ಗಾಂಧಿನಗರದಲ್ಲಿ ಕೆಜಿಎಫ್, ಕುರುಕ್ಷೇತ್ರ ಹಾಗೂ ಪೈಲ್ವಾನ್ ಬಳಿಕ ಮತ್ತೊಂದು ಪ್ಯಾನ್ ಇಂಡಿಯನ್ ಸಿನಿಮಾ ಅಂದ್ರೆ ಅವನೇ ಶ್ರೀಮನ್ನಾರಾಯಣ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರವಿದು. ಸತತ ಎರಡು ವರ್ಷಗಳ ಕಾಲ ರಕ್ಷಿತ್ ಪರಿಶ್ರಮ ಹಾಕಿ ಮಾಡಿರೋ ಈ ಸಿನಿಮಾ ಯಾವಾಗಾ ಬರುತ್ತೇ ಅಂತಾ ಸಿನಿರಸಿಕರು ಕಾಯ್ತಾ ಇದ್ರೂ. ಈ ಕಾತರಕ್ಕೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಅವನು ಇನ್ನು 70 ದಿನದಲ್ಲಿ ಬಂದೇ ಬರ್ತಾನೆ ಅಂತಾ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಟ್ವೀಟ್ ಮಾಡಿದ್ದಾರೆ.
ಹಾಗೇ ಲೆಕ್ಕಾ ಹಾಕಿದ್ರೆ 70 ದಿನ ಅಂದ್ರೆ ನವಂಬರ್ ಕೊನೆ ವಾರ ಇಲ್ಲ ಡಿಸೆಂಬರ್ ಮೊದಲ ವಾರ ಅವನೇ ಶ್ರೀಮನ್ನಾರಾಯಣ ಥಿಯೇಟರ್ ಗೆ ಎಂಟ್ರಿ ಕೊಡಲಿದ್ದಾನೆ.
ಇನ್ನು, ರಕ್ಷಿತ್ ಶೆಟ್ಟಿ ಜೊತೆ ಶಾನ್ವಿ ಶ್ರೀವಾಸ್ತವ್, ಅಚ್ಚುತ್ ಕುಮಾರ್, ಪ್ರಮೋದ್ ಶೆಟ್ಟಿ ಅಭಿನಯಿಸಿದ್ದಾರೆ. ಸಚಿನ್ ರವಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.