Tuesday, October 22, 2024

Latest Posts

ಯಾವ ಎಣ್ಣೆ ಸೇವಿಸಿದರೆ ಆರೋಗ್ಯಕ್ಕೆ ಒಳೆಯದು.

- Advertisement -

ಆರೋಗ್ಯಕ್ಕೆ ಮತ್ತು ಅಡುಗೆಗೆ ಯಾವ ಎಣ್ಣೆ ಉತ್ತಮ. ಅಡುಗೆ ಮಾಡುವುದಕ್ಕೆ ಯಾವ ಎಣ್ಣೆಯನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿಕೊಡುತ್ತೇವೆ. ಅಡುಗೆ ಎಣ್ಣೆಯನ್ನು ಉಪಯೋಗ ಮಾಡಲು ನಮಗೆ ಎಷ್ಟೇ ಭಯವಿದ್ದರೂ ಕೂಡ ಅದು ವ್ಯಕ್ತಿಯ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಅದಲ್ಲದೆ ಎಣ್ಣೆಯನ್ನು ಖರೀದಿಸಲು ಹೋದಾಗ ಯಾವ ಎಣ್ಣೆಯನ್ನು ಖರೀದಿಸಬೇಕೆಂಬ ಗೊಂದಲ ಇದ್ದೇ ಇರುತ್ತದೆ. ನಾವು ಅಡುಗೆಗೆ ಬಳಕೆ ಮಾಡುವ ಎಣ್ಣೆ ಸರಿಯಾಗಿ ಇಲ್ಲದ್ದಿದ್ದರೆ ದೇಹದ ತೂಕ ಹೆಚ್ಚಾಗುತ್ತದೆ. ಮಧುಮೇಹ, ಕ್ಯಾನ್ಸರ್ ಇನ್ನೂ ಹಲವಾರು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಎಣ್ಣೆಯನ್ನು ತೆಗೆದುಕೊಳ್ಳಬೇಕಾದರೆ ಅದರ ಎಲ್ಲ ಮಾಹಿತಿಯನ್ನು ಅಂದರೆ ಮುಖ್ಯವಾಗಿ ಉತ್ಪನ್ನದ ಹೆಸರು, ಉತ್ಪಾದಕರ ಹೆಸರು, ಬ್ಯಾಚ್ ಹೆಸರು ,ಸಂಖ್ಯೆ, ತಯಾರಾದ ದಿನಾಂಕ ಹಾಗೂ ಯಾವ ದಿನಾಂಕದ ಮುನ್ನ ಇದರ ಬಳಕೆ ಸೂಕ್ತ ಅಂತ ನೋಡುವುದು ಉತ್ತಮ. ಅದರಲ್ಲಿರುವ ಪೌಷ್ಟಿಕಾಂಶಗಳ ವಿವರವನ್ನು ಮುಖ್ಯವಾಗಿ ನೋಡಬೇಕು. ಹಾಗೆಯೇ ಅದರಲ್ಲಿ ಫ್ರೀ ಫ್ರೊಮ್ ಆರ್ಗ್ಯುಮಿನ ಓಯಿಲ್ ಎಂಬ ಪ್ರಾಮಾಣಿಕೃತ ಹೇಳಿಕೆ ಇರಬೇಕು. ಈ ಅರ್ಗ್ಯುಮಿನ್ ಎಣ್ಣೆಯನ್ನು ಬಹಳಷ್ಟು ಕಂಪನಿಗಳು ಮಿಕ್ಸ್ ಮಾಡಿರುತ್ತದೆ. ಆದರೆ ಈ ಎಣ್ಣೆ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.  ಹಾಗಾಗಿ ನೀವು ಎಣ್ಣೆಯನ್ನು ತೆಗೆದುಕೊಳ್ಳುವಾಗ ಅರ್ಗ್ಯುಮಿನ್ ಅಂಶಗಳು ಇರದೇ ಇರುವುದನ್ನು ಖರೀದಿಸಿ. ಇನ್ನೂ ಯಾವ ಎಣ್ಣೆಯನ್ನು ಉಪಯೋಗ ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಶೇಂಗಾ ಎಣ್ಣೆ ಅಥವಾ ಕಡಲೆ ಬೀಜ. ಇದು ಅಡುಗೆಗೆ ಬಳಸುವ ಉತ್ತಮವಾದ ಎಣ್ಣೆಯಾಗಿದೆ. ಈ ಎಣ್ಣೆಯಲ್ಲಿ ಒಮೆಗಾ3, ಒಮೆಗಾ6, ಪ್ಯಾಟಿ ಆಸಿಡ್, ಫೈಬರ್ ಹೆಚ್ಚಾಗಿದ್ದು, ಸೋಡಿಯಂ ಕೂಡ ಹೇರಳವಾಗಿದೆ. ಶೇಂಗಾ ಎಣ್ಣೆ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹಾಗೂ ಹೃದಯಕ್ಕೆ ಉತ್ತಮವಾಗಿದೆ. ಅಷ್ಟೇ ಅಲ್ಲದೇ ಹೃದಯ ಒತ್ತಡವನ್ನೂ ಕಡಿಮೆಯಾಗಿಸುತ್ತದೆ. ಹಾಗೂ ಹೃದಯಕ್ಕೆ ಉತ್ತಮ ರಕ್ತ ಸಂಚಾರವನ್ನು ಒದಗಿಸುತ್ತದೆ. ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ. ಹಾಗೂ ಸಕ್ಕರೆ ಕಾಯಿಲೆ ಇದ್ದವರು ಕೂಡ ಈ ಎಣ್ಣೆಯನ್ನು ಬಳಕೆ ಮಾಡಬಹುದು. ರೀಫೈನ ಎಣ್ಣೆಗಿಂತ ಶೇಂಗಾ ಎಣ್ಣೆ ಅದರಲ್ಲೂ ಗಾನದಲ್ಲಿ ಮಾಡಿರುವ ಎಣ್ಣೆಯ ಬಳಕೆಯನ್ನು ಮಾಡುವುದು ಉತ್ತಮ. ಇನ್ನೂ ತೆಂಗಿನ ಕಾಯಿ ಎಣ್ಣೆ. ನೀವು ಸಾಮಾನ್ಯವಾಗಿ ತಲೆ ಕೂದಲಿಗೆ ಹಚ್ಚುವ ಎಣ್ಣೆ ಅಲ್ಲ. ಶುದ್ಧವಾಗಿ ಅಡುಗೆಗಾಗಿಯೆ ತೆಂಗಿನ ಕಾಯಿ ಎಣ್ಣೆ ದೊರೆಯುತ್ತದೆ. ಈ ತೆಂಗಿನ ಎಣ್ಣೆಯನ್ನು ಕರಾವಳಿ ಭಾಗದಲ್ಲಿ ಬಳಸಲಾಗುತ್ತದೆ. ಇದರಲ್ಲಿ ಹೇರಳವಾದ ಪೌಷ್ಟಿಕಾಂಶ ಇರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದು. ಹಾಗೂ ತೆಂಗಿನ ಎಣ್ಣೆಯಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ಫಂಗಲ್ ಗುಣಗಳು ಆರೋಗ್ಯವನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೇ ಸೌಂದರ್ಯಕ್ಕೆ ಹಾಗೂ ಸಕ್ಕರೆ ಕಾಯಿಲೆ ಇರುವವರು ಈ ತೆಂಗಿನ ಎಣ್ಣೆಯನ್ನು ಬಳಕೆ ಮಾಡುವುದು ಒಳ್ಳೆಯದು. ಮತ್ತು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸುತ್ತದೆ. ಅದೇ ರೀತಿ ದೇಹದಲ್ಲಿ ಇನ್ಸುಲಿನ್ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಯಶಸ್ವಿಯಾಗಿ ಈ ತೆಂಗಿನ ಎಣ್ಣೆ ಸಹಾಯ ಮಾಡುತ್ತದೆ. ಇನ್ನು ಎಳ್ಳೆಣ್ಣೆ, ಇದನ್ನು ಹಿಂದಿನ ಕಾಲದಿಂದಲೂ ಬಳಕೆ ಮಾಡುತ್ತಿದ್ದರು. ಎಳ್ಳು ಪುಟ್ಟದಾಗಿದ್ದರು ಇದರಲ್ಲಿ ವಿಟಮಿನ್ ಇ, ಬಿ, ಗಂಧಕ, ಪೌಷ್ಟಿ ಕಾಂಶ ಹಾಗೂ ಕ್ಯಾಲ್ಸಿಯಂ ಕಣಗಳು ಇದ್ದು ಆರೋಗ್ಯಕ್ಕೆ ಮತ್ತು ಅಡುಗೆಗೆ ಬಳಸಲು ಉತ್ತಮವಾಗಿದೆ. ಈ ಎಳ್ಳೆಣ್ಣೆ ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಹೃದಯ ಆರೋಗ್ಯವನ್ನು ಕಾಪಾಡುತ್ತದೆ. ಮೂಳೆಗಳ ಬೆಳವಣಿಗೆ ಹಣ್ಣು ಸರಿಪಡಿಸುತ್ತದೆ. ರಕ್ತದಲ್ಲಿರುವಾ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಭಾರತದಲ್ಲಿ ಹಳೆಯ ಕಾಲದಿಂದಲೂ ಬಳಕೆ ಮಾಡುವ ಎಣ್ಣೆ ಎಂದರೆ ಅದು ಸಾಸಿವೆ ಎಣ್ಣೆ. ಇದರಲ್ಲಿ ವಿಟಮಿನ್ಸ ಪೌಷ್ಟಿಕಾಂಶಗಳಿದ್ದು ಇದು ಆರೋಗ್ಯಕ್ಕೆ ಒಳ್ಳೆಯದು. ಇನ್ನೂ ಇದನ್ನು ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಕ್ಯಾನ್ಸರ್ ಅನ್ನು, ಸಂಧಿವಾತವನ್ನು ನಿವಾರಿಸುತ್ತದೆ. ಬಾಯಿಯ ಆರೋಗ್ಯವನ್ನು ವೃದ್ಧಿಸುತ್ತದೆ. ಇನ್ನೂ ಅಡುಗೆಗೆ ಕೆಮಿಕಲ್ ರಹಿತ ಗಾನದಲ್ಲಿ ತಯಾರಿಸಿದ ಸಾಸಿವೆ ಎಣ್ಣೆಯನ್ನು ಉಪಯೋಗ ಮಾಡುವುದರಿಂದ ಆರೋಗ್ಯಕ್ಕೆ ಎಲ್ಲ ಬಗೆಯ ಲಾಭಗಳು ಸಿಗುತ್ತದೆ. ಇನ್ನೂ ಕೊನೆಯದಾಗಿ ಅಗ್ಗವಾಗಿ ಸಿಗುವ ರಿಫೈನರಿ ಓಯಿಲ. ಇದನ್ನು ಹೆಚ್ಚಿನ ಉಷ್ಣದಲ್ಲಿ ಕಾಯಿಸುವುದರಿಂದ ಅದರಲ್ಲಿ ಯಾವುದೇ ಪೌಷ್ಟಿಕಾಂಶ ಸಿಗುವುದಿಲ್ಲ. ರಿಫೈನರಿ ಎಣ್ಣೆಗಿಂತ ಮೇಲೆ ಅಡುಗೆಯಲ್ಲಿ ಮೇಲೆ ತಿಳಿಸಿರುವ ಎಣ್ಣೆಗಳನ್ನು ಬಳಸುವುದು ಉತ್ತಮ. ಸ್ವಾದಿಷ್ಟದ ಜೊತೆಗೆ ಆರೋಗ್ಯಕ್ಕೆ ಒಳ್ಳೆಯದು ಈ ಎಲ್ಲ ಎಣ್ಣೆಗಳು.

- Advertisement -

Latest Posts

Don't Miss