Saturday, April 19, 2025

Latest Posts

Pro Kabbadi ಸೀಸನ್ 8 ರ ಫೈನಲ್ ಗೆ ಲಗ್ಗೆಯಿಡುತ್ತಾ ನಮ್ಮ ಬೆಂಗಳೂರು ಬುಲ್ಸ್..!

- Advertisement -

ಪ್ರೊ ಕಬಡ್ಡಿ (Pro Kabbadi) ಸೀಸನ್ 8 ಅಂತಿಮ ಹಂತಕ್ಕೆ ತಲುಪಿದ್ದು ಇಂದು ನಮ್ಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ  ಸೆಮಿಫೈನಲ್ ಪಂದ್ಯಗಳು (semifinal matches) ನಡೆಯಲಿದೆ. ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಪಾಟ್ನಾ ಪೈರೇಟ್ಸ್ (Patna Pirates) ಮೊದಲನೇ ತಂಡವಾಗಿ ಸೆಮಿಫೈನಲ್  ಪ್ರವೇಶ ಮಾಡಿದೆ. ಇನ್ನು ಇಂದು ಮೊದಲ ಪಂದ್ಯದಲ್ಲಿ  ಪಟ್ನಾ ಪೈರೇಟ್ಸ್ vs ಯುಪಿ ಯೋಧ (UP Yodha) ನಡುವೆ ಅಂತಿಮ ಹಣಾಹಣಿ ನಡೆಯಲಿದೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯ ದಬಾಂಗ್ ಡೆಲ್ಲಿ vs ಬೆಂಗಳೂರು ಬುಲ್ಸ್ (Dabangg Delhi vs Bangalore Bulls) ನಡುವೆ ಕಾದಾಟ ನಡೆಯಲಿದ್ದು, ಎರಡು ತಂಡಗಳಲ್ಲಿ  ಬಲಿಷ್ಠ ಆಟಗಾರ ರಿದ್ದು, ಯಾರು  ಸೆಮಿಫೈನಲ್ ಪಂದ್ಯವನ್ನು ಗೆದ್ದು, ಫೈನಲ್ ಗೆ ಲಗ್ಗೆ ಇಡುತ್ತಾರೆ ಎಂದು ಕಬಡ್ಡಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ನಮ್ಮ ಬೆಂಗಳೂರು ಬುಲ್ಸ್ ಆರಂಭದಲ್ಲಿ ಭರ್ಜರಿ ಪ್ರದರ್ಶನ ತೋರಿ ಎರಡನೇ ಭಾಗದಲ್ಲಿ ಕೊಂಚ ಎಡವಿತ್ತು, ಎಲ್ಲರೂ ಸಹ ಬೆಂಗಳೂರು ಬುಲ್ಸ್ ತಂಡ ಪ್ಲೇಆಫ್ ಹೋಗಲು ಸಾಧ್ಯವಿಲ್ಲ ಎದ್ದಿದ್ದರು, ಅದೃಷ್ಟವಶಾತ್ ಕೊನೆಯ ಪಂದ್ಯವನ್ನು ಗೆದ್ದು ಪ್ಲೇ ಆಫ್ ಗೆ ಲಗ್ಗೆ ಇಟ್ಟು, ಗುಜರಾತ್ ಫಾರ್ಚುನ್ ಜೈನ್ಸ್ (Gujarat Fortune Jains) ವಿರುದ್ಧ ಸೆಣೆಸಾಟ ನಡೆಸಿ ಬಾರಿ ಅಂತರದಿಂದ ಗೆಲ್ಲುವುದರ ಮೂಲಕ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದೆ. ಇಂದು ನಮ್ಮ ಬೆಂಗಳೂರು ಬುಲ್ಸ್ ತಂಡ ದಬಾಂಗ್ ಡೆಲ್ಲಿ ವಿರುದ್ಧ ಭರ್ಜರಿ ಆಟವನ್ನು ಆಡಿ ಗೆಲ್ಲುತ್ತಾ ಎಂಬುವುದನ್ನು ಕಾದು ನೋಡಬೇಕಾಗಿದೆ.

- Advertisement -

Latest Posts

Don't Miss