ವ್ಹೀಲ್ ಚೇರ್ ರೋಮಿಯೋನ ನೋಡದಿದ್ರೆ ಖಂಡಿತಾ ಮಿಸ್ ಮಾಡ್ಕೋತೀರ..!
ಒಬ್ಬ ರಿವ್ಯೂ ಕೊಡೋಕೆ ಬಂದ ವ್ಯಕ್ತಿ, ಕೆಜಿಎಫ್ ಚೆನ್ನಾಗಿತ್ತು ಸರ್, ಅದು ಬೇರೇ ಸ್ಟೆöÊಲ್ ಸಿನಿಮಾ ಹಂಗೇ ರ‍್ಬೇಕು ಅನ್ಕೋಬೇಡಿ. ಈ ಸಿನಿಮಾ ಬಂದು ನೋಡಿ, ನಾನಂತೂ ಮತ್ತೊಂದ್ಸಾರಿ ಫ್ಯಾಮಿಲಿ ಜೊತೆ ಥಿಯೇಟರ್‌ಗೆ ಬಂದು ಸಿನಿಮಾ ನೋಡ್ತೀನಿ ಅಂತ ಹೇಳ್ತಾ ರೋಮಿಯೋನನ್ನು ಕೊಂಡಾಡ್ತಿದ್ದ. ಮತ್ತೊಬ್ಬರು ನನ್ನ ಅಪ್ಪನ ಮೇಲೆ ತುಂಬಾ ಗೌರವ ಮೂಡ್ತು ಸಾರ್ ಅಂದ್ರು. ಸಿನಿಮಾ ನೋಡಿದ ಮತ್ತೊಬ್ರು ಮಾತನಾಡ್ತಾ, ಯಾವ ವೃತ್ತೀನೂ ಕೀಳಲ್ಲ ಅಂತ ಎಷ್ಟು ಅದ್ಭುತವಾಗಿ ಹೇಳಿದಾರೆ ಸಾರ್, ಪ್ರತಿಯೊಬ್ಬರೂ ಈ ಸಿನಿಮಾ ನೋಡ್ಬೇಕು ಅಂತ ನಿರ್ದೇಶಕರನ್ನ ತಂಡವನ್ನ ಬಾಯ್ತುಂಬಾ ಹೋಗಳುತ್ತಿದ್ದಾರೆ.
ಹೀಗೆ ವ್ಹೀಲ್ ಚೇರ್ ರೋಮಿಯೋ ಸಿನಿಮಾ ನೋಡೋಕೆ ಬಂದ ಒಬ್ಬೊಬ್ಬರದ್ದೂ ಒಂದೊAದು ರೀತಿಯ ಖುಷಿ. ಒಂದು ಚಿತ್ರ ಬಂದವರಿಗೆಲ್ಲರಿಗೂ ಖುಷಿಕೊಡುತ್ತೆ ಅಂದ್ರೆ ಅಂತಹ ಸಿನಿಮಾವನ್ನು ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ನೋಡಿದ್ರೆ ಇಂತಹ ಮತ್ತೊಂದಷ್ಟು ಸಿನಿಮಾಗಳು ರ‍್ತವೆ. ಕಥೆ ಸ್ವಾಭಿಮಾನಿ, ಸ್ವಾವಲಂಬಿ ವ್ಹೀಲ್‌ಚೇರ್ ಮೇಲಿರೋ ಯುವಕನ ಕಥೆ. ರಾಮ್ ಚೇತನ್ ಇಲ್ಲಿ ಆ ರೋಮಿಯೋ, ಇನ್ನು ಮಯೂರಿ ಈ ರೋಮಿಯೋನ ಜ್ಯೂಲಿಯೆಟ್. ವ್ಹೀಲ್ ಚೇರ್ ಹುಡ್ಗನನ್ನು ಯಾರಾದ್ರೂ ಪ್ರೀತಿಸ್ತಾರಾ ಅನ್ನೋದೇ ಇಲ್ಲಿ ಇಂಟರೆಷ್ಟಿAಗ್. ಪ್ರೀತಿಸೋ ಆ ಹುಡ್ಗಿ ಕಣ್ಣಿಲ್ಲದ ವ್ಯೇಶ್ಯೆ. ಮಯೂರಿ ಅಭಿನಯ ಮನಮುಟ್ಟುವಂತಿದ್ರೆ ರಾಮ್ ಚೇತನ್ ಹೊಸ ನಟ ಅನಿಸುತ್ತಿಲ್ಲ, ಇನ್ನು ಇವರಿಬ್ಬರ ಬದುಕಿನ ಜುಗಲ್ಬಂಧಿ ಅದ್ಭುತವಾಗಿದೆ.
ಇಲ್ಲಿ ಬರೋ ಒಂದೊAದು ಪಾತ್ರಗಳು ಮನಮುಟ್ಟುವಂತಿವೆ.
ರಂಗಾಯಣ ರಘು, ಸುಚೇಂದ್ರ ಪ್ರಸಾದ್ ಅವಾರ್ಡ್ ವಿನ್ನಿಂಗ್ ಅಭಿನಯ ನೀಡಿದ್ರೆ, ತಬಲಾ ನಾಣಿ, ಗಿರಿ ಅಭಿನಯ ಚಿತ್ರಕ್ಕೆ ದೊಡ್ಡ ಶಕ್ತಿ. ಇಡೀ ಚಿತ್ರದ್ದು ಒಂದು ತೂಕವಾದರೆ ಗುರು ಕಶ್ಯಪ್ ಸಂಭಾಷಣೆಯದ್ದು ಒಂದು ತೂಕ. ಇಡೀ ಸಿನಿಮಾ ಸಂಭಾಷಣೆಯಲ್ಲೇ ಪ್ರತೀ ಕ್ಷಣವನ್ನೂ ಹಿಡಿದಿಡುತ್ತಾ ಸಾಗುತ್ತಾ ಚಿತ್ರ ನೋಡುವ ಪ್ರತೀ ಕ್ಷಣ ಮನಸ್ಸು ಮುಟ್ಟುವ ಚಿತ್ರವಾಗಿ ಮನೋರಂಜನೆಯ ಜೊತೆಗೊಂದು ಮನೋಜ್ಞ ಮೆಸೇಜ್ ನೀಡುತ್ತೆ ನಟರಾಜ್ ನಿರ್ದೇಶನಕ್ಕೆ ಫುಲ್‌ಮಾರ್ಕ್ಸ್ ಕೊಡಲೇಬೇಕು. ಕನ್ಫರ್ಮ್. ಮಯೂರಿ-ರಾಮ್ ಚೇತನ್ ಜೋಡಿಯ ರಂಗಾಯಣ ರಘು, ಗಿರಿ, ತಬಲಾ ನಾಣಿ ಅಭಿನಯದ ವ್ಹೀಲ್ ಚೇರ್ ರೋಮಿಯೋ ದಿಲ್ದಾರ್ ಮೂವಿ.
ಓಂ ಕರ್ನಾಟಕ ಟಿವಿ