Saturday, July 27, 2024

Latest Posts

ಕೋವಿಡ್-19 ವ್ಯಾಕ್ಸಿನೇಷನ್ ಒಂದು ವರ್ಷ ಪೂರ್ಣ

- Advertisement -

ನೆನ್ನೆ ಭಾನುವಾರಕ್ಕೆ ಕೋವಿಡ್-19 ವ್ಯಾಕ್ಸಿನೇಷನ್ ಒಂದು ವರ್ಷವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ, ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು ವ್ಯಾಕ್ಸಿನೇಷನ್ ಪ್ರಾರಂಭವಾಗಿ ಒಂದು ವರ್ಷ ತಲುಪಿದೆ. ಎಲ್ಲರ ಸಹಕಾರ ಇದಕ್ಕೆಪ್ರಮುಖವಾಗಿದೆ, ಯಾರು ಯಾರು ಸ್ವಯಂಪ್ರೇರಿತವಾಗಿ ವ್ಯಾಕ್ಸಿನೇಷನ್ ಕಾರ್ಯದಲ್ಲಿ ಭಾಗಿಯಾಗಿರುವಿರೋ ಅವರಿಗೆ ಅಭಿನಂದನೆಯನ್ನು ತಿಳಿಸುತ್ತೇನೆ. ಎಂದಿದ್ದಾರೆ.
ಈವರೆಗೆ ಭಾರತವು 157 ಕೋಟಿ ಡೋಸ್ ಲಸಿಕೆಗಳನ್ನು ಪೂರೈಸಿದೆ ಇದರಲ್ಲಿ ಒಟ್ಟಾರೆ ಎರಡು ಡೋಸ್ ವ್ಯಾಕ್ಸಿನೇಷನ್ ಪಡೆದವರು ಸಂಖ್ಯೆ ಶೇ 70 ರಷ್ಟಿದೆ. ಇನ್ನು ಅರ್ಹ ವಯಸ್ಕ ಜನಸಂಖ್ಯೆಯ ಶೇ 92 ಜನರು ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ. 15-18 ವರ್ಷ ವಯಸ್ಸಿನ ಸುಮಾರು ಶೇ 46 ಹದಿಹರೆಯದವರು ತಮ್ಮ ಮೊದಲ ಡೋಸ್ ಅನ್ನು ಜನವರಿ 3ರ ನಂತರ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಸ್ವೀಕರಿಸಿದ್ದಾರೆ. ಈಗಾಗಿ ನರೇಂದ್ರ ಮೋದಿಯವರು ನಮ್ಮ ಲಸಿಕೆ ಕಾರ್ಯಕ್ರಮವು ಕೊವಿಡ್-19 ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಶಕ್ತಿಯನ್ನು
ನೀಡಿದೆ. ಎಂದು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss