Tuesday, June 3, 2025

Latest Posts

ಹೊಟೇಲ್ ಉದ್ಯಮದಲ್ಲಿ ನಷ್ಟವಾಗಲು ಕಾರಣಗಳೇನು..? ಭಾಗ 1

- Advertisement -

ಹೊಟೇಲ್ ಉದ್ಯಮ ಮಾಡಬೇಕು ಅನ್ನೋದು ಹಲವರ ಕನಸು. ಹಲವಾರು ಜನ ಹೊಟೇಲ್ ಶುರು ಮಾಡಬೇಕು ಅಂತಾ ಬಯಸುತ್ತಾರೆ. ಆದ್ರೆ ಅದಕ್ಕಾಗಿ ಸರಿಯಾಗಿ ಪ್ಲಾನ್ ಮಾಡಿರುವುದಿಲ್ಲ. ಹಾಗಾಗಿ ಹೊಟೇಲ್ ಶುರುವಾದ ಕೆಲ ತಿಂಗಳಲ್ಲೇ ಕ್ಲೋಸ್ ಆಗೋದು. ಹಾಗಾಗಿ ಇಂದು ನಾವು ಹೊಟೇಲ್ ಉದ್ಯಮದಲ್ಲಿ ನಷ್ಟವಾಗಲು ಕಾರಣವೇನು ಅಂತಾ ಹೇಳಲಿದ್ದೇವೆ.

ಮೊದಲ ಕಾರಣ, ಬಂಡವಾಳದ ಬಗ್ಗೆ ಯೋಚಿಸದೇ, ಹೊಟೇಲ್ ತೆರೆಯುವುದು. ಹೊಟೇಲ್ ಓಪೆನ್ ಮಾಡುವಾಗ ಮೊದಲು ಯೋಚನೆ ಮಾಡಬೇಕಾಗಿದ್ದೇ ಬಂಡವಾಳದ ಬಗ್ಗೆ. ನಾವು ಎರಡು ಭಾಗದಲ್ಲಿ ಬಂಡವಾಳವನ್ನು ವಿಂಗಡಿಸಬೇಕು. ಒಂದು ಹೊಟೇಲ್‌ಗೆ ಬೇಕಾದ ಬಂಡವಾಳ. ಇನ್ನೊಂದು ಪ್ರತೀ ತಿಂಗಳು ಖರ್ಚಾಗುವ ಬಂಡವಾಳ. ಯಾಕೆ ಈ 2 ರೀತಿಯ ಬಂಡವಾಳ ಮುಖ್ಯ ಅಂತಾ ಹೇಳ್ತೀವಿ ಕೇಳಿ.

ನಿಮ್ಮ ಮೇಲೆ ನಿಮಗೆ ಎಷ್ಟೇ ನಂಬಿಕೆ ಇದ್ದರೂ, ಬಡ್ಡಿಯ ಮೇಲೆ ಸಾಲ ತೆಗೆದು ದೊಡ್ಡ ಹೊಟೇಲ್ ಮಾತ್ರ ಓಪನ್ ಮಾಡಬೇಡಿ. ನೀವು ಕೂಡಿಟ್ಟ ಹಣದಿಂದಲೋ, ಅಥವಾ ಬಡ್ಡಿ ಇಲ್ಲದೇ, ನಿಮಗೆ ಸಾಧ್ಯವಾದಾಗ, ಸಾಲ ತೀರಿಸಬಹುದು ಎನ್ನುವವರ ಬಳಿಯೋ, ನೀವು ಸಾಲ ಮಾಡಿ, ಬಂಡವಾಳ ಹೂಡಿ. 5 ಲಕ್ಷದೊಳಗೆ ಬಂಡವಾಳ ಹೂಡಿ, ಸಣ್ಣ ಹೊಟೇಲ್ ಶುರು ಮಾಡಿದ್ರೂ ನಡೆಯುತ್ತೆ. ಆದ್ರೆ ಬಡ್ಡಿಗೆ ದುಡ್ಡು ತೆಗೆದು, ಒಮ್ಮೆಲೆ ಲಕ್ಷ ಲಕ್ಷ ಹಾಕಿ, ದೊಡ್ಡ ಹೊಟೇಲ್ ಶುರು ಮಾಡಬೇಡಿ.

ಆ ಹೊಟೇಲ್‌ಗೆ ಗ್ರಾಹಕರು ಬರದಿದ್ದರೆ, ನಷ್ಟವಾಗತ್ತೆ. ಹಾಗೆ ನಷ್ಟವಾದಾಗ ಧೈರ್ಯದಿಂದ ನಡೆಸಬಲ್ಲೆ ಎಂದು ಹೇಳಲು, ನಿಮ್ಮ ಬಳಿ ಮತ್ತೂ ದುಡ್ಡಿರಬೇಕು. ಅದಕ್ಕಾಗಿ ನೀವು ನೇರವಾಗಿ ಹೊಟೇಲ್ ಉದ್ಯಮ ಮಾಡುವ ಬದಲು, ಪಾರ್ಟ್ ಟೈಮ್ ಬ್ಯುಸಿನೆಸ್ ರೀತಿ, ಹೊಟೇಲ್ ಉದ್ಯಮ ನಡೆಸಿ. ಅಂದರೆ, ಒಂದು ಕಡೆ ಕೆಲಸ ಮಾಡಿ, ಮತ್ತೊಂದು ಕಡೆ ಹೊಟೇಲ್ ನಡೆಸಿ. ಆಗ ನಿಮಗೆ ತಿಂಗಳು ತಿಂಗಳು ಸಂಬಳ ಬರುವ ಧೈರ್ಯವಾದರೂ ಇರುತ್ತೆ. ಉದ್ಯಮ ಕೈ ಹಿಡಿದ ಬಳಿಕ, ಸಾಲ ತೀರಿಸಿದ ಬಳಿಕ, ನೀವು ಕೆಲಸ ಬಿಡಬಹುದು.

ಎರಡನೇಯ ಕಾರಣ, ಸರಿಯಾದ ಜಾಗದಲ್ಲಿ ಹೊಟೇಲ್ ಇಡದಿರುವುದು. ಹೊಟೇಲನ್ನ ಕಾಲೇಜು, ಮಾರುಕಟ್ಟೆ, ಪ್ರಸಿದ್ಧ ದೇವಸ್ಥಾನ, ಸಿನಿಮಾ ಟಾಕೀಸ್ ಎದುರು. ಹೆಚ್ಚು ಆಫೀಸ್ ಇರುವ ಜಾಗದಲ್ಲಿ, ಹೊಟೇಲ್ ಶುರು ಮಾಡಬೇಕು. ಅದನ್ನು ಬಿಟ್ಟು ಕಡಿಮೆ ಬಾಡಿಗೆಗೆ ಹೆಚ್ಚು ಜನರು ಓಡಾಡದ ಜಾಗದಲ್ಲಿ ಹೊಟೇಲ್ ಇಟ್ಟರೆ, ಅದರಿಂದ ನಿಮಗೇನೂ ಲಾಭವಾಗುವುದಿಲ್ಲ. ಹಾಗಾಗಿ ಜನಜಂಗುಳಿ ಇರುವ ಪ್ರದೇಶದಲ್ಲೇ ನಿಮ್ಮ ಹೊಟೇಲ್‌ ಇರಲಿ.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

ರಿಬ್ಬನ್ ಪಕೋಡಾ ಮಾಡೋದು ಹೇಗೆ ಗೊತ್ತಾ..?

ಹಲ್ಲಿನ ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ..

ಖರ್ಜೂರ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..?

- Advertisement -

Latest Posts

Don't Miss