Thursday, November 13, 2025

Latest Posts

ಕಿಂಗ್ ಕೊಹ್ಲಿ 50ನೇ ಶತಕ ಸಿಡಿಸಿದ್ದಕ್ಕೆ ಕ್ರಿಕೇಟ್ ದೇವರು ಹೇಳಿದ್ದೇನು..?

- Advertisement -

Cricket News: ಅಂತಾರಾಷ್ಟ್ರೀಯ ಏಕದಿನ ಕ್ರಿಕೇಟ್‌ನಲ್ಲಿ 50ನೇ ಶತಕ ಸಿಡಿಸುವ ಮೂಲಕ, ಕೊಹ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದ್ದಾರೆ. ಹಾಗಾಗಿ ಜನಸಾಮಾನ್ಯರಿಂದ ಹಿಡಿದು, ಸೆಲೆಬ್ರಿಟಿ, ರಾಜಕೀಯ ಗಣ್ಯರು ಕೂಡ ಕೊಹ್ಲಿಗೆ ಶುಭಾಶಯ ತಿಳಿಸಿದ್ದಾರೆ.

ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಇಂದು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಪಂದ್ಯ ನಡೆದಿದ್ದು, ಈ ವೇಳೆ ಕಿಂಗ್ ಕೊಹ್ಲಿ 50ನೇಯ ಶತಕ ಸಿಡಿಸಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕ್ರಿಕೇಟ್ ದೇವರು ಸಚಿನ ತೆಂಡೂಲ್ಕರ್, ಅಂದು ನಾನು ನಿಮ್ಮನ್ನು ಮೊದಲ ಬಾರಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ, ನನ್ನ ಪಾದಕ್ಕೆ ನಮಸ್ಕರಿಸುವಂತೆ, ಇತರ ಕ್ರಿಕೇಟ್ ಆಟಗಾರರು ನಿಮಗೆ ತಮಾಷೆ ಮಾಡಿದ್ದರು.

ಆ ದಿನ ನನಗೆ ನಗು ತಡೆಯಲಾಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ನೀವು ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ನನ್ನ ಮನಸ್ಸು ಗೆದ್ದಿದ್ದೀರಿ. ಚಿಕ್ಕ ಹುಡುಗ ವಿರಾಟ್, ದೊಡ್ಡ ಆಟಗಾರನಾಗಿ ಬೆಳೆದಿದ್ದಕ್ಕೆ ನನಗೆ ಖುಷಿ ಇದೆ. ಒಬ್ಬ ಭಾರತೀಯ ನನ್ನ ದಾಖಲೆ ಮುರಿದಿದ್ದು, ಇದಕ್ಕಿಂತ ಹೆಚ್ಚು ಖುಷಿಯ ವಿಷಯ ಮತ್ತೊಂದಿಲ್ಲ. ಅದು ಕೂಡ ಇಷ್ಟು ದೊಡ್ಡ ವೇದಿಕೆಯಲ್ಲಿ. ನನ್ನ ತವರೂರಿನಲ್ಲಿ ಈ ಆಟ ನಡೆದಿದ್ದು, ನನ್ನ ಸಂಭ್ರಮವನ್ನು ಹೆಚ್ಚಿಸಿದೆ ಎಂದಿದ್ದಾರೆ.

Crime News: ಉಡುಪಿ ತಾಯಿ- ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆ ಬಂಧನ

ಸಾಕು ನಾಯಿ ಕಚ್ಚಿದ ಪ್ರಕರಣ: 15 ನಿಮಿಷ ವಿಚಾರಣೆಗೆ ಹಾಜರಾದ ನಟ ದರ್ಶನ್

”ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ’ ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ’

- Advertisement -

Latest Posts

Don't Miss