Friday, November 22, 2024

Latest Posts

Health Tips: ಮಗು ಆಗದೇ ಇರಲು ಮಹಿಳೆಯರು ಮಾತ್ರ ಕಾರಣರಲ್ಲ

- Advertisement -

Health Tips: ಮದುವೆಯಾಗಿ ಹಲವು ವರ್ಷಗಳೇ ಕಳೆಯಿತು. ಆದರೂ ಮಕ್ಕಳಾಗಲಿಲ್ಲ ಎಂದು ಹಲವರು ಕೊರಗುತ್ತಾರೆ. ಮತ್ತು ಮಕ್ಕಳಾಗದಿರಲು ಕಾರಣ, ಪತ್ನಿಯೇ ಅಂತ ದೂರುವವರೂ ಹಲವರಿದ್ದಾರೆ. ಆದರೆ ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಣೆ ನೀಡಿದ್ದು, ಬಂಜೆತನಕ್ಕೆ ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರೂ ಕಾರಣರಾಗಬಹುದು ಎಂದಿದ್ದಾರೆ.

ಮಗುವಾಗದಿರಲು ಪುರುಷರಲ್ಲಿರುವ ನಿಶ್ಶಕ್ತಿಯೂ ಕಾರಣವಾಾಗಿರುತ್ತದೆ. ಅನಾರೋಗ್ಯಕರ ಜೀವನ ಶೈಲಿ, ಪುರುಷರ ಒತ್ತಡದ ಜೀವನ, ವೀರ್ಯಾಣುವಿನ ಕೊರತೆ, ಹೀಗೆ ಹಲವು ಕಾರಣಗಳಿಂದ ಪುರುಷರಲ್ಲಿಯೂ ಬಂಜೆತನ ಕಾಣಿಸಿಕೊಳ್ಳುತ್ತದೆ. ಆದರೆ ಕೆಲವರಿಗೆ ಗರ್ಭಕೋಶದಲ್ಲಿ ಸಮಸ್ಯೆ ಇದ್ದರಷ್ಟೇ ಮಗುವಾಗುವುದಿಲ್ಲ ಎಂಬ ಮಿಥ್ಯವಿರುತ್ತದೆ. ಆದರೆ ಗರ್ಭಕೋಶ ಆರೋಗ್ಯವಾಗಿರುವುದರ ಜೊತೆಗೆ, ಪುರುಷರಲ್ಲಿ ಶಕ್ತಿ ಮತ್ತು ಉತ್ತಮ ಗುಣಮಟ್ಟದ ವೀರ್ಯಾಣು ಇರುವುದು ಕೂಡ ಮುಖ್ಯವಾಗಿರುತ್ತದೆ.

ಈ ರೀತಿ ಮಕ್ಕಳಾಗುವ ಸಮಸ್ಯೆ ಇದ್ದಾಗ, ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಮತ್ತು ಸಮಸ್ಯೆಗೆ ಪರಿಹಾರವೇನೆಂದು ತಿಳಿಯಬೇಕು. ನರದೌರ್ಬಲ್ಯವೇ ಸಂತಾನ ಸಮಸ್ಯೆಗೆ ಮುಖ್ಯ ಕಾರಣವಾಗಿರುತ್ತದೆ. ಅಲ್ಲದೇ ಅಗತ್ಯಕ್ಕಿಂತ ಹೆಚ್ಚು ಕಾಫಿ ಟೀ ಸೇವನೆ ಮಾಡುವುದು, ಧೂಮಪಾನ, ಮದ್ಯಪಾನ ಸೇವನೆ ಇತ್ಯಾದಿ, ಸಂತಾನ ಹೀನ ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ವೈದ್ಯರು ಇನ್ನಷ್ಟು ವಿವರಿಸಿದ್ದಾರೆ. ಅದನ್ನು ತಿಳಿಯಲು ವೀಡಿಯೋ ನೋಡಿ.

- Advertisement -

Latest Posts

Don't Miss