Wednesday, February 5, 2025

Latest Posts

ಬಡವರಿಗೆ ಭೂಮಿ ಕೊಟ್ಟವರು ನಾವು, ವಕ್ಪ್ ಹೆಸರಲ್ಲಿ ಭೂಮಿ ಕಬಳಿಸೋದಿಲ್ಲ: ಸಚಿವ ಸಂತೋಷ ಲಾಡ್

- Advertisement -

Hubli News: ಹುಬ್ಬಳ್ಳಿ: ಬಡವರಿಗೆ ಭೂಮಿ ಕೊಟ್ಟವರು ಕಾಂಗ್ರೆಸ್ಸಿನವರು.ಉಳುವವನೆ ಭೂಮಿ ಒಡೆಯ ಕಾರ್ಯಕ್ರಮ ಮಾಡಿದ್ದೆ ಕಾಂಗ್ರೇಸ್. ಬಿಜೆಪಿ ಅವಾಗ ಸಾಹುಕಾರ ಪರವಾಗಿ ಕಾರ್ಯಕ್ರಮಕ್ಕೆ ವಿರೋಧ ಮಾಡಿದ್ದರು ಎಂದು ಹುಬ್ಬಳ್ಳಿಯಲ್ಲಿ ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಬಾಂನಂತೀಯರ ಸಾವು ವಿಚಾರಕ್ಕೆ ಸಂಬಂಧ ಪಟ್ಟ ಸಚಿವರು ಉತ್ತರ ಕೊಟ್ಟಿದ್ದಾರೆ. ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲಾ ಎಂದರು.

ವಕ್ಫ ವಿರೋಧಿಸಿ ಬಿಜೆಪಿಯ ಹೋರಾಟದಲ್ಲಿ ಬಣಗಳ ವಿಚಾರವಾಗಿ ಮಾತನಾಡಿದ ಅವರು, ವಕ್ಫ ವಿಚಾರದಲ್ಲಿ ಎಲ್ಲಾ ಸರ್ಕಾರಗಳು ನೋಟಿಸ್ ಕೊಟ್ಟಿವೆ. 4,567 ಬಿಜೆಪಿ ಕಾಲದಲ್ಲಿ ಮೂಟೆಷಮ್ ಚೇಂಜ್ ಆಗಿವೆ
ಇದರ ಬಗ್ಗೆ ಬಿಜೆಪಿ ಅವರು ಚರ್ಚೆ ಮಾಡ್ತಾರಾ..? ಅವರ ಕಾಲದಲ್ಲಿ, ನಮ್ಮ ಕಾಲದಲ್ಲಿ ಎಷ್ಟು ನೋಟಸ್ ಆಗಿವೆ.

ಇದರ ಬಗ್ಗೆ ಸರ್ಕಾರ ಆದಷ್ಟು ಬೇಗ ಉತ್ತರ ಕೊಡುತ್ತೆ. ಬಿಜೆಪಿ ಅವರು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ದರು. ಬೆಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡಿದ್ರು ಎಲ್ಲಿಯೂ ಕ್ಲಿಕ್ ಆಗಲ್ಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ಬಗ್ಗೆ ವಿಚಾರ ಮಾಡದೇ ರಾಜಕೀಯವಾಗಿ ಮಾಡ್ತಾರೆ. ಸಾವಿರಾರು ಎಕರೆ ಇದ್ದವರ ಬಳಿಯಿಂದ ಇಂದಿರಾಗಾಂಧಿ ಬಡವರಿಗೆ ಕೊಡಿಸಿದರು. ನಾವ್ಯಾಕೆ ಬಡವರ ಭೂಮಿಗಳನ್ನು ತೆಗೆದುಕೊಳ್ಳೋಣ? ರೈತರಿಗೆ ಸಮಸ್ಯೆ ಆದ್ರೆ ನಾವು ಸರಿ ಪಡಿಸ್ತೀವೆ ಅಂತ ಸಿಎಂ ಸ್ಪಷ್ಟಿಕರಣ ಕೂಡ ಕೊಟ್ಟಿದ್ದಾರೆ ಎಂದ ಅವರು, ಇವರ ಕಾಲದಲ್ಲಿ ಆಗಿರುವ 4,567ರ ಬಗ್ಗೆ ಸಮೀಕ್ಷೆ ಮಾಡುತ್ತಾರಂತಾ.? ಎಂದು ಪ್ರಶ್ನಿಸಿದರು.

- Advertisement -

Latest Posts

Don't Miss