Monday, September 9, 2024

Latest Posts

ಮದುವೆಯಾಗುವಾಗ ಪತ್ನಿ ಪತಿಯ ಎಡಭಾಗದಲ್ಲೇ ಯಾಕೆ ಕೂರಬೇಕು..?

- Advertisement -

Spiritual: ಹಿಂದೂ ಧರ್ಮದಲ್ಲಿ ಹಲವು ರೀತಿ ರಿವಾಜುಗಳಿದೆ. ಪೂಜೆ, ಪುನಸ್ಕಾರ ಮಾಡುವಾಗ, ಊಟ ತಿಂಡಿ ಮಾಡುವಾಗ, ಸ್ನಾನಾದಿಗಳನ್ನು ಮಾಡುವಾಗ, ಆಯಾ ದಿನಗಳಲ್ಲಿ ಯಾವ ರೀತಿ ಇರಬೇಕು ಅಂತಲೂ ನಿಯಮಗಳಿದೆ. ಅದೇ ರೀತಿ ಮದುವೆ ಸಂದರ್ಭದಲ್ಲಿ ಪತ್ನಿಯಾದವಳು ಪತಿಯ ಎಡಭಾಗದಲ್ಲಿ ಕೂರುತ್ತಾಳೆ. ಹಾಗಾದ್ರೆ ಏಕೆ ಪತ್ನಿ ಪತಿಯ ಎಡಭಾಗದಲ್ಲಿ ಕೂರಬೇಕು ಅಂತಾ ತಿಳಿಯೋಣ ಬನ್ನಿ..

ಶಿವನ ಅರ್ಧಭಾಗ ಪುರುಷ ಮತ್ತು ಅರ್ಧ ಭಾಗ ಸ್ತ್ರೀ ಎಂದು ಹೇಳಲಾಗುತ್ತದೆ. ಮತ್ತು ಈ ರೂಪವನ್ನು ಅರ್ಧ ನಾರೀಶ್ವರ ರೂಪವೆಂದು ಹೇಳಲಾಗುತ್ತದೆ. ಆ ಅರ್ಧನಾರೀಶ್ವರ ರೂಪದಲ್ಲಿ ಸ್ತ್ರೀ ರೂಪವನ್ನು ಶಿವ ಎಡಭಾಗದಲ್ಲಿ ಧರಿಸಿದ್ದರ ಕಾರಣ, ಮದುವೆಯ ಸಂದರ್ಭದಲ್ಲಿ ಪತ್ನಿಯನ್ನು ಪತಿಯ ಎಡಭಾಗದಲ್ಲಿ ಕೂರಲು ಹೇಳುತ್ತಾರೆ.

ಆದರೆ ಅದು ಕೆಲವು ಪದ್ಧತಿಗಳನ್ನು ಮಾಡುವಾಗ ಮಾತ್ರ, ಬಳಿಕ ಪತ್ನಿ ಪತಿಯ ಬಲಭಾಗದಲ್ಲೇ ಕೂರಬೇಕು. ಹಿಂದೂ ಧರ್ಮದಲ್ಲಿ ಮದುವೆಯಾಗುವಾಗ, ಹಲವು ಪದ್ಧತಿಗಳನ್ನು ಅನುಸರಿಸಬೇಕು. ಆ ಪದ್ಧತಿ ಅನುಸರಿಸುವಾಗ, ಈ ರೀತಿ ಬಲಭಾಗದಲ್ಲಿ ಮತ್ತು ಎಡಭಾಗದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ.

ಇನ್ನು ಮಂಚದ ಮೇಲೆ ನಿದ್ರಿಸುವಾಗಲೂ ಕೂಡ, ಪತ್ನಿಯಾದವಳು ಪತಿಯ ಎಡಭಾಗದಲ್ಲಿ ಮಲಗಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಇದರಿಂದ ದಾಂಪತ್ಯ ಜೀವನ ಅತ್ಯುತ್ತಮವಾಗಿರುತ್ತದೆ ಅಂತಾ ಹೇಳಲಾಗಿದೆ.

ಇನ್ನು ಪದೇ ಪದೇ ಪತಿ- ಪತ್ನಿ ಮಧ್ಯೆ ಸಿಕ್ಕಾಪಟ್ಟೆ ಜಗಳವಾಗಿ ನೆಮ್ಮದಿ ಹಾಳಾಗಿದ್ದರೆ, ಅಂಥವರು ಮಂಚದ ಬಳಿ ಒಂದು ನವಿಲುಗರಿ ಇಟ್ಟುಕೊಂಡಿರಬೇಕು. ಆ ನವಿಲುಗರಿಯನ್ನು ಬೇರೆಯವರು ನೋಡದಂತೆ, ಮತ್ತು ಮುಟ್ಟದಂತೆ ನೀವು ನೋಡಿಕೊಳ್ಳಬೇಕು. ಹೀಗಿದ್ದಾಗ, ಪತಿ-ಪತ್ನಿ ನಡುವೆ ಜಗಳ ಕಡಿಮೆಯಾಗುತ್ತದೆ.

- Advertisement -

Latest Posts

Don't Miss