Sunday, April 13, 2025

Latest Posts

ಸಾವಿರಾರು ಕಾರ್ಯಕರ್ತರ ಬೆಂಬಲದೊಂದಿಗೆ ಶಾಸಕ ಎಲ್‌.ಎನ್‌ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಕೆ

- Advertisement -

ದೇವನಹಳ್ಳಿ: ಪಟ್ಟಣದ ರಸ್ತೆಗಳೆಲ್ಲಾ ಮಂಗಳವಾರ ಸಂಪೂರ್ಣವಾಗಿ ಜೆಡಿಎಸ್‌ ಭದ್ರ ಕೋಟೆಯಾಗಿ ಮಾರ್ಪಾಡಾಗಿತ್ತು, ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಯಾಗಿದ್ದ ಜೆಡಿಎಸ್‌ ಕಾರ್ಯಕರ್ತರು, ಶಿಸ್ತಿನ ಸಿಪಾಯಿಗಳಂತೆ ಮೆರವಣಿಗೆ ಮಾಡಿಕೊಂಡು, ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿರನ್ನು ಹೆಗಲ ಮೇಲೆತ್ತಿ ಮೆರವಣಿಗೆಯ ಮೂಲಕ ಸಾಗಿದರು.

ರಸ್ತೆಯುದ್ದಕ್ಕೂ ಶಾಸಕ, ದೇವೇಗೌಡ, ಕುಮಾರಸ್ವಾಮಿರವರ ಪರವಾದ ಘೋಷಣೆಗಳ ಧ್ವನಿ ಆಗಸದೆತ್ತರಕ್ಕೆ ಕೇಳಿಸುತಿತ್ತು, ಯುವ ಜೆಡಿಎಸ್‌ ಅಭಿಮಾನಿಗಳು ಹೂವಿನ ಸುರಿಮಳೆ ಸುರಿಸಿ ನೆಚ್ಚಿನ ನಾಯಕ ನಿಸರ್ಗ ನಾರಾಯಣಸ್ವಾಮಿರವರಿಗೆ ಹೂ ಮಳೆಯಲ್ಲಿ ಮರ್ಜನ ಮಾಡಿಸಿ ಅಭಿಮಾನ ಮೆರೆದರು.

ಕ್ಷೇತ್ರದಾದ್ಯಂತ ಆಗಮಿಸಿದ ಜೆಡಿಎಸ್‌ ಕಲಿಗಳು ಬಿಬಿ ರಸ್ತೆಯನ್ನು ಪೂರ್ಣವಾಗಿ ಆವರಿಸಿ, ಕೋಟೆ ಶ್ರೀ ವೇಣುಗೋಪಾಲಸ್ವಾಮಿ ದೇಗುದಲ್ಲಿ ನಾಮಪತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ನಾರಾಯಣಸ್ವಾಮಿರವರೊಂದಿಗೆ ಕೋಟೆ ಬೀದಿ, ಚೌಕ ಮಾರ್ಗವಾಗಿ ಬಿಬಿ ರಸ್ತೆ ತಲುಪಿ, ಹೊಸ ಬಸ್‌ ನಿಲ್ದಾಣದ ವೃತ್ತದ ಮೂಲಕ ತಾಲ್ಲೂಕು ಆಡಳಿತ ಸೌಧ ತಲುಪಿದರು.

ತಾಲ್ಲೂಕು ಕಚೇರಿಯ ಮುಂದೆ ನಾಮಪತ್ರ ಸಲ್ಲಿಕೆಗೆ ಅಪಾರ ಜನಸ್ತೋಮದೊಂದಿಗೆ ಆಗಮಿಸಿದ ಶಾಸಕ ನಾರಾಯಣಸ್ವಾಮಿರವರ ಸ್ವಾಗತಕ್ಕೆ ಅರ್ಧ ಗಂಟೆಗೂ ಅಧಿಕವಾಗಿ ಪಟಾಕಿ ಸಿಡಿಸಿ, ತಟಮೆ ವಾದನದ ಮೂಲಕ ಅದ್ಧೂರಿಯಾಗಿ ಬರ ಮಾಡಿಕೊಂಡದರು.

ಜಿಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ. ಮುನೇಗೌಡ, ತಾಲ್ಲೂಕು ಅಧ್ಯಕ್ಷ ಆರ್‌.ಮುನೇಗೌಡ, ತೂಬಗೆರೆ ಹೋಬಳಿ ಜೆಡಿಎಸ್‌ ಮುಖಂಡ ಅಪಯ್ಯಣ್ಣ, ಜಿಲ್ಲಾ ಎಸ್ ಸಿ ಘಟಕದ ಅದ್ಯಕ್ಷರು ಗುರಪ್ಪ ಶಾಸಕರ ಪುತ್ರ ರಮಾನಂದ ಸಾಗರ್‌ ಜೊತೆಯಾಗಿ ತಾಲ್ಲೂಕು ಚುನಾವಣಾಧಿಕಾರಿ ಕಚೇರಿಗೆ ಮಧ್ಯಾಹ್ನ 12.30ರ ಸಮಯಕ್ಕೆ ಭೇಟಿ ನೀಡಿ ನಾಮಪತ್ರ ಸಲ್ಲಿಕೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ‘ವಿರೋಧ ಪಕ್ಷಗಳಲ್ಲಿರುವ ಯಾವುದೇ ಅಭ್ಯರ್ಥಿಗಳಿಂದ ಪಕ್ಷ ವರ್ಚಸ್ಸಿಗೆ ಧಕ್ಕೆಯಾಗುವುದಿಲ್ಲ, ದೇವನಹಳ್ಳಿಯ ಪ್ರತಿಯೊಂದು ಗ್ರಾಮಕ್ಕು ಮೂಲಭೂತ ಸೌಲಭ್ಯ ದೊರೆಕಿಸಿಕೊಟ್ಟು, ಅಭಿವೃದ್ಧಿಯ ನವ ಶಕೆ ಆರಂಭಿಸಿದ್ದೇನೆ. ಈ ಬಾರಿ ಎಲ್ಲೆಡೆ ಜೆಡಿಎಸ್‌ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ’ ಎಂದರು.

‘ನಿನ್ನೆ ವಿರೋಧ ಪಕ್ಷದವರೊಂದಿಗೆ ಬಂದ ಜನರು, ಅವರು ತಂದ ಜನರಾಗಿದ್ದಾರೆ. ಆದರೆ, 20 ಸಾವಿರಕ್ಕೂ ಅಧಿಕ ಜೆಡಿಎಸ್‌ ಅಭಿಮಾನಿಗಳು ನಮ್ಮ ಜನರೇ ಆಗಿದ್ದು, ಜೆಡಿಎಸ್‌ ಬಲ ಅರ್ಥವಾಗಿರುತ್ತದೆ. ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿರವರ ಪಂಚರತ್ನ ಯೋಜನೆಗಳು ನವ ಕರ್ನಾಕಟದ ಉದಯಕ್ಕೆ ಪ್ರಾರಂಭವಾಗುವ ಶುಭ ಸೂಚನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚರ್ಚ್‌ ಮಸೀದಿ, ದೇಗುಲದಲ್ಲಿ ಪೂಜೆ

ಜಾತ್ಯತೀತವಾದವನ್ನು ಪ್ರಬಲವಾಗಿ ನಂಬಿರುವ ಶಾಸಕ  ನಾರಾಯಣಸ್ವಾಮಿರವರು ನಾಮಪತ್ರ ಸಲ್ಲಿಕೆಗೆ ಮುನ್ನ ಬಿದಲೂರು ಚನ್ನಕೇಶವ ಸ್ವಾಮಿ ದೇಗುಲ, ದೇವನಹಳ್ಳಿ ಟೌನ್‌ನ ಕೋಟೆ ವೇಣುಗೋಪಾಲ ಸ್ವಾಮಿ, ಪರ್ವತಪುರ ಚರ್ಚ್‌, ಚಿಕ್ಕಕೆರೆ ಆಂಜನೇಯ ಸ್ವಾಮಿ ದೇಗುಲ, ಕೋಟೆಯ ಪಕ್ಕದಲ್ಲಿರುವ ದರ್ಗಾ, ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ರಂಜಾನ ಪವಿತ್ರ ಮಾಸದಲ್ಲಿ ಮಸೀದಿಗೆ ಭೇಟಿ ನೀಡಿ, ಅಲ್ಲಾವಿನ ಪ್ರಾರ್ಥನೆ ಸಲ್ಲಿಸಿದ ಅವರು, ಶುಭ ಮಾಸದಲ್ಲಿ ನಾಮಪತ್ರ ಸಲ್ಲಿಕೆ ಮಾಡುವುದರಿಂದ ಒಳಿದು ಸಾಧ್ಯ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ನ ಎಲ್ಲ ಸಮುದಾಯದ ಜನರು ಸಹೋದರರೇ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗಿದರೇ ಅದೇ ಸರ್ವ ಜನಾಂಗದ ಶಾಂತಿಯ ಸಮಾಜ ನಿರ್ಮಾಣವಾಗಿ ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

‘ಚುನಾವಣೆಯಲ್ಲಿ ಜೆಡಿಎಸ್‌ ನೇತೃತ್ವದ ಸರ್ಕಾರ ರಚನೆಯಾಗಲಿದ್ದು, ಈ ಬಾರಿ ಸಚಿವನಾಗುವ ಆಕಾಂಕ್ಷೆ ಹೊಂದಿದ್ದೇನೆ. ಇಡೀ ಜೀವನವನ್ನೇ ದೇವನಹಳ್ಳಿಗೆ ಮುಡಿಪಾಗಿಟ್ಟು, ಅಭಿವೃದ್ಧಿ ಕೆಲಸಗಳತ್ತ, ಜನರ ಜೀವನ ಸುಧಾರಣೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖನಾಗುತ್ತೇನೆ. ಜೆಡಿಎಸ್‌ ಬೆಂಬಲಿಸಿ ಅಭಿವೃದ್ಧಿಗೆ ಮತ ನೀಡಿ ಆಶಿರ್ವಾದ ಮಾಡಿ’ ಎಂದರು.

ಚಿಕ್ಕನಾಯಕನಹಳ್ಳಿ ಯುವ ಜನತಾದಳ ಸಂಘಟನಾ ಕಾರ್ಯದರ್ಶಿಯಾದ ಭೂತರಾಜು..

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಗಲೇ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ನಟಿ..

ಶೆಟ್ಟರ್ ಧ್ವಜ ಬದಲಿಸಿದರೆ ವಿಚಾರಧಾರೆ ಬದಲಾದೀತೇ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆ..

- Advertisement -

Latest Posts

Don't Miss