ಟೀಮ್ ಇಂಡಿಯಾ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಹಲ್, ಬಾಲ್ಯದ ಆ ದಿನಗಳ ನೆನಪಿಗೆ ಜಾರಿದ್ದಾರೆ. ಪ್ರತಿಯೊಬ್ಬರು ಎಷ್ಟೇ ದೊಡ್ಡವರಾಗಲಿ, ಎಷ್ಟೇ ಸಾಧನೆ ಮಾಡಿರಲಿ ಅವರು ಬೆಳೆದು ಬಂದ ದಿನಗಳ ಹಿಂದಿನ ನೆನಪು, ಸದಾ ಖುಷಿ ನೀಡುತ್ತೆ. ಅದೇ ರೀತಿ ಟೀಮ್ ಇಂಡಿಯಾ ಸ್ಪಿನ್ನರ್ ಚಹಲ್ ಕೂಡ, ತಮ್ಮ ಬಾಲ್ಯದ ದಿನಗಳಿಗೆ ಮರಳಿದ್ದಾರೆ. ತಂಡದಲ್ಲಿ ಸದಾ ತಮಾಷೆಯಾಗಿರುವ ಚಹಲ್, ಯಾವಗಲೂ ನಗುತ್ತ, ಇತರ ಆಟಗಾರರನ್ನು ನಗೆ ಗಡಲಿನಲ್ಲಿ ತೇಲಿಸುತ್ತಿರುತ್ತಾರೆ.
ಭಾರತ ಕ್ರಿಕೆಟ್ ತಂಡದ ಕಾಯಂ ಸದಸ್ಯನಾಗಿರುವ ಚಹಲ್, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ತಮ್ಮ ಬಾಲ್ಯದ ಒಂದಷ್ಟು ಫೋಟೋ ಗಳನ್ನ ಇನ್ ಸ್ಟಾಗ್ರಾಮ್ ನಲ್ಲಿ ಪೊಸ್ಟ್ ಮಾಡಿರುವ ಚಹಲ್, “ಚೈಲ್ಡ್ ವುಡ್ ಎ ಪಾರ್ಟ್ ಆಫ್ ಲೈಫ್ ದಿ ಕ್ರಿಯೇಟ್ಸ್ ಬ್ಯುಟಿಫುಲ್ ಮೆಮೋರಿಸ್” ಅಂತ ಬರೆದು ಕೊಂಡಿದ್ದಾರೆ. ಟೀಮ್ ಇಂಡಿಯಾ ಪರ 49 ಏಕದಿನ ಪಂದ್ಯಗಳನ್ನಾಡಿರುವ ಚಹಲ್ 84 ವಿಕೆಟ್ ಪಡೆದಿದ್ದಾರೆ. ಇತ್ತೀಚಿಗೆ ಮುಕ್ತಾಯವಾದ ವಿಶ್ವಕಪ್ ಟೂರ್ನಿಯಲ್ಲೂ ಭಾಗವಹಿಸಿದ್ದ ಚಹಲ್, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ