Friday, November 22, 2024

Latest Posts

ಸುಮಲತಾ ಮಾತು ಉಳಿಸಿಕೊಳ್ತಾರೋ, ಮಾತು ತಪ್ತಾರೋ…?

- Advertisement -

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಲತಾ ಅಂಬರೀಶ್ ಜೆಡಿಎಸ್ ಭದ್ರಕೋಟೆಯನ್ನ ಛಿದ್ರ ಛಿದ್ರ ಮಾಡಿದ್ದು ಈಗ ಇತಿಹಾಸ. ಸುಮಲತಾಗೆ ಬಿಜೆಪಿ ನೀವು ಯಾವಾಗ ಬೇಕಾದ್ರೂ ನಮ್ಮ ಪಕ್ಷಕ್ಕೆ ಬರಬಹುದು ಅಂತ ಆಹ್ವಾನಿಸಿದೆ. ಇದೇ ವಿಚಾರವಾಗಿ ಸುಮಲತಾ ಚುನಾವಣೆ ವೇಳೆ ಮಂಡ್ಯದ ಮುಸ್ಲಿಂ ಬಾಂಧವರಿಗೆ ನೀಡಿದ್ದ ಆ ಒಂದು ಮಾತು ಉಳಿಸಿಕೊಳ್ತಾರೋ ಇಲ್ಲವೋ ಅನ್ನೋ ಪ್ರಶ್ನೆ ಎದುರಾಗಿದೆ.

ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡಿದ್ದು ಜೆಡಿಎಸ್ ನಾಯಕರಿಗೆ ಮತ್ತೊಂದು ಅಸ್ತ್ರವಾಗಿತ್ತು. ಸುಮಲತಾ ಬಿಜೆಪಿ ಬೆಂಬಲಿತ ಅಭ್ಯರ್ಥಿ, ಅವರಿಗೆ ನೀವು ಮತ ಹಾಕಬಾರದು ಅಂತ ಪುಕಾರೆಬ್ಬಿಸಿದ್ರು. ಇದಕ್ಕೆ ಒರ್ವ ಪ್ರಬುದ್ಧ ರಾಜಕಾರಣಿಯಂತೆ ಉತ್ತರಿಸಿದ ಸುಮಲತಾ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರೋದಿಲ್ಲ ಅಂತ ಮುಸ್ಲಿಂ ಸಮುದಾಯಕ್ಕೆ ಮಾತು ಕೊಟ್ಟಿದ್ರು. ಹಾಗೆಯೇ ನಾನು ಬಿಜೆಪಿ ಸೇರಬೇಕೋ ಇಲ್ಲವೋ ಅನ್ನೋದು ಮಂಡ್ಯ ಜನತೆಗೆ ಬಿಟ್ಟ ನಿರ್ಧಾರ. ನೀವ್ ಹೇಗ್ ಹೇಳ್ತೀರೋ ಹಾಗೆ ಮಾಡ್ತೀನಿ ಅಂತ ಹೇಳಿ ನಿರ್ಧಾರವನ್ನ ಮಂಡ್ಯ ಜನರಿಗೇ ಬಿಟ್ಟಿದ್ದಾರೆ.

ಆದ್ರೆ, ಸುಮಲತಾ ಶೀಘ್ರವೇ ಒಂದು ನಿರ್ಧಾರಕ್ಕೆ ಬರಬೇಕಿದೆ. ಯಾಕಂದ್ರೆ ಮುಂದಿನ ರಾಜಕೀಯ ಭವಿಷ್ಯದ ದೃಷ್ಠಿಯಿಂದ ಬೆಂಬಲಿಗರು ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಅನ್ನೊ ಗೊಂದಲದಲ್ಲಿದ್ದಾರೆ.. ಬೆಂಬಲಿಗರ ದೃಷ್ಠಿಯಿಂದಾದರೂ ಸುಮಲತಾ ಯಾವುದಾರೂ ಒಂದು ಪಕ್ಷವನ್ನ ಆಯ್ಕೆ ಮಾಡಿಕೊಳ್ಳಬೇಕಿದೆ.ಹೀಗಾಗಿ ಸುಮಲತಾ ಆಯ್ಕೆ ಬಿಜೆಪಿನಾ..? ಕಾಂಗ್ರೆಸ್ಸಾ..? ಅಥವಾ ಪ್ರಾದೇಶಿಕ ಪಕ್ಷ ಕಟ್ಟೋದಾ..? ಅನ್ನೋದು ಮುಂದೆ ಗೊತ್ತಾಗಲಿದೆ..

ಮೇ 30ರಂದು ಆ ಶಾಕಿಂಗ್ ಸುದ್ದಿ ಯಾರಿಗೆ..? ತಿಳಿದುಕೊಳ್ಳೋದಕ್ಕೆ ಈ ವಿಡಿಯೋ ತಪ್ಪದೇ ನೋಡಿ.

https://www.youtube.com/watch?v=9K91TOuW3Xo
- Advertisement -

Latest Posts

Don't Miss