Saturday, July 27, 2024

Latest Posts

ಚಿಕ್ಕ ಮಕ್ಕಳಲ್ಲೂ ಬಿಪಿ ಕಾಣಿಸಿಕೊಳ್ಳಲು ಕಾರಣವೇನು..?

- Advertisement -

Health Tips: ಹಿಂದಿನ ಕಾಲದಲ್ಲಿ ಬಿಪಿ, ಶುಗರ್ ಇದೆಲ್ಲ ಶ್ರೀಮಂತರ ಖಾಯಿಲೆಗಳು ಅಂತಾ ಹೇಳುತ್ತಿದ್ದರು. ಆದ್ರೆ ಇಂದಿನ ಕಾಲದಲ್ಲಿ ಎಲ್ಲರಿಗೂ ಬಿಪಿ ಶುಗರ್ ಖಾಯಿಲೆ ಬರುವುದು ಕಾಮನ್ ಆಗಿದೆ. ಅಲ್ಲದೇ, ಪುಟ್ಟ ಮಕ್ಕಳಿಗೂ ಬಿಪಿ ಶುಗರ್ ಸಮಸ್ಯೆ ಶುರುವಾಗಿದೆ. ಹಾಗಾದ್ರೆ ಚಿಕ್ಕ ಮಕ್ಕಳಲ್ಲೂ ಬಿಪಿ ಕಾಣಿಸಿಕೊಳ್ಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ವೈದ್ಯರು ಹೇಳುವ ಪ್ರಕಾರ, ನಾವು ಸೇವಿಸುವ ಆಹಾರ, ಮತ್ತು ನಮ್ಮ ಜೀವನಶೈಲಿಯೂ ಇದಕ್ಕೆ ಮುಖ್ಯ ಕಾರಣವಾಗಿದೆ. ಹಳೆ ಕಾಲದಲ್ಲಿ ಮಕ್ಕಳಿಗೆ ಆರೋಗ್ಯಕರವಾದ ಆಹಾರವನ್ನು ಸೇವಿಸಲು ಕೊಡಲಾಗುತ್ತಿತ್ತು. ಆದರೆ ಇಂದಿನ ಕಾಲದ ಆಹಾರ ಅಷ್ಟು ಆರೋಗ್ಯಕರವಾಾಗಿಲ್ಲ. ಅಲ್ಲದೇ ಆಗಿನ ಕಾಲದಲ್ಲಿ ಹಲವು ಕಡೆ ಪ್ರಯಾಣಿಸಲು ನಡೆದೇ ಹೋಗಬೇಕಿತ್ತು.

ಹಾಗಾಗಿ ಮೊದಲೆಲ್ಲ ಬಿಪಿ ಶುಗರ್‌ನಂಥ ಖಾಯಿಲೆಗಳು ಬರುತ್ತಿರಲಿಲ್ಲ. ಆದರೆ ಈಗ ರೆಡಿ ಟೂ ಈಟ್ ತರಹದ ತಿಂಡಿಗಳು ಬರುತ್ತಿದೆ. ಅಲ್ಲದೇ, ಓಡಾಡಲು ಬೈಕ್, ಕಾರ್ ಎಲ್ಲವೂ ಇದೆ. ಹಾಗಾಗಿ ಇಂದಿನ ಮಕ್ಕಳಿಗೆ ಆರೋಗ್ಯಕರ ಆಹಾರದ ಜೊತೆ ನಡೆದಾಡುವ ಕೊರತೆಯೂ ಇದೆ. ಅಲ್ಲದೇ ಮೊಬೈಲ್, ಲ್ಯಾಪ್‌ಟಾಪ್‌ನಂಥ ವಸ್ತುಗಳ ಬಳಕೆ ಮಾಡುವಾಗ, ಹೆಚ್ಚು ಹೊತ್ತು ಕುಳಿತಲ್ಲೇ ಕುಳಿತುಕೊಳ್ಳಬೇಕಾಗಿದೆ.

ಹೀಗಾಗಿ ಇಂದಿನ ಕಾಲದಲ್ಲಿ ಮಕ್ಕಳಿಗೆ ಮತ್ತು ಯಂಗ್ ಆಗಿರುವವರಿಗೂ ಬಿಪಿ ಶುಗರ್ ಬರುತ್ತಿದೆ. ಈ ಬಗ್ಗೆಇನನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss