Wednesday, April 24, 2024

Latest Posts

ಉತ್ತರಭಾರತದ ಸನ್ಯಾಸಿಗಳಿಗಿಲ್ಲದ ಮಡಿವಂತಿಕೆ ದಕ್ಷಿಣ ಭಾರತದ ಸ್ವಾಮೀಜಿಗಳಿಗೆ ಏಕೆ..?: ದಿಂಗಾಲೇಶ್ವರ ಶ್ರೀ

- Advertisement -

Dharwad News: ಧಾರವಾಡ : ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಭೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದು,  ಒಂದು ವಾರದಿಂದ ನಾವು ಒಂದು ನಿರ್ಧಾರ ಘೋಷಣೆ ಮಾಡಿದ್ದೇವೆ. ಜೋಶಿಯವರನ್ನು ಈ ಕ್ಷೇತ್ರದಿಂದ ಬದಲಾಯಿಸಬೇಕು ಎಂದು. ಎಲ್ಲ ಮುಖಂಡರು ಭಾಗಿಯಾಗಿ ಸಭೆ ಕರೆದಾಗ ಕೆಲವು ಜನ ಬದಲಾವಣೆ ಬೇಡ ಎಂದರು. ಆದ್ರೆ ನಾವು ಯಾವುದೇ ಒತ್ತಡಕ್ಕೆ, ಆಮಿಷಕ್ಕೆ ಮಣಿಯೋದಿಲ್ಲ. ಧಾರವಾಡದಲ್ಲಿ ಭಕ್ತರ ಸಭೆ ಕರೆದು ಚರ್ಚೆ ಮಾಡಿದ್ದೇವೆ. ಅವರೆಲ್ಲರೂ ಸೇರಿ ಒಂದು ತೀರ್ಮಾನ ಮಾಡಿದ್ದಾರೆ. ಲೋಕಸಭೆಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ  ಮಾಡುವಂತೆ ಹೇಳಿದ್ದಾರೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.

ಉತ್ತರ ಭಾರತದ ರೀತಿಯಲ್ಲಿ ಇಲ್ಲಿಯೂ ಬದಲಾವಣೆ ಆಗಬೇಕು ಅಂತ ಹೇಳಿದ್ದಾರೆ. ಮಠಗಳು ಇದೀಗ ಬದಲಾಗಿವೆ, ಎಲ್ಲರೂ ಸಹ ನನಗೆ ಕರೆ ಮಾಡಿ ಮುಂದಿಟ್ಟ ಹೆಜ್ಜೆ ಹಿಂದೆ ಇಡದಂತೆ ಹೇಳಿದ್ದಾರೆ. ಯಾವುದೇ ಪಕ್ಷದ ವಿಚಾರ, ಜಾತಿ ವಿಚಾರ ನಮ್ಮಲ್ಲಿ ಇಲ್ಲ. ಜನರ ಬೇಡಿಕೆ ನಾವೇ ಸ್ಪರ್ಧೆ ಮಾಡಬೇಕೆಂಬುದು ಇದೆ. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಮುಟ್ಟಿದೆ. ವಿಶೇಷವಾಗಿ ನನ್ನ ಹಿಂದೆ ಪ್ರಮುಖರು ಇದ್ದಾರೆ. ಅವರ ಅಂತಿಮ ತೀರ್ಮಾನವನ್ನು ಪಡೆಯುತ್ತೇನೆ. ಅತಿ ಶೀಘ್ರದಲ್ಲಿ ಬೆಂಗಳೂರಿನಲ್ಲಿ‌ ನನ್ನ ತೀರ್ಮಾನ ಹೇಳುತ್ತೇನೆ. ನಮ್ಮ ಗುರುಗಳ ಮತ್ತು ಭಕ್ತರ ನಿರ್ಣಯ ಪಡೆದು ವಿಚಾರ ತಿಳಿಸುತ್ತೇನೆ. ಒಂದು ಸತ್ಯ ಯಾವುದೇ ಪರಿಸ್ಥಿತಿಯಲ್ಲಿ ಜೋಶಿ ಯವರನ್ನ ಪರಾಭವ ಗೊಳಿಸುವಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದಾರೆ.

ಧಾರವಾಡದ ಲೋಕಸಭೆ ಚುನಾವಣೆ ಸಲುವಾಗಿ ಸಮೀತಿ ರಚನೆ ಮಾಡಲಾಗಿದೆ. ಮುರುಘಾ ಶ್ರೀಗಳು ಎಲ್ಲ ಸಭೆ, ಚರ್ಚೆ ಗಳಿಗೆ ನಮ್ಮ ಜೊತೆ ಇದ್ರು. ಆದ್ರೆ ಕೆಲವರು ಮಠಕ್ಕೆ ಹೋಗಿ ಹೆದರಿಸಿ ಅವರಿಗೆ ಪತ್ರ ಓದಿಸಿದ್ದಾರೆ. ಕೇವಲ ಚುನಾವಣೆಗೆ ಮಾತ್ರ ಕರೆ ಮಾಡಿ ಆಶೀರ್ವಾದ ಮಾಡಿ ಅಂತ ಜೋಶಿ ಹೇಳುತ್ತಾರೆ. ನಾನು ಆಗ ಕೇವಲ ನಮ್ಮನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರಿ ಅಂತ ಪ್ರಶ್ನೆ ಮಾಡಿದ್ದೆ. ಆಗ ಈ ಬಾರಿ ಮಾತ್ರ ಕ್ಷಮೆ ಮಾಡಿ ಮುಂದೆ ಹೀಗಾಲ್ಲ ಅಂತ ಹೇಳಿದ್ರು. ಆದರೆ ಮಠಗಳಿಗೆ ಅನುದಾನ ಸಿಕ್ಕಿಲ್ಲ. ಉತ್ತರ ಭಾರತದಲ್ಲಿ 50 ಜನ ಸನ್ಯಾಸಿಗಳು ಸಂಸದರಾಗಿದ್ದಾರೆ. ಅವರಿಗಿಲ್ಲದ ಮಡಿವಂತಿಕೆ ದಕ್ಷಿಣ ಭಾರತದ ಸ್ವಾಮೀಜಿಗಳಿಗೆ ಏಕೆ..? ನಮ್ಮ ಹೋರಾಟ ಜೋಶಿ ವಿರುದ್ಧ ಅಲ್ಲ, ಅವರ ವ್ಯಕ್ತಿತ್ವ, ನುಡಿಯ ಬಗ್ಗೆ ಮಾತ್ರ ಎಂದು ದಿಂಗಾಲೇಶ್ವರ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

ಸುರೇಶಾ, ಸಿಮೆಂಟ್ ಮಂಜಾ ನಿನ್ನ ಬಿಡೋದಿಲ್ಲಾ, ಪ್ರೀತಂಗೌಡ ನಿನ್ನ ಸಮಾಧಿ ಮಾಡಿ ಬಿಡುತ್ತಾರೆ: ಜೆಡಿಎಸ್ ವಿರುದ್ಧ ಡಿಕೆಶಿ ವ್ಯಂಗ್ಯ

ವೀಣಾ ಕಾಶಪ್ಪನವರ್ ಕುರಿತು ಶಾಕಿಂಗ್ ಹೇಳಿಕೆ‌ ನೀಡಿದ ಸಚಿವ ಆರ್.ಬಿ.ತಿಮ್ಮಾಪೂರ್

ನಾಮಪತ್ರ ಸಲ್ಲಿಸಿದ ಯದುವೀರ್ ಒಡೆಯರ್: ಮಗನಿಗೆ ಸಾಥ್ ಕೊಟ್ಟ ರಾಜಮಾತೆ ಪ್ರಮೋದಾದೇವಿ

- Advertisement -

Latest Posts

Don't Miss