Tuesday, April 15, 2025

Latest Posts

Yadgir : ಮಾನವೀಯತೆ ಮೆರೆದ MLA ರಾಜುಗೌಡ..!

- Advertisement -

ರಸ್ತೆಯ ಅಪಘಾತದಲ್ಲಿ ಗಾಯಗೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದ ವ್ಯಕ್ತಿಗಳಿಗೆ ಸುರಪುರದ ಶಾಸಕ ರಾಜುಗೌಡ (Rajgouda, MLAs)ಅವರು ಚಿಕಿತ್ಸೆ ಕೊಡಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮನಗನಾಳ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದ ಕಾರ್ಮಿಕರು ಕೂಲಿ ಕೆಲಸ ಮುಗಿಸಿಕೊಂಡು ಟಾಟಾ ಎಸಿ(TATA AC) ಯಲ್ಲಿ ಹೋಗುತ್ತಿದ್ದ ವೇಳೆ ಟಾಟಾ ಎಸಿ ಪಲ್ಟಿಯಾಗಿ ಕಾರ್ಮಿಕರು ಗಾಯಗೊಂಡಿದ್ದು ಸಹಾಯಕ್ಕಾಗಿ ಅಂಗಲಾಚುತ್ತಿದ್ದ ವೇಳೆ ಇದೇ ಮಾರ್ಗ ಮಧ್ಯ ತೆರಳುತ್ತಿದ್ದ ಶಾಸಕ ರಾಜುಗೌಡ ಕಾರ್ಮಿಕರ ನೆರವಿಗೆ ಬಂದಿದ್ದಾರೆ. ಶಾಸಕ ರಾಜುಗೌಡ 108 ಸಿಬ್ಬಂದಿಗೆ ಕರೆಮಾಡಿ ಮಾತನಾಡಿದಾಗ ಅಂಬುಲೆನ್ಸ್(
Ambulance) ಸಿಗದ ಕಾರಣ ಗಾಯಗೊಂಡವರನ್ನು ಶಾಸಕ ರಾಜುಗೌಡ ಬಸ್ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಸರಿಯಾದ ಸಮಯಕ್ಕೆ 108 ಆಂಬುಲೆನ್ಸ್ ಆಗಮಿಸದೇ ಇರುವುದಕ್ಕೆ ಆಕ್ರೋಶಗೊಂಡು ಈ ಕುರಿತು ಆರೋಗ್ಯ ಸಚಿವರ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಎಂಎಲ್ಎ ರಾಜುಗೌಡ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

- Advertisement -

Latest Posts

Don't Miss