ಜಂತುಹುಳುಗಳು ಅಂದ್ರೇನು..? ಇವು ಯಾವ ರೀತಿ ತೊಂದರೆ ನೀಡುತ್ತದೆ..?

Health Tips: ವೈದ್ಯರಾದ ಡಾ.ಆಂಜೀನಪ್ಪ ಅವರು, ಜಂತುಹುಳುವಿನ ಬಗ್ಗೆ, ಅದರಲ್ಲಿ ಎಷ್ಟು ವಿಧಗಳಿದೆ ಎನ್ನುವ ಬಗ್ಗೆ ಮತ್ತು ಜಂತುಹುಳವಿರುವುದರಿಂದ ನಮಗಾಗುವ ಆರೋಗ್ಯ ಸಮಸ್ಯೆಗಳು ಏನೇನು ಅನ್ನುವ ಬಗ್ಗೆ ವಿವರಿಸಿದ್ದಾರೆ. ಇಂದು ವೈದ್ಯರು, ಜಂತುಹುಳ ಅಂದ್ರೇನು ಅಂತಾ ವಿವರಿಸಿದ್ದಾರೆ ನೋಡಿ..

ಜಂತುಹುಳ ಅಂದ್ರೆ ಮಕ್ಕಳ ಬೆಳವಣಿಗೆಗೆ ಕುಂಠಿತವಾಗುವ, ದೇಹದ ಒಳಗಿರುವ ಹುಳ. ಯಾರು ಸರಿಯಾಗಿ ಜಂತು ಹುಳದ ಮಾತ್ರೆ ತೆಗೆದುಕೊಳ್ಳುವುದಿಲ್ಲವೋ, ಅಂಥವರ ಹೊಟ್ಟೆಯಲ್ಲಿ ಜಂತುಹುಳವಾಗುತ್ತದೆ. ಹಾಗಾಗಿ ವರ್ಷಕ್ಕೆ ಎರಡು ಬಾರಿ ವೈದ್ಯರ ಸಲಹೆಯಂತೆ, ಜಂತು ಹುಳುವಿನ ಮಾತ್ರೆ ತೆಗೆದುಕೊಳ್ಳಬೇಕು.

ಏಕೆಂದರೆ ದೇಹದಲ್ಲಿ ಜಂತುಹುಳವಿದ್ದರೆ, ಅದರಿಂದ ಮಕ್ಕಳ ಬೆಳವಣಿಗೆಯಾಗುವುದಿಲ್ಲ. ಏಕೆಂದರೆ ಮಕ್ಕಳು ತಿಂದ ಆಹಾರಗಳು, ಜಂತುಹುಳಗಳ ಪಾಲಾಗುತ್ತದೆ. ಕೊಕ್ಕೆ ಹುಳುವಿದ್ದಲ್ಲಿ, ಆ ಹುಳ ಮನುಷ್ಯನ ರಕ್ತ ಕುಡಿದು, ಅನಿಮಿಯಾ ಬರುವುದಕ್ಕೆ ಕಾರಣವಾಗುತ್ತದೆ. ಅಲ್ಲದೇ, ಹೆಚ್ಚು ಜಂತುಹುಳುಗಳು ನಮ್ಮ ಹೊಟ್ಟೆಯಲ್ಲಿದ್ದಾಗ, ಅದು ಒಂದಕ್ಕೊಂದು ಕಟ್ಟಿಕೊಂಡು ಬಾಲ್ ರೀತಿಯಾಗಿ, ನಮ್ಮ ಕರುಳನ್ನು ಸುತ್ತಿಕೊಳ್ಳುತ್ತದೆ. ಆಗ ನಾವು ತಿಂದ ಆಹಾರ ನಮ್ಮ ದೇಹ ಸೇರಲು ಸಾಧ್ಯವಾಗುವುದಿಲ್ಲ.

ಇಷ್ಟೇ ಅಲ್ಲದೇ, ಹೊಟ್ಟೆಯಲ್ಲಿ ಜಂತುಹುಳುವಿನ ಸಂಖ್ಯೆ ಹೆಚ್ಚಾದರೆ, ಅದು ಮೂಗು, ಬಾಯಿ, ಕಿವಿಯಿಂದಲೂ ದೇಹದ ಹೊರಗೆ ಬರುತ್ತದೆ. ದೇಹದಲ್ಲಿ ಜಂತುಹುಳುವಿನ ಕಾಟ ಹೆಚ್ಚಾಗಿದ್ದಲ್ಲಿ, ವಾಂತಿ-ಬೇಧಿಯಾಗಿ, ಮನುಷ್ಯನ ಪ್ರಾಣಕ್ಕೆ ಹಾನಿಯಾಗುತ್ತದೆ. ಹಾಗಾಗಿ ಹೊಟ್ಟೆ ನೋವು ಶುರುವಾಗುತ್ತಲೇ, ನೀವು ವೈದ್ಯರ ಸಲಹೆ ಪಡೆದು, ಜಂತಿನ ಮಾತ್ರೆ ತೆಗೆದುಕೊಳ್ಳುವುದು ಉತ್ತಮ.

Covid Positive ಆಗಿತ್ತಾ..? ಹಾಗಾದ್ರೆ Be carefull..

ಮುಟ್ಟಿನ ಸಮಯದಲ್ಲಿ ಶುಚಿತ್ವ ಹೇಗಿರಬೇಕು..?

About The Author