Wednesday, April 24, 2024

Latest Posts

ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

- Advertisement -

Bengaluru News: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಆಗಿದ್ದು, ತನಿಖಾ ದಳದವರು ಬಂದು ಇದು ಸಿಲಿಂಡರ್ ಅಥವಾ ಬಾಯ್ಲರ್ ಬ್ಲಾಸ್ಟ್ ಆಗಿದ್ದಲ್ಲ. ಬದಲಾಗಿ, ಹೊರಗಿನವರು ಬಂದು, ಬ್ಲಾಸ್ಟ್ ಮಾಡಿದ್ದೆಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ನನಗಿರುವ ಮಾಹಿತಿ ಪ್ರಕಾರ, 12 ಗಂಟೆಯ ಬಳಿಕ, ಬ್ಯಾಗ್‌ನಲ್ಲಿ ಸ್ಪೋಟಕ ವಸ್ಟು ಇಟ್ಟು ಹೋಗಿದ್ದು. ಆ ವಸ್ತು ಬ್ಲಾಸ್ಟ್ ಆಗಿದೆ. ಅಲ್ಲೇ ತಿಂಡಿ ತಿನ್ನುತ್ತಿದ್ದ 8 ಮಂದಿಗೆ ಗಾಯವಾಗಿದೆ. ಆದರೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾರೋ ಓರ್ವ ಬಂದು ಬ್ಯಾಗ್ ಇಟ್ಟು ಹೋದ ಬಳಿಕ, ಬ್ಲಾಸ್ಟ್ ಆಗಿದ್ದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ಅಲ್ಲದೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಈ ಬಗ್ಗೆ ಗೃಹಮಂತ್ರಿಗೂ ಕೂಡ ಸ್ಥಳಕ್ಕೆ ಹೋಗಲು ಹೇಳಲಾಗಿದೆ. ಭಾರೀ ಪ್ರಮಾಣದ ಬ್ಲಾಸ್ಟ್ ಅಲ್ಲದಿದ್ದರೂ, ಸಣ್ಣ ಪ್ರಮಾಣದ ಬ್ಲಾಸ್ಟ್ ಆಗಿದ್ದರೂ, ಇಂಪ್ರುವೈಸ್ಡ್ ಬ್ಲಾಸ್ಟ್. ಕೆಲ ಹೊತ್ತಲ್ಲೇ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆಂದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ದೇಶದ ಜನ ಬಿಜೆಪಿಗೆ ಯಾಕೆ ಓಟ್ ಹಾಕಬೇಕು..? ಸಿ.ಟಿ.ರವಿ ಹೇಳಿದ್ದೇನು..?

ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು

ಇಂಥ ಆದೇಶ ನೀಡಿರುವ ಕಾಂಗ್ರೆಸ್ ವಿಕೃತ ಮನಸ್ಥಿತಿಯ ಪ್ರತೀಕ: ಸಂಸದ ತೇಜಸ್ವಿ ಸೂರ್ಯ

- Advertisement -

Latest Posts

Don't Miss