Friday, April 4, 2025

Latest Posts

ಮಲೇಷ್ಯಾದಲ್ಲಿ ಕೋಟಿ ಕೊಳ್ಳೆ ಹೊಡೆದು ರಜಿನಿಯನ್ನೂ ಮೀರಿಸ್ತಿದ್ದಾರೆ ರಾಕಿಭಾಯ್..!

- Advertisement -

ನಿಮ್ಗೆ ಗೊತ್ತಾ ಕನ್ನಡದ ಒಂದು ಸಿನಿಮಾ ಮಲೇಷ್ಯಾದಲ್ಲಿ ರಿಲೀಸ್ ಆಗುತ್ತೆ ಅಂದ್ರೆ ಯಾವ ಕನ್ನಡ ಅಂತಿದ್ರು ಮಲೇಷ್ಯಾದವ್ರು..? ಅಲ್ಲಿ ಕನ್ನಡ ಅಂದ್ರೆ ಎನ್ನಡ ಅಂತಾರೆ. ಯಾಕಂದ್ರೆ ಅಲ್ಲಿ ತಮಿಳು ಚಿತ್ರಗಳದ್ದೇ ಅಬ್ಬರ. ರಜನಿಕಾಂತ್ ಮಲೇಷ್ಯಾದಲ್ಲೂ ಸೂಪರ್‌ಸ್ಟಾರ್. ಇನ್ನು ವಿಜಯ್, ವಿಕ್ರಮ್, ಕಮಲ್, ಅಜಿತ್ ಸಿನಿಮಾಗಳೂ ಕೋಟಿ ಕೋಟಿ ಕೊಳ್ಳೆ ಹೊಡೀತವೆ. ಹೇಗೆ ಆಮೀರ್‌ಖಾನ್ ಸಿನಿಮಾಗೆ ಚೈನಾದಲ್ಲಿ ದೊಡ್ಡ ಮಾರ್ಕೇಟ್ ಇದೆಯೋ ಹಾಗೆ. ಆದ್ರೆ ಈಗ ಮಲೇಷ್ಯಾಕ್ಕೆ ಹೊಸ ಸ್ಟಾರ್ ಹುಟ್ಟಿಕೊಂಡಿದ್ದಾನೆ ಅವನೇ ರಾಕಿಭಾಯ್.
ಮಲೇಷ್ಯಾದಲ್ಲಿ ಈಗ ರಾಕಿಭಾಯ್ ಹವಾ ಜೋರು. ೪೦ ದಿನ ಕಳೆದ್ರೂ ಕೆಜಿಎಫ್ ಚಾಪ್ಟರ್-೨ ಕನೆಕ್ಷನ್ ನಿಂತು ಹೋಗಿಲ್ಲ. ಸಿನಿಮಾ ಒಟಿಟಿಯಲ್ಲಿದ್ರೂ ಥಿಯೇಟರ್ ಫೀಲ್ ಸಿಗೋಕೆ ಇನ್ನೂ ಚಿತ್ರಮಂದಿರಗಳತ್ತ ಹೋಗ್ತಿದ್ದಾರೆ ಸಿನಿಪ್ರಿಯರು. ಇಷ್ಟಕ್ಕೂ ರಾಕಿ ರಜಿನಿಕಾಂತ್‌ಗಿAತ ಒಂದು ಕೈ ಮೇಲು ರಾಕಿ ಎಲ್ಲಿ ರಜಿನಿ ಎಲ್ಲಿ ಅಂತೀರಾ, ನಿಜ ರಜಿನಿ ಸೂಪರ್‌ಸ್ಟಾರ್ ಆದರೆ ಈಗ ರಾಕಿಭಾಯ್ ಮಲೇಷ್ಯಾದಲ್ಲಿ ಮಾತ್ರವೇ ಗಳಿಸಿರೋ ಕೋಟಿ ನೋಡಿದ್ರೆ ರಜಿನಿಗಿಂತ ರಾಕಿಭಾಯ್ ರಾಕೆಟ್ ಸ್ಪೀಡಲ್ಲಿ ಮುನ್ನುಗ್ತಿದ್ದಾರೆ ಅಂತ ನೀವೇ ಒಪ್ಕೋತೀರಾ. ೧೭ ಕೋಟಿಯನ್ನು ಮಲೇಷ್ಯಾದಲ್ಲಿ ಕೆಜಿಎಫ್ ಚಾಪ್ಟರ್-೨ ಗಳಿಸಿದೆ. ಮಾತ್ರವಲ್ಲ ೪೦ ದಿನ ಕಳೆದ್ರೂ ಮಲೇಷ್ಯಾದಲ್ಲಿ ಎರಡು ಶೋ ಇನ್ನೂ ಪ್ರದರ್ಶನವಾಗ್ತಿದೆ. ಮುಂದಿನ ಸಿನಿಮಾ ಬಂದ್ರೆ ರಾಕಿ ಯುನಿವರ್ಸಲ್ ಸೂಪರ್‌ಸ್ಟಾರ್ ರಜಿನಿಯನ್ನೂ ಮೀರಿಸಿ ಕಲೆಕ್ಷನ್ ಮಾಡೋದ್ರ ಅನುಮಾನವಿಲ್ಲ.
ಜಗತ್ತಿನಾದ್ಯಂತ ದಿನಕ್ಕೆ ಕನಿಷ್ಠ ೨-೩ ಕೋಟಿ ಪ್ರತದಿನ ಗಳಿಸ್ತಿರೋ ಕೆಜಿಎಫ್ ಚಾಪ್ಟರ್-೨ ೫೦ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಸಂಭ್ರಮದಲ್ಲಿ ರಾಕಿಭಾಯ್ ಮುಂದಿನ ಸಿನಿಮಾ ಅನೌನ್ಸ್ ಮಾಡ್ತಾರೆ ಅನ್ನೋ ಸುದ್ದಿಗಳು ಹರಿದಾಡ್ತಿವೆ. ಅದು ನರ್ತನ್ ಪ್ರಾಜೆಕ್ಟಾ..? ಕೆಜಿಎಫ್ ಚಾಪ್ಟರ್-೩ನಾ..? ಉತ್ತರ ಸದ್ಯಕ್ಕೆ ಯಾರಿಗೂ ಕನ್ಫರ್ಮ್ ಇಲ್ಲ. ಕಾದು ನೋಡೋಣ ಅಣ್ತಮ್ಮ ಏನೆಲ್ಲಾ ಕಮಾಲ್ ಮಾಡ್ತಾರೆ ಅಂತ..

- Advertisement -

Latest Posts

Don't Miss