ನಾವು ಎಲ್ಲಾದ್ರೂ ಹೊರಗೆ ಹೋದಾಗ, ಅಚಾನಕ್ ಆಗಿ ಶವಯಾತ್ರೆಯನ್ನ ನೋಡ್ತೀವಿ. ಆಗ ಕೆಲವರು ಅದನ್ನ ಸುಮ್ಮನೆ ನೋಡಿ, ಹೊರಟು ಹೋಗ್ತಾರೆ. ಇನ್ನು ಕೆಲವರು ಶವಕ್ಕೆ ಕೈ ಮುಗಿದು, ಸದ್ಗತಿಗಾಗಿ ಪ್ರಾರ್ಥನೆ ಮಾಡ್ತಾರೆ. ಇದರ ಜೊತೆಗೆ ಇನ್ನೂ ಕೆಲ ಕೆಲಸಗಳನ್ನ ಮಾಡಬೇಕಾಗತ್ತೆ. ಹಾಗಾದ್ರೆ ರಸ್ತೆಯಲ್ಲಿ ಶವಯಾತ್ರೆ ನೋಡಿದಾಗ, ನಾವು ಯಾವ ಕೆಲಸವನ್ನ ಮಾಡ್ಬೇಕು..? ಯಾಕೆ ಆ ಕೆಲಸ ಮಾಡ್ಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹಲವರ ಪ್ರಕಾರ ಶವ ಯಾತ್ರೆ ನೋಡುವುದು ಅಶುಭ ಎಂದು ತಿಳಿಯಲಾಗಿದೆ. ಆದ್ರೆ ಶವಯಾತ್ರೆ ನೋಡುವುದು ಅಶುಭವಲ್ಲ. ಬದಲಾಗಿ ಶುಭ ಎನ್ನಲಾಗಿದೆ. ಹಾಗಾಗಿ ನಿಮಗೆ ಶವಯಾತ್ರೆ ಕಂಡರೆ, ಅದಕ್ಕೆ ಕೈ ಮುಗಿಯಿರಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ. ಸಾಧ್ಯವಾದಲ್ಲಿ ಆ ಶವಕ್ಕೆ ಹೆಗಲು ಕೊಡಿ. ಆ ಶವಕ್ಕೆ ಹೂವು ಹಾಕಲು ಸಾಧ್ಯವಾದರೆ ಹಾಕಿ.
ಅಂತ್ಯ ಸಮಯದಲ್ಲಿ ಪ್ರಭು ಶ್ರಿರಾಮನ ಹೆಸರು ತೆಗೆದುಕೊಂಡರೆ, ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಆದ್ರೆ ಕೆಲವೇ ಕೆಲವರು ಮಾತ್ರ, ತಮ್ಮ ಅಂತ್ಯ ಕಾಲದಲ್ಲಿ ಶ್ರೀರಾಮನ ಹೆಸರು ತೆಗೆದುಕೊಳ್ಳುತ್ತಾರೆ. ಹಾಗಾಗಿ ನಿಮಗೆ ಶವಯಾತ್ರೆ ಕಂಡಲ್ಲಿ, ನೀವು ಶ್ರೀರಾಮನನ್ನು ಜಪಿಸಿ, ಅವರ ಸದ್ಗತಿಗಾಗಿ ಪ್ರಾರ್ಥಿಸಿ.
ಇನ್ನು ಪತಿ ಇದ್ದಾಗಲೇ ಪತ್ನಿ ತೀರಿಹೋಗುವುದು, ಆ ಹೆಣ್ಣಿನ ಪುಣ್ಯದ ಫಲವಾಗಿದೆ. ಅದನ್ನ ಮುತ್ತೈದೆ ಸಾವು ಎನ್ನಲಾಗತ್ತೆ. ಹಲವು ಹೆಣ್ಣು ಮಕ್ಕಳು ಮುತ್ತೈದೆ ಸಾವಿಗಾಗಿ ಪ್ರಾರ್ಥಿಸುತ್ತಾರೆ. ನೀವೇನಾದ್ರೂ ಮುತ್ತೈದೆಯ ಶವಯಾತ್ರೆಯನ್ನ ಕಂಡಲ್ಲಿ, ಬೇರೆಯವರಿಗೆ ಕುಂಕುಮವನ್ನ ದಾನ ಮಾಡಿ. ಹೀಗೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.