Saturday, December 7, 2024

Latest Posts

ಶ್ರೀಕೃಷ್ಣ ಹೇಳಿದ ಈ ಜೀವನ ಪಾಠ ಕೇಳಿದರೆ, ಜೀವನದಲ್ಲಿ ಉದ್ಧಾರವಾಗುವುದು ಖಂಡಿತ

- Advertisement -

Spiritual: ಶ್ರೀಕೃಷ್ಣ ಅದೆಷ್ಟು ಕಷ್ಟ ಅನುಭವಿಸಿದ್ದನೆಂದರೆ, ಸಾಮಾನ್ಯ ಮನುಷ್ಯನೇನಾದರೂ ಅಷ್ಟು ಕಷ್ಟ ಅನುಭವಿಸಿದ್ದರೆ, ಅವನು ಸಾವಿಗೇ ಶರಣಾಗುತ್ತಿದ್ದನೇನೋ, ಅಷ್ಟು ಕಷ್ಟ ಅನುಭವಿಸಿದ್ದ. ಆದರೆ ಅವನು ಎಲ್ಲವನ್ನೂ ಮುಗುಳ್ನಗೆಯಿಂದ ಸ್ವೀಕರಿಸಿದ ಕಾರಣ, ಆತ ದೇವರು ಎನ್ನಿಸಿಕೊಂಡ. ಶಾಪ, ಕೋಪ,ತಾಪ ಎಲ್ಲವನ್ನೂ ಶಾಂತಿಯಿಂದ ಸ್ವೀಕರಿಸಿದ. ಪ್ರೀತಿ ಕಳೆದು ಹೋದರೂ, ನಗುತ್ತಲೇ ಇದ್ದ. ಇಂಥ ಶ್ರೀಕೃಷ್ಣ ಹೇಳಿರುವ ಜೀವನ ಪಾಠ ನೀವು ಅರಿತರೆ, ನಿಮ್ಮ ಜೀವನವೂ ಸುಲಭವಾಗುತ್ತದೆ.

ಮೊದಲನೇಯ ಪಾಠ: ನಿಮ್ಮ ಜೀವನದಲ್ಲಿ ನೀವೆಂದಿಗೂ ಉತ್ತಮ ಕೆಲಸ ಮಾಡಲು ಎಂದಿಗೂ ಹಿಂಜರಿಯಬೇಡಿ. ಶ್ರೀಕೃಷ್ಣ ಪಾಂಡವರ ಗುರುವಾಗಿ, ಕೊನೆಗೆ ಅರ್ಜುನನ ಸಾರಥಿಯಾಗಿ ಕಾರ್ಯ ನಿರ್ವಹಿಸಿದ. ಆತ ದೇವರಾಗಿದ್ದರೂ ಕೂಡ, ಸಾರಥಿಯಾಗಿ ಅರ್ಜುನನಿಗೆ ಸಹಾಯ ಮಾಡಲು ಹಿಂಜರಿಯಲಿಲ್ಲ. ಅವನಿಗೆ ಸಾರಥಿಯ ಕೆಲಸ ತುಚ್ಛವೆಂದೆನ್ನಿಸಲಿಲ್ಲ. ಹಾಗಾಗಿ ನೀವು ಜೀವನದಲ್ಲಿ ನಿಯತ್ತಿನಿಂದ ಮಾಡಬಹುದಾದ ಯಾವುದೇ ಉತ್ತಮ ಕಾರ್ಯ ಮಾಡಲು ಎಂದಿಗೂ ಹಿಂಜರಿಯಬಾರದು.

ಎರಡನೇಯ ಪಾಠ: ಸ್ನೇಹ ಸಂಬಂಧದಲ್ಲಿ ಬೇಧ ಭಾವ ಬೆಳೆಸಬೇಡಿ. ಶ್ರೀಕೃಷ್ಣ ಬೆಳೆದಿದ್ದು, ಶ್ರೀಮಂತ ರೀತಿಯಲ್ಲಿ ಮನೆತುಂಬ ತಿನ್ನಲು ಬಗೆ ಬಗೆ ಆಹಾರ, ರುಚಿ ರುಚಿ ಬೆಣ್ಣೆ, ಮೈಮೇಲೆ ಚಿನ್ನಾಭರಣ ಹೀಗೆ ಆರಾಮವಾದ ಜೀವನದಲ್ಲೇ ಶ್ರೀಕೃಷ್ಣ ಬೆಳೆದಿದ್ದ. ಆದರೆ ಆತ ಸ್ನೇಹ ಬೆಳೆಸಿದ್ದು, ಸುಧಾಮನಲ್ಲಿ. ಸುಧಾಮ ತೀರಾ ಬಡಕುಟುಂಬದವನು. ಆದರೆ ಶ್ರೀಕೃಷ್ಣ ಅವನ ಬಡತನಕ್ಕೆ ಬೆಲೆ ಕೊಡದೇ, ಸ್ನೇಹ, ಗುಣಕ್ಕೆ ಬೆಲೆ ನೀಡಿದ. ಅದೇ ರೀತಿ ನಾವು ಯಾರ ಜೊತೆಗಾದರೂ ಸ್ನೇಹ ಬೆಳೆಸುವಾಗ, ಸಂಬಂಧ ಬೆಸೆಯುವಾಗ ಅವರ ಗುಣ ನೋಡಬೇಕೇ ಹೊರತು, ಅವರ ಅಂದ ಚೆಂದ, ಶ್ರೀಮಂತಿಕೆ ಅಲ್ಲ.

ಮೂರನೇಯ ಪಾಠ: ಎಲ್ಲ ವಿಷಯಗಳಿಗೂ ಅತೀಯಾಗಿ ತಲೆ ಕೆಡಿಸಿಕೊಳ್ಳಬೇಡಿ. ನಾವು ನೀವೆಲ್ಲ ಚಿಕ್ಕ ಪುಟ್ಟ ವಿಷಯಗಳಿಗೆ ಎಷ್ಟೆಲ್ಲ ತಲೆ ಕೆಡಿಸಿಕೊಳ್ಳುತ್ತೇವೆ. ಇದರಿಂದ ನಮಗೆ ರೋಗ ರರುಜಿನಗಳೇ ಹೆಚ್ಚು. ಆದರೆ ಎಷ್ಟೇ ಕಷ್ಟ ಬಂದರೂ, ಧೃತಿಗೆಡದ ಕೃಷ್ಣ, ಸದಾ ಮುಗುಳ್ನಗುತ್ತ, ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡನು. ಅಂಥ ಗುಣ ನಾವು ಬೆಳೆಸಿಕೊಳ್ಳಬೇಕು.

ನಾಲ್ಕನೇಯ ಪಾಠ: ಮಹಾಭಾರತ ಯುದ್ಧ ಗೆಲ್ಲಲು ಶ್ರೀಕೃಷ್ಣ ಕೆಲವು ಚಾಕಚಕ್ಯತೆ ಬಳಸಿದನು. ಯುದ್ಧತಂತ್ರ ಬಳಸಿ, ಕೌರವರು ಸೋಲಲು ಕಾರಣವಾದನು. ಅವನಂತೆ ನಾವು ಕೂಡ ಜೀವನದಲ್ಲಿ ಗೆಲ್ಲಲು ಕೆಲವು ಬಾರಿ, ಬುದ್ಧಿ ಉಪಯೋಗಿಸಿ, ಜೀವಿಸಬೇಕು. ಶ್ರೀಕೃಷ್ಣ ಸುಮ್ಮ ಸುಮ್ಮನೆ ಯಾರಿಗೂ ಸಿಕ್ಷಿಸಿರಲಿಲ್ಲ. ಅಥವಾ ಪಾಪದವರ ಮೇಲೆಲ್ಲ ಯುದ್ಧ ತಂತ್ರ ರೂಪಿಸಿರಲಿಲ್ಲ. ಅದೇ ರೀತಿ ನಾವು ಜೀವಿಸುವ ರೀತಿ ನಮಗೆ ಲಾಭ ತಂದುಕೊಟ್ಟರೂ, ಬೇರೆಯವರಿಗೆ ಅದರಿಂದ ತೊಂದರೆಯಾಗದಂತಿರಬೇಕು ಅಷ್ಟೇ.

- Advertisement -

Latest Posts

Don't Miss