ಬೆಂಗಳೂರು: ಮೋದಿಗೆ ವೋಟ್ ಹಾಕಿ, ನನಗೆ ಕೆಲಸ ಮಾಡೋಕೆ ಹೇಳ್ತೀರಿ ಅಂತ ಜನರ ಮೇಲೆ ಕೂಗಾಡಿದ್ದ ಸಿಎಂ ಕುಮಾರಸ್ವಾಮಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಸಮಯ ಬಂದರೆ ನಿಮ್ಮ ಗ್ರಾಮ ವಾಸ್ತವ್ಯ ನಡೆಯೋಕೆ ಬಿಡಲ್ಲ ಅಂತ ಯಡಿಯೂರಪ್ಪ ಎಚ್ಚರಿಕೆಯನ್ನೂ ನೀಡಿದ್ದಾರೆ.
ಜನರ ಮೇಲೆ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿರೋ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಇದೀಗ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆಗೊಳಿಸಿದ್ದಾರೆ. ಮುಖ್ಯಮಂತ್ರಿಗಳು ಈ ರೀತಿ ಸಂಯಮ ಕಳೆದುಕೊಳ್ತಿರೋದು ಇದೇ ಮೊದಲೇನಲ್ಲ. ಉತ್ತರ ಕರ್ನಾಟಕದ ಜನತೆ ಅಂದರೆ ಸಿಎಂಗೆ ಆಗಿಬರಲ್ಲ. ಅವರ ಗ್ರಾಮ ವಾಸ್ತವ್ಯ ಬೂಟಾಟಿಕೆ ಎಂದು ಮತ್ತೆ ಸಾಬೀತು ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಗೆದ್ದ ಕಾರಣ ಕುಮಾರಸ್ವಾಮಿ ಸಂಯಮ ಕಳೆದುಕೊಂಡು ಮಾತಾಡುತ್ತಿದ್ದಾರೆ. ಇದು ಅವರ ಕೊಳಕು ಮನಸ್ಸನ್ನು ಎತ್ತಿ ತೋರಿಸುತ್ತದೆ. ಜನ ಮೋದಿಗೆ ವೋಟ್ ಹಾಕಿದರು ಎಂದು ಹೀಯಾಳಿಸಿ ಮಾತಾಡಿರೋದು ಸಿಎಂ ಸ್ಥಾನಕ್ಕೆ ಮಾಡಿದ ಅವಮಾನ.ಹಳ್ಳಿಗಳಲ್ಲಿ ನಿಷೇದಾಜ್ನೆ ಜಾರಿ ಮಾಡಿ ಜನರ ಭಾವನೆ ಹತ್ತಿಕ್ಕಿ ಗ್ರಾಮ ವಾಸ್ತವ್ಯ ಮಾಡ್ತಿರೋದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಜನ ವಿರೋದಿ ಕ್ರಮ. ನಿಮ್ಮ ವರ್ತನೆ ದೌರ್ಜನ್ಯದಿಂದ ಕೂಡಿದೆ. ಈ ರೀತಿ ಜನರ ಮೇಲೆ ದೌರ್ಜನ್ಯ ಮಾಡಿದರೆ ಬಿಜೆಪಿ ಸಹಿಸಲ್ಲ ಅಂತ ಸಿಎಂ ವಿರುದ್ಧ ಯಡಿಯೂರಪ್ಪ ಕಿಡಿ ಕಾರಿದ್ದಾರೆ.
ಇನ್ನು ಈ ಬಗ್ಗೆ ಬಿಜೆಪಿ ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳಲಿದೆ ಅಂತ ಹೇಳಿರೋ ಬಿಎಸ್ವೈ, ಸಮಯ ಬಂದರೆ ನಿಮ್ಮ ಗ್ರಾಮ ವಾಸ್ತವ್ಯವೂ ನಡೆಯದಂತೆ ನೋಡಿಕೊಳ್ಳುತ್ತೇವೆ ಅಂತ ಸಿಎಂ ಕುಮಾರಸ್ವಾಮಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶ್ರಾವಣಕ್ಕೆ ರಾಜ್ಯದಲ್ಲಿ ಸರ್ಕಾರ ರಚಿಸಿಯೇ ತೀರುತ್ತಾ ಬಿಜೆಪಿ..? ಮಿಸ್ ಮಾಡದೇ ಈ ವಿಡಿಯೋ ನೋಡಿ