Monday, October 6, 2025

Latest Posts

Makara ಸಂಕ್ರಾಂತಿ ಯಾಕೆ ವಿಶೇಷ ಗೊತ್ತಾ..!

- Advertisement -

ನಮಸ್ಕಾರ ಸ್ನೇಹಿತರೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವುದನ್ನೇ ಮಕರ ಸಂಕ್ರಾಂತಿ (Makar Sankranti)ಎಂದು ಹೇಳಲಾಗುತ್ತದೆ ಇದು ಸೂರ್ಯನ ಹಬ್ಬ(festival of the sun)ಎಂದೇ ಕರೆಯಲಾಗುತ್ತದೆ, ಈ ಹಬ್ಬವನ್ನು ಪ್ರತಿವರ್ಷ ಜನವರಿ 14ರಂದು ಆಚರಿಸಲಾಗುತ್ತದೆ, ಗುಜರಾತ್‍ನಲ್ಲಿ(Gujarat) ಇದನ್ನು ಉತ್ತರಾಯಣ ಎಂಬ ಹೆಸರಿನಿಂದ, ತಮಿಳುನಾಡಿನಲ್ಲಿ ಇದನ್ನು ಪೊಂಗಲ್ ಎಂದು, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಪಂಜಾಬ್‍ನಲ್ಲಿ ಮಾಘಿ, ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇನ್ನು ಈ ಮಕರ ಸಂಕ್ರಾಂತಿಯು ತನ್ನದೇ ಆದ ಹಿನ್ನೆಲೆ ಮತ್ತು ಮಹತ್ವವನ್ನು ಹೊಂದಿದೆ, ಹಾಗಾದರೆ ಮಕರ ಸಂಕ್ರಾಂತಿಯ ಹಿನ್ನೆಲೆ ಮತ್ತು ಮಹತ್ವ ಗಳು ಏನು ಎಂದು ನೋಡೋಣ. ಪುರಾಣಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾಪರಯುಗ(DVAPARA YUGA)ದಲ್ಲಿ ಭೀಷ್ಮ(Bhishma) ಪಿತಾಮಹನು ಮಹಾಭಾರತ ಯುದ್ಧದ ಸಮಯದಲ್ಲಿ ಅರ್ಜುನನ ಬಾಣಗಳ ಗುರಿಗೆ ಒಳಪಟ್ಟು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ಕೂಡ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನದಂದು ತನ್ನ ಪ್ರಾಣವನ್ನು ಬಿಟ್ಟದ್ದು.
ಇನ್ನು ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು, ಮಹಾಲಕ್ಷ್ಮಿ ದೇವಿ (Mahalakshmi Devi)ಸಮುದ್ರ ಮಥನದಲ್ಲಿ ಅವತರಿಸಿದ್ದು, ನಾರಾಯಣನು ವರಹಾ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಇಂದ್ರನಿಗೆ ಗೌತಮರು ಶಾಪ ವಿಮೋಚನೆಯಾಗಿದ್ದು, ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಈ ಎಲ್ಲವೂ ಕೂಡ ಉತ್ತರಾಯಣದಲ್ಲಿ. ಅಷ್ಟೇ ಅಲ್ಲದೆ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ಹೇಳಲಾಗುತ್ತದೆ, ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಇನ್ನು ಈ ಮಕರ ಸಂಕ್ರಾತಿಯಲ್ಲಿ ಮಹಾವಿಷ್ಣುವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ, ನಮ್ಮ ಕರ್ನಾಟಕದಲ್ಲೂ ಕೂಡ ವಿಶೇಷವಾಗಿ ಆಚರಿಸಲಾಗುತ್ತದೆ, ನಾವು ಈ ಹಬ್ಬದಂದು ಎಳ್ಳು-ಬೆಲ್ಲವನ್ನು ಹಂಚಿಕೊಂಡು ಸಂಭ್ರಮಿಸುತ್ತೇವೆ, ರೈತಾಪಿ ವರ್ಗ ಗಳಿಗೆ ಇದು ಸುಗ್ಗಿಯ ಹಬ್ಬ ಈ ಸಮಯದಲ್ಲಿ ತಾವು ಬೆಳೆದ ಫಸಲನ್ನು ಒಂದುಗೂಡಿಸಿ ಅದಕ್ಕೆ ಪೂಜೆಯನ್ನು ಸಲ್ಲಿಸಿ ಸಂಭ್ರಮಿಸುತ್ತಾರೆ. ಹೆಣ್ಣುಮಕ್ಕಳು ಈ ಹಬ್ಬದಂದು ಎಳ್ಳು ಬೆಲ್ಲ ಕಬ್ಬನ್ನು ಜನರಿಗೆ ಕೊಡುವ ಮೂಲಕ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ, ಇನ್ನು ಹುಡುಗರು ಹಸುವಿಗೆ ಕಿಚ್ಚನ್ನು ಹಾಯಿಸುವ ಮೂಲಕ ಸಂಭ್ರಮವನ್ನು ಪಡುತ್ತಾರೆ.

- Advertisement -

Latest Posts

Don't Miss