Belagavi News: ಬೆಳಗಾವಿ: ರಾಜ್ಯೋತ್ಸವ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಲಬೈಕ ಹಲಸಿಗರ, ಬೆಳಗಾವಿಯ ಬಾಳೇಕುಂದ್ರಿ ಗ್ರಾಮದ ಶ್ರೀನಾಥ ಗುಜನಾಳ ಮೃತಪಟ್ಟವರು.
ಬೈಕ್‌ನಲ್ಲಿದ್ದ ಯುವಕರು ಬೆಳಗಾವಿಯಲ್ಲಿ ರಾಜ್ಯೋತ್ಸವ ಮುಗಿಸಿಕೊಂಡು ಹೊರಟಿದ್ದರು. ಇದೇ ವೇಳೆ ದಾಬಾದಲ್ಲಿ ಊಟ ಮುಗಿಸಿಕೊಂಡು ಬರುತ್ತಿದ್ದ ಪಾದಚಾರಿಗಳಿಗೆ ರಭಸದಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಒಬ್ಬ ಬೈಕ್ ಸವಾರ ಹಾಗೂ ಮತ್ತೊಬ್ಬ ಪಾದಚಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಧಾರವಾಡದ ಅಲ್ತಾಫ್ ನಾಲಬಂದ, ಕಡತನಬಾಗೇವಾಡಿಯ ಅರ್ಜುನ ರಂಗಣ್ಣನವರಗೆ ಗಂಭೀರ ಗಾಯಗಳಾಗಿವೆ.
ಶವಗಳು ಬಿದ್ದ ಸ್ಥಳದಿಂದ 300 ಮೀಟರ್ ದೂರದಲ್ಲಿ ಬೈಕ್ ಪತ್ತೆಯಾಗಿದೆ. ಅಪಘಾತ ನಡೆದ ಬಳಿಕವೂ ಇಷ್ಟು ದೂರ ಬೈಕ್ ಹೋದುದು ಹೇಗೆ ಎಂಬುದು ಅಚ್ಚರಿಯ ಪ್ರಶ್ನೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಕಳ್ಳತನ ಗೈದ ಬಂಧಿಸಿದ ಪೋಲಿಸರು
ಎರಡುವರೆ ವರ್ಷ ಆದ್ಮೇಲೆ ಸಿಎಂ ಬದಲಾಗ್ತಾರಾ ಎಂಬ ಪ್ರಶ್ನೆಗೆ ಸಚಿವ ರಾಜಣ್ಣ ಹೇಳಿದ್ದೇನು..?
ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ




