Saturday, October 5, 2024

Latest Posts

ರಾಜ್ಯದಲ್ಲಿ ಮತ್ತೆ ಎಲೆಕ್ಷನ್…?- ಬಿಎಸ್ವೈಗೆ ಬಿಗ್ ಶಾಕ್ ಕೊಟ್ಟ ಅಮಿತ್ ಶಾ.. !

- Advertisement -

ರಾಜ್ಯ ಬಿಜೆಪಿ ಕಳೆದೊಂದು ವರ್ಷದಿಂದ ಹಲವು ಬಾರಿ ಫ್ಲಾಪ್ ಆಪರೇಷನ್ ಗಳನ್ನ ಮಾಡಿದೆ.ಆದ್ರೆ ಇದೀಗ ಬಿಜೆಪಿ ಅಂತಿಮ ಸುತ್ತಿನ ಆಪರೇಷನ್ ಕಮಲಕ್ಕೆ ಚಾಲನೆ ಕೊಟ್ಟಿದೆ. ಈ ಮಧ್ಯೆಯೇ ರಾಜ್ಯ ಬಿಜೆಪಿ ನಾಯಕರಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶಾಕ್ ಕೊಟ್ಟಿದ್ದಾರೆ.

ಹೇಗಿದ್ರೂ ರಮೇಶ್ ಜಾರಕಿಹೊಳಿ ಟೀಂ ಅಲ್ಲದೇ ಡಾ. ಕೆ ಸುಧಾಕರ್, ರೋಷನ್ ಬೇಗ್ ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇನ್ನು ಬಿ.ಸಿ ಪಾಟೀಲ್ ಕಾಂಗ್ರೆಸ್ ಹೈ ಕಮಾಂಡ್ಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಈ ನಡುವೆ ಬಿಜೆಪಿ ಹೈಕಮಾಂಡ್ ನಿಂದ ಬಂದ ಸಂದೇಶ ಯಡಿಯೂರಪ್ಪ ಅಂಡ್ ಟೀಂ ನ ನಿದ್ದೆಗೆಡಿಸಿದೆ. ರಾಜ್ಯದ ದೋಸ್ತಿ ಸರ್ಕಾರವನ್ನ ಬೀಳಿಸಲು ಓಕೆ ಎಂದಿರೋ ಅಮಿತ್ ಶಾ, ಸರ್ಕಾರ ಬಿದ್ದ ಮೇಲೆ ಹೊಸದಾಗಿ ಸರ್ಕಾರ ರಚಿಸುವ ಬದುಲು ಹೊಸದಾಗಿ ಚುನಾವಣೆಗೆ ಹೋಗಲು ಸೂಚನೆ ಕೊಟ್ಟಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ದೋಸ್ತಿ ರ್ಕಾರದ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿಗೆ ಭಾರೀ ಬೆಂಬಲ ಕೂಡ ಇದೆ. ಈ ವೇಳೆ ಸರ್ಕಾರ ಬೀಳಿಸಿ ಆಡಳಿತ ನಡೆಸೋ ಬದಲು ಹೊಸದಾಗಿ ಚುನಾವಣೆಗೆ ಹೋದರೆ ಬಿಜೆಪಿ ಸುಮಾರು 150 ಸ್ಥಾನಗಳನ್ನ ಏಕಾಂಗಿಯಾಗಿ ಗೆಲ್ಲುವ ಸಾಧ್ಯತೆ ಇದೆ. ಸುಮ್ಮನೆ ಯಾಕೆ 4 ವರ್ಷ ಹೆದರಿಕೊಂಡು ಸರ್ಕಾರ ನಡೆಸಬೇಕು, ಪೂರ್ಣ ಬಹುಮತದ ಸರ್ಕಾರ ರಚಿಸೋಣ ಚುನಾವಣೆಗೆ ರೆಡಿಯಾಗಿ ಅಂತ ಅಮಿತ್ ಶಾ , ಬಿಎಸ್ ಯಡಿಯೂರಪ್ಪಗೆ ಶಾಕ್ ನೀಡಿದ್ದಾರೆ. ಒಂದುವೇಳೆ ರಾಜ್ಯದ ದೋಸ್ತಿ ಸರ್ಕಾರ ಪತನವಾದರೂ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲ್ಲ ಬದಲಾಗಿ ಚುನಾವಣೆ ನಡೆಯೋದು ಫಿಕ್ಸ್ ಆಗಿದೆ. ಆದ್ರೆ, ರಾಜ್ಯ ಬಿಜೆಪಿ ಶಾಸಕರು, ಆಪರೇಷನ್ ಕಮಲಕ್ಕೆ ಒಳಗಾಗಿ ಸರ್ಕಾರ ಬೀಳುಸೋ ನಾಯಕರು ಈ ಮಾತಿಗೆ ಒಪ್ತಾರಾ ಅನ್ದನೋದನ್ನ ಕಾದು ನೋಡಬೇಕಿದೆ.

ನಿಖಿಲ್ ಸೋಲೋದಕ್ಕೆ ಇವರೇನಾ ಕಾರಣ..?ತಿಳಿದುಕೊಳ್ಳೋದಕ್ಕೆ ಈ ವಿಡಿಯೋ ತಪ್ಪದೇ ನೋಡಿ.

https://www.youtube.com/watch?v=LsmydDwEdrY
- Advertisement -

Latest Posts

Don't Miss