ವರ್ಷ ಭವಿಷ್ಯ – 2025 | ಚಂದಾ ಪಾಂಡೆ ಅಮ್ಮಾಜಿ, ಕಾಳಿ ಮಾತೆ ಉಪಾಸಕಿ, ಆಧ್ಯಾತ್ಮಿಕ ಚಿಂತಕಿ

Horoscope: ಇನ್ನು ಕೆಲ ದಿನಗಳಲ್ಲೇ 2025 ಶುರುವಾಗುತ್ತದೆ. ಮುಂದಿನ ವರ್ಷ ಯಾವ ಯಾವ ರಾಶಿಯವರಿಗೆ ಯಾವ ಯಾವ ಫಲವಿರುತ್ತದೆ ಅನ್ನೋ ಕುತೂಹಲವೂ ಇರುತ್ತದೆ. ಅಂಥವರಿಗಾಗಿಯೇ ಜ್ಯೋತಿಷಿ ಚಂದಾ ಪಾಂಡೆ ಅಮ್ಮಾಜಿಯವರು ನಮ್ಮ ಪ್ರಯತ್ನಗಳೂ ಮುಖ್ಯ ಅನ್ನೋ ಬಗ್ಗೆ ವಿವರಿಸಿದ್ದಾರೆ.

ಚಂದಾ ಪಾಂಡೆ ಅಮ್ಮಾಜಿ ಹೇಳುವ ಪ್ರಕಾರ, ಜ್ಯೋತಿಷ್ಯ ಕೇಳಿ ನಾವು ಕುಗ್ಗಬಾರದು ಅಥವಾ ಹಿಗ್ಗಬಾರದು. ಏಕೆಂದರೆ, ನಿಮ್ಮ ರಾಶಿಯಲ್ಲಿ ನಿಮಗೆ ರಾಜಯೋಗ ಅಂತಾ ಬರೆದಿದ್ದರೂ ಕೂಡ, ನಿಮಗೆ ರಾಜ ಯೋಗ ಸಿಗದೇಯೂ ಇರಬಹುದು. ಏಕೆಂದರೆ, ನಿಮ್ಮ ಜಾತಕದಲ್ಲಿ ನಿಮಗೆ ರಾಜಯೋಗ ಬರಬೇಕು ಎಂದರೆ, ನಿಮ್ಮ ಸಕಲ ಪ್ರಯತ್ನವೂ ಬೇಕು ಎಂದು ಬರೆದಿರಬಹುದು.

ಆದರೆ ರಾಜಯೋಗ ಇದೆ ಎಂದು ತಿಳಿದು ನೀವು ಆರಾಮವಾಗಿ ಇದ್ದರೆ, ನಿಮಗೆ ರಾಜಯೋಗ ಎಂದಿಗೂ ಬರುವುದಿಲ್ಲ. ಹಾಗಾಗಿ ಜ್ಯೋತಿಷ್ಯ ನಂಬಬೇಡಿ ಎನ್ನುವುದಿಲ್ಲ. ಆದರೆ ಪೂರ್ತಿಯಾಗಿ ಅದನ್ನೇ ನಂಬಿಕೊಂಡು ಇರಬೇಡಿ. ನಿಮ್ಮ ಪ್ರಯತ್ನವೂ ಇರಲಿ ಎಂದು ಚಂದಾ ಪಾಂಡೆ ಅಮ್ಮಾಜಿ ಹೇಳುತ್ತಾರೆ.

ಅಲ್ಲದೇ ನಾನು ಕೂಡ ಜ್ಯೋತಿಷ್ಯೆ, ಆದರೆ ನಿಮ್ಮಲ್ಲಿರುವ ವ್ಹಿಲ್ ಪವರ್ ಹೆಚ್ಚಿಸಿಕೊಳ್ಳಿ. ಇದರಿಂದ ನಿಮ್ಮ ಪ್ರಯತ್ನ ಹೆಚ್ಚಾಗುತ್ತದೆ. ಆಗ ಜಾತಕ ನೋಡುವ ಅಗತ್ಯವಿರುವುದಿಲ್ಲ. ನಿಮ್ಮ ಪ್ರಯತ್ನ ಸರಿಯಾಗಿದ್ದಲ್ಲಿ, ನಿಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ ಎನ್ನುತ್ತಾರೆ ಚಂದಾ ಪಾಂಡೆ ಅಮ್ಮಾಜಿ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

About The Author