Monday, October 6, 2025

Latest Posts

Zee5 ನಲ್ಲಿ ಫ್ರೀಯಾಗಿ ಸಿನಿಮಾ ನೋಡಿ..!

- Advertisement -

ಕನ್ನಡ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡ (Zee Kannada) ಸದಾ ವಿಭಿನ್ನ, ವಿಶೇಷ, ವಿನೂತನ ಪ್ರಯತ್ನಗಳನ್ನು ಮಾಡ್ತಾ ಬರುತ್ತಿದೆ. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸುತ್ತಿರುವ ಜೀ ಕನ್ನಡ, ಜೀ5 ಒಟಿಟಿ‌ (Zee5 OTT) ಮೂಲಕ ಮನೆ ಮಂದಿಯಲ್ಲಾ ಮನೆಯಲ್ಲಿ ಕುಳಿತು ಸಿನಿಮಾಗಳನ್ನು ನೋಡುವ ವೇದಿಕೆ ಕಲ್ಪಿಸಿದೆ. ಕೇವಲ ಸಿನಿಮಾ ಮಾತ್ರವಲ್ಲ ವೆಬ್ ಸೀರೀಸ್ ಗಳನ್ನು ಪ್ರೇಕ್ಷಕರ ಮಡಿಲಿಗೆ ತಂದು ಹಾಕ್ತಾ ಇದೆ. ಇದೇ ಜೀ5 ಒಟಿಟಿ ಈಗ ಬಂಪರ್ ಆಫರ್ ವೊಂದನ್ನು ನೀಡಿದೆ. ಜೀ5 ಒಟಿಟಿ ಫ್ಲಾಟ್ ಫಾರ್ಮ್ (OTT Flat Form) ಶುರುವಾಗಿ ಇದೇ 12ನೇ ತಾರೀಖು ನಾಲ್ಕು ವಸಂತಕ್ಕೆ ಕಾಲಿಡ್ತಾ ಇದೆ. ಅಂದ್ರೆ ಜೀ5 4ನೇ ವಾರ್ಷಿಕೋತ್ಸವದ ಸಂಭ್ರಮದ ಖುಷಿಯಲ್ಲಿದೆ. ಈ ಖುಷಿಯ ಕ್ಷಣಗಳನ್ನು ಜೀ5 ಪ್ರೇಕ್ಷಕರೊಟ್ಟಿಗೆ ಹಂಚಿಕೊಳ್ತಾ ಇದೆ. ಜೊತೆಗೆ ಒಂದು ಬೊಂಟಾಟ್ ಅವಕಾಶ ಕೊಡ್ತಿದೆ. ಇದೇ ತಿಂಗಳ 12 ರಿಂದ 14ರವರೆಗೆ ಉಚಿತವಾಗಿ ಜೀ5ನಲ್ಲಿ ಸಿನಿಮಾ ನೋಡುವ ಅವಕಾಶ ಕಲ್ಪಿಸಿದೆ. ಯಾವುದೇ ಸಬ್ ಸ್ಕ್ರೈಬ್ (Subscribing) ಆಗದೇ. ಹಣ ನೀಡದೆ ಸುಮಾರು 72 ಗಂಟೆಗಳ ಕಾಲ ನೀವು ಜೀ5ಗೆ ಲಾಗಿನ್ ಆಗಿ ಸಿನಿಮಾ ವೀಕ್ಷಣೆ ಮಾಡಬಹುದು. ಇದಕ್ಕಾಗಿ ಜೀ5 ಅಭಿಮಾನವನ್ನೇ ಹಮ್ಮಿಕೊಂಡಿದೆ. ಜೀ5 ಒಟಿಟಿಯಲ್ಲಿರುವ ಬರೋಬ್ಬರಿ 60 ಕ್ಕೂ ಹೆಚ್ಚು ವಿವಿಧ ಭಾಷೆ ಸಿನಿಮಾಗಳ‌ ಜೊತೆಗೆ ವೆಬ್ ಸೀರೀಸ್ ನ್ನು ನೀವು ಯಾವುದೇ ಹಣ ಪೇ‌ ಮಾಡದೆ ನೋಡಿ ಎಂಜಾಯ್ ಮಾಡಬಹುದು. ಜೀ5 ಸೂಪರ್ ಹಿಟ್ ಪಟ್ಟಿಯಲ್ಲಿರುವ ಕನ್ನಡ ಸಿನಿಮಾಗಳು ಅಂದ್ರೆ‌ ಕುರುಕ್ಷೇತ್ರ, ಹೀರೋ, ಕಾಳಿದಾಸ ಕನ್ನಡ‌‌ ಮೇಷ್ಟ್ರು, ದಿ ವಿಲನ್, ಕೆಮಿಸ್ಟ್ರಿ ಆಫ್ ಕರಿಯಪ್ಪ ಈ ಸಿನಿಮಾಗಳ ಜೊತೆಗೆ ವೆಬ್ ಸೀರೀಸ್ ಪಟ್ಟಿಯಲ್ಲಿ ಕೈಲಾಸಪುರ, ಹೈ ಪ್ರಿಸ್ಟ್ ಗಳಿವೆ. ಹಾಗಿದ್ರೆ ಮತ್ಯಾಕೆ ತಡ ಜೀ5 ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ ಲಾಗಿನ್ ಆಗಿ ಆ್ಯಪ್ ನಮ್ಮದು ಮನರಂಜನೆ ನಿಮ್ಮದು.

- Advertisement -

Latest Posts

Don't Miss