Spiritual: ಹಿಂದೂ ಧರ್ಮದಲ್ಲಿ ಅನೇಕ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅನಾದಿ ಕಾಲದಿಂದಲೂ, ಹಿರಿಯರು ಅನುಸರಿಸಿಕೊಂಡು ಪದ್ಧತಿಯನ್ನು, ಇಂದಿನವರೆಗೂ ಹಲವು ಹಿಂದೂಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅದೇ ರೀತಿ ಹಿಂದಿನ ಕಾಲದಿಂದಲೂ ಬಂದಂಥ ಪದ್ಧತಿ ಅಂದ್ರೆ, ಅಪ್ಪ ಅಥವಾ ಅಮ್ಮ ತೀರಿಹೋದಾಗ, ಪುತ್ರನೇ ಅವರ ಅಂತ್ಯಸಂಸ್ಕಾರ ಮಾಡಬೇಕು ಅನ್ನೋದು. ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೂಡ, ಅಪ್ಪ- ಅಮ್ಮನ ಅಂತ್ಯಸಂಸ್ಕಾರ, ಶ್ರಾದ್ಧವನ್ನು ಮಾಡುತ್ತಾರೆ. ಆದರೆ ಯಾಕೆ ಪುತ್ರನೇ ಈ ಕೆಲಸ ಮಾಡಬೇಕು ಅಂತಾ ಹೇಳುವುದು ಅನ್ನನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಹಿಂದೂ ಧರ್ಮದಲ್ಲಿ ಸೂರ್ಯಾಸ್ತದ ಬಳಿಕ ಅಂತ್ಯಸಂಸ್ಕಾರ ಮಾಡಬಾರದು. ಹೆಣ್ಣು ಮಕ್ಕಳು ಚಿತೆಗೆ ಅಗ್ನಿ ಸ್ಪರ್ಶ ಮಾಡಬಾರದು. ಸ್ಮಶಾನಕ್ಕೆ ಕೂಡ ಹೆಣ್ಣು ಮಕ್ಕಳು ಹೋಗಬಾರದು ಅಂತಾ ಹೇಳಲಾಗಿದೆ. ಏಕೆಂದರೆ, ಹೆಣ್ಣು ಮಕ್ಕಳು ಋತುಮತಿಯರಾಗುತ್ತಾರೆ. ಈ ಕಾರಣಕ್ಕೆ ಈ ಎಲ್ಲ ಪದ್ಧತಿಗಳಿಂದ ಅವರು ದೂರವಿರಬೇಕು ಅಂತಾ ಹೇಳಲಾಗಿದೆ. ಅಯ್ಯಪ್ಪಸ್ವಾಮಿಯ ದೇವಸ್ಥಾನಕ್ಕೆ ಕೂಡ ಹೆಣ್ಣು ಮಕ್ಕಳು ಹೋಗುವ ಹಾಗಿಲ್ಲ. ಅದಕ್ಕೂ ಕೂಡ ಹೆಣ್ಣು ಮಕ್ಕಳು ಋತುಮತಿಯರಾಗುವುದೇ ಕಾರಣ.
ಇನ್ನು ಪುತ್ರನಿಂದ ಅಂತ್ಯಸಂಸ್ಕಾರ ಮಾಡಿದರೆ, ಸದ್ಗತಿ ಸಿಗುತ್ತದೆ. ಮುಂದಿನ ಜನ್ಮ ಉತ್ತಮವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಗಂಡು ಮಕ್ಕಳಿಲ್ಲದವರು, ಅಳಿಯನಿಂದ, ಚಿಕ್ಕಪ್ಪ ಚಿಕ್ಕಮ್ಮನ ಮಕ್ಕಳಿಂದಲೂ ಅಂತ್ಯಸಂಸ್ಕಾರ ಮಾಡಿಸಬಹುದು. ಒಟ್ಟಿನಲ್ಲಿ ತೀರಿಕೊಂಡವರ, ಸಂಬಂಧಿಕರಾಗಿರಬೇಕು. ಪುತ್ರನಾದವನು ಅಂತ್ಯಸಂಸ್ಕಾರ ಮಾಡಿದಾಗ ಮಾತ್ರ, ಮೋಕ್ಷ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ.