Movie News: ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ 2 ರಿಲೀಸ್ ಬಳಿಕ, ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡು, ಮುಂದಿನ ಸಿನಿಮಾ ಬಗ್ಗೆ ಆದಷ್ಟು ಬೇಗ ಅನೌನ್ಸ್ ಮಾಡಲಿದ್ದೇವೆ. ಅದರ ತಯಾರಿ ನಡೆಯುತ್ತಿದೆ ಎಂದಿದ್ದರು. ಇದೀಗ ಅಭಿಮಾನಿಗಳ ಕಾತುರಕ್ಕೆ ಬ್ರೇಕ್ ಹಾಕಿರುವ ಯಶ್, ನಾಡಿದ್ದು 8ನೇ ತಾರೀಖಿನಂದು ಬೆಳಿಗ್ಗೆ 9.55ಕ್ಕೆ ಮುಂದಿನ ಸಿನಿಮಾ ಯಾವುದು ಅನ್ನೋದನ್ನು ಘೋಷಣೆ ಮಾಡಲಿದ್ದೇವೆ ಎಂದಿದ್ದಾರೆ.
ನಿನ್ನೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಲೋಡಿಂಗ್ ಎಂಬ ಬರಹದ ಮುಖಪುಟವನ್ನು ಹಾಕುವ ಮೂಲಕ, ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಡುತ್ತಾರೆಂಬ ಸೂಚನೆ ನೀಡಿದ್ದರು. ಇಂದು ವೈ ಎಂಬ ಅಕ್ಷರದ ಫೋಟೋ ಹಾಕಿ, 8ನೇ ತಾರೀಖಿನಂದು ಮುಂದಿನ ಚಿತ್ರ ಯಾವುದು ಎಂಬುದರ ಪೋಸ್ಟರ್ ರಿಲೀಸ್ ಮಾಡಲಿದ್ದಾರೆಂದು ಹೇಳಿದ್ದಾರೆ.
ಡಿಸೆಂಬರ್ ತಿಂಗಳು ಯಶ್‌ಗೆ ಲಕ್ಕಿ ತಿಂಗಳಾಗಿದ್ದು, ಇದೇ ತಿಂಗಳಲ್ಲಿ ಅವರ ಮದುವೆಯಾಗಿತ್ತು. ಅವರ ಸಿನಿಮಾಗಳು ಕೂಡ ಡಿಸೆಂಬರ್‌ನಲ್ಲೇ ರಿಲೀಸ್ ಆಗುತ್ತದೆ. ಇನ್ನು ಮಗಳು ಹುಟ್ಟಿದ್ದು ಕೂಡ ಡಿಸೆಂಬರ್‌ನಲ್ಲೇ.
ಸದ್ಯ ಕೆಜಿಎಫ್ 3 ಮತ್ತು ಯಶ್ 19 ಸಿನಿಮಾ ಪ್ರಾಜೆಕ್ಟ್ ರಾಕಿಭಾಯ್ ಕೈಯಲ್ಲಿದ್ದು, ಮಲಯಾಳಂ ಡೈರೆಕ್ಟರ್ ಗೀತು ಮೋಹನ್ ದಾಸ್ ಜೊತೆ ಸೇರಿ ಮುಂದಿನ ಸಿನಿಮಾ ಮಾಡಲಿದ್ದಾರೆಂಬ ಸುದ್ದಿ ಇದೆ. ಏನೇ ಆದರೂ ನಾವು ಡಿಸೆಂಬರ್ 8ನೇ ತಾರೀಖಿನ ತನಕ ಕಾದು, ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಅಂತಾ ತಿಳಿಯಬೇಕಿದೆ.
28 ಸ್ಥಾನವನ್ನು ಗೆದ್ದು ಕರ್ನಾಟಕದಿಂದ ಉಡುಗೊರೆ ಕೊಡುತ್ತೇವೆ : ಯಡಿಯೂರಪ್ಪ ಶಪಥ
ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ : ಸಚಿವ ಜಮೀರ್ ಅಹ್ಮದ್ ಖಾನ್