Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು 5 ದೇವಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ..
ಮಂಗಳಗೌರಿ ಮಂದಿರ. ಬಿಹಾರದ ಗಯಾದಲ್ಲಿ ಮಂಗಳಗೌರಿ ಮಂದಿರವಿದೆ. ಇಲ್ಲಿ ಸತಿಯ ಎದೆಯ ಭಾಗ ಬಿದ್ದಿದ್ದು, ಇದು ಶಕ್ತಿಪೀಠವಾಗಿದೆ. ಮಂಗಳಗೌರಿಗೆ ನವರಾತ್ರಿ ಸಮಯದಲ್ಲಿ ವಿಶೇಷ ಪೂಜೆ ಸಲ್ಲುತ್ತದೆ.
ತ್ರಿಪುರ ಸುಂದರಿ ದೇವಸ್ಥಾನ. ಇದು ರಾಜಸ್ತಾನದ ಉದಯಪುರದಲ್ಲಿದೆ. ಇಲ್ಲಿ ಸತಿ ದೇವಿಯ ಬಲಗಾಲು ಬಿದ್ದಿದೆ ಎಂದು ಹೇಳಲಾಗುತ್ತದೆ. ಈ ದೇವಸ್ಥಾನವನ್ನು ಮಹಾರಾಜ ಧಾನ್ಯ ಮಾಣಿಕ್ಯ ಎಂಬುವವನು ನಿರ್ಮಿಸಿದನು ಎಂದು ಹೇಳುತ್ತಾರೆ. ಇಲ್ಲಿ ಕಾಳಿ ದೇವಿಯನ್ನು ಸೊರೋಶಿ ರೂಪದಲ್ಲಿ ಪೂಜಿಸಲಾಗುತ್ತದೆ.
ಉಜ್ಜಯಿನಿ ಮಹಾಕಾಳಿ ದೇವಸ್ಥಾನ. ಉಜ್ಜಯಿನಿಯಲ್ಲಿ ಮಹಾಕಾಳ ನೆಲೆಸಿರುವ ರೀತಿ, ಮಹಾಕಾಳಿಯೂ ನೆಲೆಸಿದ್ದಾಳೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಈ ದೇವಸ್ಥಾನವಿರುವ ಸ್ಥಳದಲ್ಲೇ, ಸತಿಯ ತುಟಿಯ ಭಾಗ ಬಿದ್ದಿತ್ತಂತೆ. ಹಾಗಾಗಿ ಇದು ಶಕ್ತಿಪೀಠವಾಗಿದೆ. ಗ್ರಾಹ್ ಕಾಳಿಕಾ, ಮಹಾಲಕ್ಷ್ಮೀ ಮತ್ತು ಸರಸ್ವತಿ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ.
ಜ್ವಾಲಾ ದೇವಸ್ಥಾನ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಜ್ವಾಲಾದೇವಿ ದೇವಸ್ಥಾನವಿದೆ. ಇಲ್ಲಿ ನವಜ್ವಾಲೆ ಇದ್ದು, ನವದುರ್ಗೆಯ ಹೆಸರನ್ನು ಇದಕ್ಕೆ ಇರಿಸಲಾಗಿದ್ದು, ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮುಖ್ಯವಾಗಿ ಜ್ವಾಲಾಮುಖಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ದಂತೇಶ್ವರಿ ದೇವಸ್ಥಾನ: ಛತ್ತೀಸ್‌ಘಡದ ಬಸ್ತಾರ್ ಎಂಬಲ್ಲಿ ದಂತೇಶ್ವರಿ ದೇವಸ್ಥಾನವಿದೆ. ಸತಿ ದೇವಿಯ ಹಲ್ಲು ಈ ಸ್ಥಳದಲ್ಲಿ ಬಿದ್ದ ಕಾರಣ, ಇಲ್ಲಿ ದೇವಸ್ಥಾನ ನಿರ್ಮಿಸಲಾಗಿದ್ದು, ಈ ದೇವಿಗೆ ದಂತೇಶ್ವರಿ ದೇವಿ ಎಂದು ಹೆಸರಿಡಲಾಗಿದೆ. ಇಲ್ಲಿನ ಹಳ್ಳಿಗರು ಮತ್ತು ಬುಡಕಟ್ಟು ಜನರು ಸೇರಿ, ದಂತೇಶ್ವರಿ ದೇವಿಗೆ, ನವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದು ರಾಯಪುರದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.