ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ ಸ್ಯಾಂಡಲ್‌ವುಡ್ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅಫೇರ್ ಹೊಂದಿದ ಬಗ್ಗೆ ಸುದ್ದಿಯಾಗಿತ್ತು. ಅದನ್ನ ನರೇಶ್ ಅವರ ಮೂರನೇ ಪತ್ನಿ ರಮ್ಯಾ ಖಂಡಿಸಿದ್ದರು. ಮತ್ತು ಕನ್ನಡೃ ಮಾಧ್ಯಮಗಳ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದರು. ಇದಾಗಿ ಕೆಲ ದಿನಗಳಲ್ಲೇ, ನರೇಶ್ ಮತ್ತು ಪವಿತ್ರಾ ಮದುವೆಯಾಗಿದ್ದಾರೆ. ದುಬೈಗೆ ಹನಿಮೂನ್‌ಗೆ ಹೋಗಿದ್ದಾರೆ ಎಂದು ಸುದ್ದಿಯಾಗಿತ್ತು.
ಆದ್ರೆ ಅದು ಸಿನಿಮಾ ಚಿತ್ರೀಕರಣವಾಗಿದ್ದು, ಆ ಸಿನಿಮಾ ಟೀಸರ್ ಈಗ ರಿಲೀಸ್ ಆಗಿದೆ. ಮತ್ತೆ ಮದುವೆ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ರಮ್ಯಾ ಯಾವ ರೀತಿ, ತಮ್ಮ ಪತಿಗಾಗಿ, ಮಗನ ಭವಿಷ್ಯಕ್ಕಾಗಿ ಹೋರಾಟ ಮಾಡಿದ್ದರೋ, ಅದೇ ರೀತಿ ಚಿತ್ರೀಕರಿಸಲಾಗಿದೆ. ಅಲ್ಲದೇ, ರಿಯಲ್ ಲೈಫ್‌ನಲ್ಲಿ ನರೇಶ್- ಪವಿತ್ರಾ ಹೇಗೆ ಬಿಹೇವ್ ಮಾಡಿದ್ದರೋ, ಅದೇ ರೀತಿ ಲಾಡ್ಜ್ ದೃಶ್ಯವನ್ನ ರಿಕ್ರಿಯೇಟ್ ಮಾಡಲಾಗಿದೆ.
ವೀಡಿಯೋ ಕೃಪೆ: Adithya Music Kannada