Wednesday, April 16, 2025

Latest Posts

ಪೊಲಾರ್ಡ್ ವಿಶ್ವ ದಾಖಲೆ…!

- Advertisement -

ಟಿ-20 ಕ್ರಿಕೆಟ್‌ನ ಅತ್ಯಂತ ಜನಪ್ರಿಯ ಆಟಗಾರ ವೆಸ್ಟ್ ಇಂಡೀಸ್‌ನ ಪ್ರಮುಖ ಆಲ್ ರೌಂಡರ್ ಕೆರೆನ್ ಪೊಲಾರ್ಡ್ ಟಿ-20 ಮಾದರಿಯಲ್ಲಿ ಹೊಸ ವಿಶ್ವ ದಾಖಲೆ ಬರೆದ್ದಿದ್ದಾರೆ .

10.000 ರನ್ ಜೊತೆಗೆ 300 ವಿಕೆಟ್ ಪಡೆದ ವಿಶ್ವದ ಮೊದಲ ಆಟಗಾರ ಅನ್ನೋ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಮಂಗಳವಾರ ನೆಡೆದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಕೆ ಎಲ್ ರಾಹುಲ್ ವಿಕೆಟ್ ಪಡೆಯುವ ಮೂಲಕ 300 ವಿಕೆಟ್ ಪಡೆದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಪೊಲಾರ್ಡ್ ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು ವಿಶ್ವದ ವಿವಿಧ 25 ದೇಶಗಳ ಪ್ರಾಂಚೈಸಿಗಳ ಜೊತೆ ಸೇರಿ ಒಟ್ಟು 565 ಪಂದ್ಯಗಳನ್ನು ಆಡಿದ್ದು 11,000ಕ್ಕೂ ಅಧಿಕ ರನ್ ಮತ್ತು 300 ವಿಕೆಟ್ ಪಡೆದಿದ್ದಾರೆ.

- Advertisement -

Latest Posts

Don't Miss