Movie News: ಯಾವಾಗಲಾದರೂ ಕಿಚ್ಚ ಸುದೀಪ್, ತಮ್ಮ ಟ್ವಿಟರ್‌ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ಹೇಳುತ್ತಾರೆ. ಫ್ಯಾನ್ಸ್ ಎಂಥದ್ದೇ ಪ್ರಶ್ನೆ ಕೇಳಿದ್ರೂ, ಕಿಚ್ಚ ಅದಕ್ಕೆ ಕೂಲ್ ಆಗಿಯೇ ಉತ್ತರ ಕೊಡ್ತಾರೆ. ಅದೇ ರೀತಿ ಅವರು ಯಾವಾಗ ಈ ರೀತಿಯ ಅವಕಾಶ ಅಭಿಮಾನಿಗಳಿಗೆ ಕೊಡುತ್ತಾರೋ, ಆವಾಗೆಲ್ಲ ಅಭಿಮಾನಿಗಳು ದರ್ಶನ್ ಬಗ್ಗೆ ಪ್ರಶ್ನೆ ಕೇಳೇ ಕೇಳುತ್ತಾರೆ.
ಈಗಲೂ ಕೂಡ ಸುದೀಪ್‌ಗೆ ದರ್ಶನ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಸರ್ ನಿಮ್ಮದು ಮತ್ತು ದರ್ಶನ್ ಅವರ ಪ್ರಾಬ್ಲಮ್ ಯಾವಾಗ ಸಾಲ್ವ್ ಆಗತ್ತೆ..? ಇನ್ನು ಎಷ್ಟು ಟೈಮ್ ತೊಗೋಳ್ತೀರಾ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಕಿಚ್ಚ, ಸಮಸ್ಯೆ ಏನು ಅಂತಾ ಇನಬ್ಬರು ಹುಡುಕ್ತಾ ಇದ್ದೀವಿ ಎಂದು ಉತ್ತರಿಸಿದ್ದಾರೆ.
ಇನ್ನೊಂದು ಫ್ಯಾನ್ ಒನ್ ವರ್ಡ್ ಎಬೌಟ್ ದರ್ಶನ್ ಸರ್ ಅಂತಾ ಕೇಳಿದಾಗ, ಐ ವಿಶ್ ಹಿಮ್ ದಿ ಬೆಸ್ಟ್ ಆಲ್ವೇಸ್ ಎಂದು ಕಿಚ್ಚ ಉತ್ತರಿಸಿದ್ದಾರೆ. ಒಟ್ಟಾರೆಯಾಗಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಿಚ್ಚ, ಫ್ಯಾನ್ಸ್ ಪ್ರಶ್ನೆಗೆ ಕೂಲ್ ಆಗಿಯೇ ಉತ್ತರಿಸಿದ್ದಾರೆ.
ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಬಂದು ನಟಿಯರೊಂದಿಗೆ ಪಾರ್ಟಿ ಮಾಡಿದ Vicky Jain
ಬಾಯ್‌ಫ್ರೆಂಡ್‌ನೊಂದಿಗೆ ಶವವಾಗಿ ಪತ್ತೆಯಾದ ನೀಲಿ ಚಿತ್ರ ತಾರೆ Jesse Jane