ಮಂಡ್ಯ ನ್ಯೂಸ್: ಮದ್ದೂರಿನ ನಿವಾಸಿಯಾಗಿರುವ ವೆಂಕಟೇಶ್ ಎಂಬುವವರ ಪತ್ನಿ ಮತ್ತು ಮಗ ನಾಪತ್ತೆಯಾಗಿದ್ದಾರೆ. ಇವರದ್ದು ಲವ್ ಮ್ಯಾರೇಜ್ ಆಗಿದ್ದು, ಕೆಲ ವರ್ಷಗಳ ಹಿಂದೆ ಮುಸ್ಲಿಂ ಧರ್ಮದ ಯುವತಿಯನ್ನು ಪ್ರೀತಿಸಿ, ವೆಂಕಟೇಶ್ ವಿವಾಹವಾಗಿದ್ದರು. ಹಾಗಾಗಿ ಆ ಯುವತಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರು. ಇವರಿಗೆ ಒಬ್ಬ ಮಗನೂ ಇದ್ದ. ಆದರೆ ಇದೀಗ ವೆಂಕಟೇಶ್ ಅವರ ಪತ್ನಿ ಮತ್ತು ಮಗ ಕಾಣೆಯಾಗಿದ್ದಾರೆ. ಇದರ ಬಗ್ಗೆ ಪೊಲೀಸರಿಗೆ ಕಂಪ್ಲೆಂಟ್ ನೀಡಿದರೆ, ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ಆರೋಪಿಸಲಾಗಿದೆ.
ಜನವರಿ 23ರಂದು ಪತ್ನಿ ಮಕ್ಕಳು ಇಬ್ಬರೂ ಕೊಡಗಿನ ಸೋಮವಾರಪೇಟೆಯ ತಮ್ಮ ತವರು ಮನೆಗೆ ಹೋಗಿದ್ದರು. ಆದರೆ ಅವರು ಇದುವರೆಗೂ ವಾಪಸ್ ಬರಲಿಲ್ಲ. ಹೀಗಾಗಿ ಪತ್ನಿಯ ತಾಯಿಯ ವಿರುದ್ಧ ದೂರು ನೀಡಬೇಕು ಎಂದು ವೆಂಕಟೇಶ್ ಮುಂದಾದರೂ ಕೂಡ, ಪೊಲೀಸರು ಮಾತ್ರ ದೂರು ಸ್ವೀಕರಿಸುತ್ತಿಲ್ಲವೆಂದು ಆರೋಪಿಸಲಾಗಿದೆ. ಹೀಗಾಗಿ ವೆಂಕಟೇಶ್ ಹಿಂದೂ ಸಂಘಟನೆಗಳ ಬೆಂಬಲದೊಂದಿಗೆ, ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದು, ದೂರು ತೆಗೆದುಕೊಂಡು ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

