Sunday, May 26, 2024

Latest Posts

ಮೋದಿ ಅಲೆಯಲ್ಲಿ ಯಾರೇ ನಿಂತರೂ ಸೋಲು ಗ್ಯಾರಂಟಿ: ಸಿ.ಟಿ.ರವಿ

- Advertisement -

Political News: ಕರ್ನಾಟಕ ಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ಸಚಿವ ಸಿ.ಟಿ.ರವಿ, ಮೋದಿ ಅಲೆಯಲ್ಲಿ ಯಾರೇ ನಿಂತರೂ ಸೋಲು ಗ್ಯಾರಂಟಿ ಎಂದಿದ್ದಾರೆ.

ಸದ್ಯ ರಾಷ್ಟ್ರದಲ್ಲಿ ಮೋದಿ ಅಲೆ ಇದೆ. ಅದರಲ್ಲೂ ರಾಮಮಂದಿರ ನಿರ್ಮಾಣವಾದ ಬಳಿಕ, ಮೋದಿ ಅಲೆ ಹೆಚ್ಚಾಗಿದೆ. ರಾಮಮಂದಿರ ಅನುಭವವನ್ನು ವರ್ಣಿಸಲು ಅಸಾಧ್ಯ. ಜನ ರಾಮಲಲ್ಲಾನನ್ನು ಟಿವಿ ಸ್ಕ್ರೀನ್‌ನಲ್ಲಿ ನೋಡಿ, ಪೂಜೆ ಮಾಡಿದ್ದಾರೆ. ಎಷ್ಟೋ ಜನ, ತಾವಾಗಿಯೇ ರಾಮಮಂದಿರ ಉದ್ಘಾಟನೆ ದಿನ ತಾವೇ ಅನ್ನದಾನ ಮಾಡಿದ್ದಾರೆ.

ನಾನೂ ಕೂಡ ಬಾಲರಾಮನನ್ನು ನೋಡಿದಾಗ, ಭಾವುಕನಾಗಿದ್ದೆ. ಅದೊಂದು ಅವ್ಯಕ್ತವಾದ ಆನಂದದ ಅನುಭೂತಿ. ಜೀವನವೇ ಸಾರ್ಥಕವೆನ್ನಿಸಿಬಿಡುತ್ತದೆ. ಏಕೆಂದರೆ, ಯಾವ ಸಂಸ್ಕೃತಿಯನ್ನು ಅಳಿಸಿ ಹಾಕಬೇಕು ಎಂದು ಮತಾಂಧರು ಪ್ರಯತ್ನಪಟ್ಟರೋ, ಅದೇ ನೆಲದಲ್ಲಿ ಮತ್ತೆ ಬಾಲರಾಮ ಪ್ರತಿಷ್ಠಾಪನೆಗೊಂಡಿದ್ದಾನೆ. ರಾಮಮಂದಿರ ಬರೀ ಮಂದಿರವಲ್ಲ. ಅದು ರಾಷ್ಟ್ರ ಮಂದಿರವೆಂದು ಸಿ.ಟಿ.ರವಿ ಹೇಳಿದ್ದಾರೆ.

ದೇಶದ ಜನ ಬಿಜೆಪಿಗೆ ಯಾಕೆ ಓಟ್ ಹಾಕಬೇಕು..? ಸಿ.ಟಿ.ರವಿ ಹೇಳಿದ್ದೇನು..?

ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು

ಇಂಥ ಆದೇಶ ನೀಡಿರುವ ಕಾಂಗ್ರೆಸ್ ವಿಕೃತ ಮನಸ್ಥಿತಿಯ ಪ್ರತೀಕ: ಸಂಸದ ತೇಜಸ್ವಿ ಸೂರ್ಯ

- Advertisement -

Latest Posts

Don't Miss