Saturday, July 27, 2024

Latest Posts

ಕಿವಿ ಕೇಳದೇ ಇರೋ ಮಕ್ಕಳಿಗೆ ಮಾತನಾಡದೇ ಇರೋಕ್ಕೆ ಆಗಲ್ಲ ಯಾಕೆ..?

- Advertisement -

Health Tips: ಸಾಮಾನ್ಯವಾಗಿ ಮನುಷ್ಯನಿಗೆ ವಯಸ್ಸಾದಂತೆ ಕಿವಿ ಕೇಳುವುದು ಕಷ್ಟವಾಗುತ್ತದೆ. ಕೆಲವರಿಗೆ 30 ವರ್ಷ ದಾಟುತ್ತಿದ್ದಂತೆ, ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಇನ್ನು ಕೆಲವರಿಗೆ ಬಾಲ್ಯದಿಂದಲೇ, ಕಿವಿ ಸಂಪೂರ್ಣ ಕಿವುಡಾಗಿರುತ್ತದೆ. ಅಂಥವರಲ್ಲಿ ಕೆಲವರಿಗೆ ಮಾತು ಸಹ ಬರುವುದಿಲ್ಲ. ಹಾಗಾದ್ರೆ ಕಿವಿ ಕೇಳದೇ ಇರುವ ಮಕ್ಕಳಿಗೆ ಮಾತನಾಡೋಕ್ಕೆ ಆಗಲ್ಲ ಯಾಕೆ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..

ಮಗು ಹುಟ್ಟಿ, ಡಿಸ್ಚಾರ್ಜ್ ಆಗುವ ಮುನ್ನವೇ, ಹಲವು ಆಸ್ಪತ್ರೆಗಳಲ್ಲಿ ಕೆಲವು ಟೆಸ್ಟ್ ಮಾಡಲಾಗುತ್ತದೆ. ಮಗುವಿಗೆ ಸರಿಯಾಗಿ ಕಿವಿ ಕೇಳುತ್ತೋ, ಇಲ್ಲವೋ, ಕಿವಿ ಸೇರಿ ಬೇರೆ ಬೇರೆ ಅಂಗಗಳು ಕೆಲಸ ಮಾಡುತ್ತದೋ, ಇಲ್ಲವೋ ಅಂತಾ ಚೆಕ್ ಮಾಡಲಾಗುತ್ತದೆ. ಈ ವೇಳೆಯೇ ಮಗುವಿಗೆ ಯಾವ ಸಮಸ್ಯೆ ಇದೆ ಅಂತಾ ಗೊತ್ತಾಗುತ್ತದೆ.

ಮಗುವಿಗೆ ಹುಟ್ಟುತ್ತಲೇ, ಯಾವುದಾದರೂ ರೋಗ ಜೋರಾಗಿದ್ದರೆ, ಅಂಥ ಮಕ್ಕಳಿಗೆ ಕಿವಿ ಕೇಳುವುದಿಲ್ಲ. ಕಿವಿ ಕೇಳದ ಮಕ್ಕಳಿಗೆ ಎದುರಿನವರು ಮಾತನಾಡಿದ್ದು, ಕೇಳಿಸಿಕೊಳ್ಳುವ ಅರ್ಹತೆ ಇರುವುದಿಲ್ಲ. ಈ ಕಾರಣಕ್ಕಾಗಿ ಅವರಿಗೆ ಮಾತತನಾಡಲು ಕೂಡ ಸಾಧ್ಯವಾಗುವುದಿಲ್ಲ. ಇನ್ನು ವೈದ್ಯರು ಇಂಥ ಪರೀಕ್ಷೆಗಳನ್ನು ಮಾಡದಿದ್ದಲ್ಲಿ, ಪೋಷಕರು ಮಗು ನಿಮ್ಮ ಮಾತನ್ನು ಕೇಳಿ, ಅದಕ್ಕೆ ರೆಸ್ಪಾನ್ಸ್ ಕೊಡುತ್ತಿದೆಯಾ..? ಏನಾದರೂ ಸೌಂಡ್ ಆದಾಗ, ಪದೇ ಪದೇ ಬೆಚ್ಚಿ ಬೀಳುತ್ತಾ ಅಂತಾ ಪರೀಕ್ಷಿಸಬೇಕಾಗುತ್ತದೆ. ನೀವು ಎಷ್ಟು ಕರೆದರೂ ನಿಮ್ಮ ಮಗು ನಿಮ್ಮ ಬಳಿ ತಿರುಗಿ ನೋಡದಿದ್ದಲ್ಲಿ, ಮಗುವಿನ ಕಿವಿಯಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ.

ಹಾಗಾಗಿ ಮಗುವಿಗೆ 6 ತಿಂಗಳೊಳಗಾಗಿ ಈ ಬಗ್ಗೆ ತಿಳಿದುಕೊಂಡು, ವೈದ್ಯರ ಬಳಿ ಪರೀಕ್ಷಿಸಿ, ಮಗುವಿಗೆ 6 ತಿಂಗಳು ತುಂಬುವುದರೊಳಗೆ ಅದಕ್ಕೆ ಚಿಕಿತ್ಸೆ ಕೂಡ ನೀಡಬೇಕಾಗುತ್ತದೆ. ಇಲ್ಲದಿದ್ದಲ್ಲಿ, ಕಿವುಡು ಜೀವನ ಪೂರ್ತಿ ಇರುವ ಸಾಧ್ಯತೆ ಇರುತ್ತದೆ..ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss