ಮೂಲೆಗುಂಪಾಗಿದೆ. ಪಾಲಿಸಿ ಹಾಳ ಮಾಡಿರೋದು ಪಾಪ ಅಲ್ವಾ. ಎರಡು ಲಕ್ಷ ಕಿರಾಣಿ ಅಂಗಡಿ ಮುಚ್ಚಿ ಹೋಗಿವೆ ಇದನ್ನು ಯಾರಾದರೂ ಮಾತಾಡ್ತಾರಾ.? ಈ ಪಾಪ ಮಾಫಿ ಆಗಲ್ಲ. ಬಿಜೆಪಿಯವರು ದೇಶದ ಸಾಲದ ಬಗ್ಗೆ ಯಾಕೆ ಮಾತಾಡಲ್ಲ. ನಾನೊಬ್ಬ ಹಿಂದೂ ಇದೀನಿ, ಅಮಿತ್ ಶಾ ಮೋದಿ ಪಾಪ ಎಲ್ಲಿ ಹೋದ್ರೂ ತೊಳೆಯೋಕೆ ಆಗಲ್ಲ ಎಂದರು..
ಮೂರು ವರ್ಷದ ಹಿಂದೆ ಜಪಾನ್ ಪ್ರಧಾನಿ ದೇಶಕ್ಕೆ ಬಂದಿದ್ರು. ಮೋದಿ ಅವರು ಬುಲೆಟ್ ಟ್ರೇನ್ ಬೇಕ ಅಂತಾ ಒತ್ತಡ ಹಾಕಿದ್ರು. ಮೋದಿ ಅವರು ಎಲ್ಲ ಕಡೆ ಕರೆದುಕೊಂಡು ಪೂಜೆ ಮಾಡಿದ್ರು. ಹೋಗೋವಾಗ ಜಪಾನ್ ಪ್ರಧಾನಿ ಒಂದು ಮಾತ ಹೇಳಿದ್ರು, ನಿಮಗೆ ಇಷ್ಟೆಲ್ಲ ಮಾಡೋಕೆ ಸಮಯ ಇದೆ. ನಿಮಗೆ ಬುಲೆಟ್ ಟ್ರೇನ್ ಯಾಕೇ ಬೇಕು ಅಂತಾ ಜಪಾನ್ ಪ್ರಧಾನಿ ಕೇಳಿದ್ರು, ದಿನಾ ಬೆಳಗ್ಗೆ ಏದ್ರೆ, ಪೂಜೆ, ಮಂಗಳಾರತಿ ಮಾಡೋರಿಗೆ ಬುಲೆಟ್ ಟ್ರೇನ್ ಯಾಕೆ ಬೇಕು. ಹೀಗಾಗಿ ಇನ್ನು ಬುಲೆಟ್ ಟ್ರೇನ್ ಮಾಡಿಲ್ಲ ಎಂದ ಲಾಡ್ ವಿಶ್ವಗುರು ನಮ್ಮಣ್ಣನ ಸ್ಕಿನ್ ನೋಡಿದೀರಾ ಎಂದು ವ್ಯಂಗ್ಯವಾಡಿದ್ದಾರೆ..




