Bollywood News: ದೇಶದ ಜನ ಬೆಲೆ ಹೆಚ್ಚಳದಿಂದ ಕಂಗೆಟ್ಟು, ಎಲ್ಲ ಪಕ್ಷಗಳಿಗೂ ಶಾಪ ಹಾಕುತ್ತಿದ್ದಾರೆ. ಮಧ್ಯಮ ವರ್ಗ, ಬಡ ವರ್ಗದವರಿಗೆಲ್ಲ ಜೀವನ ನಡೆಸುವುದೇ ಹೊರೆಯಾಗಿದೆ. ಜೊತೆಗೆ ಇದೀಗ ಕೆಲ ಶ್ರೀಮಂತರಿಗೂ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.
ಬಾಲಿವುಡ್ ನಟಿ ಕಂಗನಾ ರಾಣಾವತ್ ಖುದ್ದು ಸಂಸದೆಯಾಗಿದ್ದರೂ, ಈಕೆಯ ಮನೆಯ ಕರೆಂಟ್ ಬಿಲ್ ನೋಡಿ ಈಕೆ ಶಾಕ್ ಆಗಿದ್ದಾರೆ. ಕಾರಣ, ಪ್ರತೀ ತಿಂಗಳು ಸಾವಿರದಲ್ಲಿ ಬರುತ್ತಿದ್ದ ಕರೆಂಟ್ ಬಿಲ್, ಇದೀಗ ಲಕ್ಷದಲ್ಲಿ ಬಂದಿದೆ. ಇದರಲ್ಲೂ ವಿಚಿತ್ರ ಏನಂದ್ರೆ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಇವರ ಮನೆ ಇದೆ. ಆದರೆ ಆ ಮನೆಯಲ್ಲಿ ಇವರು ವಾಸಿಸುತ್ತಿಲ್ಲ. ಆದರೂ ಕೂಡ ಆ ಮನೆಯ ಕರೆಂಟ್ ಬಿಲ್ 1 ಲಕ್ಷಕ್ಕೂ ಹೆಚ್ಚು ಬಂದಿದೆ.
ಈ ಬಗ್ಗೆ ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರುವ ಕಂಗನಾ, ರಾಜ್ಯ ಸರ್ಕಾರದ ಕೆಲಸವನ್ನು ಟೀಕಿಸಿದ್ದಾರೆ. ಹಿಮಾಚಲದಲ್ಲಿರುವ ನನ್ನ ಮನೆಯ ಕರೆಂಟ್ ಬಿಲ್ 1 ಲಕ್ಷ ರೂಪಾಾಯಿ ಬಂದಿದೆ. ಇದನ್ನು ನೋಡಿ ನನಗೆ ನಾಚಿಕೆಯಾಗಿದೆ. ನಮ್ಮ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂದು. ಆದರೆ ಒಂದನ್ನು ಮಾತ್ರ ನಾನು ಶ್ಲಾಘಿಸುತ್ತೇನೆ. ಅದೇನೆಂದರೆ ನೀವು ಬೇರುಮಟ್ಟದಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದು ಕಂಗನಾ ವ್ಯಂಗ್ಯವಾಡಿದ್ದಾರೆ.
ಅಲ್ಲದೇ ಕಾಂಗ್ರೆಸ್ ಮಂಡಿ ಕ್ಷೇತ್ರದ ಚುನಾವಣಾ ಸೋಲಿನಿಂದ ಈಚೆ ಬಂದಿಲ್ಲ. ಆ ಶಾಕ್‌ನಲ್ಲೇ ಇದೆ. ಆದರೆ ಕಾಂಗ್ರೆಸ್ಸಿಗರು ಶಾಕ್‌ನಿಂದ ಹೊರಬಂದು, ಈ ವಾಸ್ತವವನ್ನು ಎಕ್ಸೆಪ್ಟ್ ಮಾಡಿಕೊಳ್ಳಬೇಕಿದೆ ಎಂದು ಕಂಗನಾ ಕಾಂಗ್ರೆಸ್ ಕುರಿತು ಲೇವಡಿ ಮಾಡಿದ್ದಾರೆ.