Tuesday, April 15, 2025

Latest Posts

ನಟ ಜಗ್ಗೇಶ್ ನಿಂದನೆಗೆ ವರ್ತೂರು ಸಂತೋಷ್ ಹೇಳಿದ್ದೇನು..?

- Advertisement -

Movie News: ವರ್ತೂರು ಸಂತೋಷ್ ಬಿಗ್‌ಬಾಸ್‌ಗೆ ಬರುವುದಕ್ಕಿಂತ ಮುಂಚೆ, ಸಾಮಾಜಿಕ ಜಾಲತಾಣದಲ್ಲಿ ಕೆಲವೇ ಕೆಲವರಿಗೆ ಅವರ್ಯಾರು ಅಂತಾ ಗೊತ್ತಿತ್ತು. ಆದರೆ ವರ್ತೂರು ಸಂತೋಷ್ ಬಿಗ್‌ಬಾಸ್‌ಗೆ ಬಂದ ಬಳಿಕ, ಯಾವ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲವೆಂಬಂತೆ ಫೇಮಸ್ ಆಗಿದ್ದಾರೆ. ಹೋದಲೆಲ್ಲ ಅವರ ಫ್ಯಾನ್ಸ್ ಅವರ ಬಳಿ ಸೆಲ್ಫಿ ಕೇಳುತ್ತಿದ್ದಾರೆ.

ಆದರೆ ಕೆಲ ದಿನಗಳ ಹಿಂದೆ ನಟ ಜಗ್ಗೇಶ್ ಹುಲಿ ಉಗುರಿನ ಬಗ್ಗೆ ಮಾತನಾಡುತ್ತ, ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾಗ, ಅರಣ್ಯಾಧಿಕಾರಿಗಳು ದಾಳಿ ಮಾಡಿ, ಆ ಹುಲಿ ಉಗುರಿನ ಪೆಂಡೆಂಟ್ ವಶಪಡಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡುತ್ತ, ಹೆಸರು ಹೇಳದೇ, ಯಾವನೋ ಕಿತ್‌ಹೋದ್ ನನ್ ಮಗ ನಿಜವಾದ ಹುಲಿ ಉಗುರು ಧರಿಸಿ, ಟಿವಿಗೆ ಹೋಗಿ ತಗ್ಲಾಕೊಂಡ ಎಂದು ಹೇಳಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ರೀತಿ ಮಾತನಾಡಿರುವುದು ಸರಿಯಲ್ಲವೆಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ವರ್ತೂರು ಸಂತೋಷ್, ಕಾಲಾಯ ತಸ್ಮೈ ನಮಃ. ಎಲ್ಲದಕ್ಕೂ ನಾವು ಉತ್ತರಿಸಬೇಕು ಅಂತಿಲ್ಲ. ಕಾಲ ಉತ್ತರಿಸುತ್ತದೆ. ಸುದೀಪ್ ಅಣ್ಣನ ಕಡೆಯಿಂದ ಕೆಲ ಮಾತುಗಳನ್ನು ಕಲಿತಿದ್ದೇನೆ. ಎಲ್ಲ ಸಮಯದಲ್ಲೂ ನಾವು ಪ್ರತಿಕ್ರಿಯಿಸಲೇ ಬೇಕಂತಿಲ್ಲ. ಕೆಲವೊಮ್ಮೆ ನಾವು ಮೌನವಾಗಿರಬೇಕು ಎನ್ನುವ ಮೂಲಕ, ಜಗ್ಗೇಶ್ ಹೇಳಿಕೆಗೆ ಮೌನವಾಗಿದ್ದಾರೆ.

ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮ: ದರ್ಶನ್ ಸಹಾಯ ನೆನೆದು ಭಾವುಕರಾದ ಸಂಸದೆ ಸುಮಲತಾ ಅಂಬರೀಷ್

ಕರಿಮಣಿ ಮಾಲೀಕ ಹಾಡು ಹಾಡಿ, ತುಳು ಹಾಡಿಗೆ ರೀಲ್ಸ್ ಮಾಡಿದ ಕಿಲಿ ಪೌಲ್..

ಕಿಂಗ್ ಚಾರ್ಲ್ಸ್‌ಗೆ ಕ್ಯಾನ್ಸರ್‌: ತಂದೆಯ ಆರೋಗ್ಯ ವಿಚಾರಿಸಲು ತೆರಳಿದ ಪ್ರಿನ್ಸ್ ಹ್ಯಾರಿ..

- Advertisement -

Latest Posts

Don't Miss