Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿ ನಡೆಸಿದ್ದು, ರಾಜ್ಯದ ಪ್ರವಾಸೋದ್ಯಮವನ್ನು ವಿಶ್ವಕ್ಕೆ ಪರಿಚಯಿಸುವ ದೃಷ್ಟಿಯಿಂದ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಕರ್ನಾಟಕ ಇಂಟರ್ ನ್ಯಾಶನಲ್ ಟ್ರಾವೆಲ್ ಎಕ್ಸಪೋ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಫೆ 26ರ ಸಂಜೆ ಸಿಎಂ ಸಿದ್ಧರಾಮಯ್ಯರಿಂದ ಚಾಲನೆ ಮಾಡಲಾಗುತ್ತದೆ. 26, 27,28 ಒಟ್ಟು ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮ. ತುಮಕೂರು ರಸ್ತೆಯ ಬಿಐಇಸಿ ವಸ್ತುಪ್ರದರ್ಶನ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಅಸಂಖ್ಯಾತ ಪ್ರವಾಸಿ ತಾಣಗಳಿವೆ. 25 ಸಾವಿರಕ್ಕಿಂತ ಹೆಚ್ಚು ಪ್ರವಾಸಿ ತಾಣಗಳ ಮಾಹಿತಿಯಿದೆ. ಇದರಲ್ಲಿ 8 ನೂರು ಮಾತ್ರ ನಾವು ರಕ್ಷಣೆ ಮಾಡಿದ್ದೇವೆ. ನಮ್ಮ ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಬೇಕು. ಈ ಮೂಲಕ ಪ್ರವಾಸೋದ್ಯಮದ ಮೂಲಕ ವಾಣಿಜ್ಯ,ವ್ಯಾಪಾರಕ್ಕೆ ಉತ್ತೇಜನ ನೀಡುವ ಉದ್ದೇಶವಿದೆ. ಕೇಂದ್ರ ಪ್ರವಾಸ ಇಲಾಖೆಯ ಸಹಕಾರ ಸಹ ಕಾರ್ಯಕ್ರಮಕ್ಕೆಯಿದೆ. ಹೋಟೆಲ್ ಉದ್ಯಮಿಗಳು, ಲಾಡ್ಜ್, ವಸತಿ, ಹೋಂ ಸ್ಟೇ, ಟ್ರಾವೆಲ್ ಉದ್ಯಮಿಗಳು. ಟ್ರಾವೆಲ್ ಪ್ರೇಮಿಗಳು ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಪೊಕ್ಸೋ ಕೇಸ್ ಹಾಕಿದ್ದು ವಿಕೃತ ಮನಸ್ಸು. ವಿಕೃತ ಮನಸ್ಸು ಇದ್ದವರು ಹೀಗೆ ಮಾಡ್ತಾರೆ. ಅಲ್ಲಿಯ ವಾತವರಣ ಕೆಡಿಸೋರ ಮಟ್ಟ ಹಾಕ್ತೀವಿ. ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೆ. ಬೆಳಗಾವಿಯಲ್ಲಿ ಪದೇ ಪದೇ ಈ ತರಹದ ಘಟನೆ ಆಗುತ್ತಿವೆ. ಆದ್ರೆ ಸರ್ಕಾರ ಇಂತಹ ಪ್ರಕರಣಗಳನ್ನ ಮಟ್ಟ ಹಾಕಲು ತಯಾರಿದೆ ಎಂದು ಸಚಿವರು ಆಕ್ರೋಶ ಹೊರಹಾಕಿದ್ದಾರೆ.
ನಾಯಕತ್ವದ ವಿಚಾರವಾಗಿ ಡಿಕೆ ಶಿವಕುಮಾರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಬಾಸ್ ಮಲ್ಲಿಕಾರ್ಜುನ ಖರ್ಗೆ. ಅವರು ಯಾರ ಬಗ್ಗೆಯೂ ಮಾತನಾಡಬೇಡಿ ಅಂದಿದ್ದಾರೆ ಅವರು ಹೇಳಿದ ಮೇಲೆ ಮಾತನಾಡಲ್ಲ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು ಎಂದು ಸಚಿವರು ಹೇಳಿದ್ದಾರೆ.
ನೀವು ಕೂಡ ಕೆಪಿಸಿಸಿ ನಾಯಕರು ಆಗಬೇಕೆನ್ನುವುದು ಉತ್ತರ ಕರ್ನಾಟಕ ಬೆಂಬಲಿಗರು ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪಾಟೀಲರು, ಮಲ್ಲಿಕಾರ್ಜುನ ಖರ್ಗೆ ಬಂದಾಗ ಈ ಪ್ರಶ್ನೆ ಕೇಳಿ ಎಂದು ಉತ್ತರಿಸಿದ್ದಾರೆ.