ನಮ್ಮ ದೇಹದಲ್ಲಿ ಹೃದಯ ಬಡಿತ, ನಾಡಿ ಮಿಡಿತ, ಎಷ್ಟು ಮುಖ್ಯವೋ, ಅಷ್ಟೇ ರಕ್ತ ಸಂಚಾರವೂ ಮುಖ್ಯ. ಯಾಕಂದ್ರೆ ಹೃದಯಕ್ಕೆ ರಕ್ತ ಸಂಚಾರವಾದಾಗಲೇ, ಹೃದಯ ಬಡಿದುಕೊಳ್ಳೋದು. ಅಲ್ಲಿ ರಕ್ತ ಸಂಚಾರ ಸ್ಟಾಪ್ ಆದ್ರೆ, ನಮ್ಮ ಲೈಫ್ ಜರ್ನಿಯೂ ಸ್ಟಾಪ್ ಆಗತ್ತೆ. ಹಾಗಾಗಿ ರಕ್ತ ಸಂಚಾರ ಸರಿಯಾಗಿ ಆಗೋದು ತುಂಬಾ ಮುಖ್ಯ. ಹಾಗಾಗಿ ನೀವು 10 ಆಹಾರಗಳನ್ನ ತಿನ್ನೋದನ್ನ ಕಡಿಮೆ ಮಾಡ್ಬೇಕು. ಅದು ಯಾವ ಆಹಾರ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಆಹಾರ ಶರಾಬು, ಗುಟ್ಕಾ, ಬೀಡಿ, ಸಿಗರೇಟ್. ಇದನ್ನ ಎಲ್ಲರೂ ಸೇವಿಸುವುದಿಲ್ಲ ಅನ್ನೋದು ಗೊತ್ತು. ಆದ್ರೆ ಇದನ್ನ ಸೇವಿಸುವುದರಿಂದಲೂ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದ ಆರೋಗ್ಯ ಹಾಳಾಗಿ, ಲಿವರ್ ಡ್ಯಾಮೇಜ್ ಆಗತ್ತೆ. ಮತ್ತು ಬೇಗ ಸಾವು ಬರತ್ತೆ.
ಎರಡನೇಯ ಆಹಾರ ಚಹಾ ಮತ್ತು ಕಾಫಿ. ಶರಾಬಿನ ಚಟ ಹಿಡಿದವನು, ಹೇಗೆ ಅದನ್ನು ಬಿಟ್ಟು ಬದುಕಲಾರನೋ, ಅದೇ ರೀತಿ, ಪ್ರತಿದಿನ ಚಹಾ, ಕಾಫಿ ಸೇವನೆ ಮಾಡುವವರಿಗೂ, ಒಂದು ದಿನ ಚಹಾ ಅಥವಾ ಕಾಫಿ ಕುಡಿಯದಿದ್ದಲ್ಲಿ, ಏನೋ ಕಳೆದುಕೊಂಡ ಅನುಭವವಾಗುತ್ತದೆ. ಇಲ್ಲದೇ ಇರುವ ತಲೆನೋವು ಭ್ರಮೆಯಿಂದಲೇ ಬರುತ್ತದೆ. ಆದ್ರೆ ಕಾಫಿ, ಟೀ ಸೇವನೆಯಿಂದ ರಕ್ತ ಸಂಚಾರಕ್ಕೆ ತೊಂದರೆಯಾಗುತ್ತದೆ.
ಮೂರನೇಯ ಆಹಾರ ಮಸಾಲೆ ಪದಾರ್ಥ. ನೀವು ಪ್ರತಿದಿನ ಖಾರ, ಮಸಾಲೆ ಪದಾರ್ಥಗಳು ಹೆಚ್ಚಿರುವ ಆಹಾರ ತಿಂದರೆ, ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದಲೇ, ಸರಿಯಾಗಿ ಮಲ ವಿಸರ್ಜನೆಯಾಗುವುದಿಲ್ಲ. ಉರಿ ಮೂತ್ರ ಸಮಸ್ಯೆ ಬರುತ್ತದೆ. ಹಾಗಾಗಿ ತಿಂಗಳಿಗೆ ಎರಡು ಬಾರಿ ಮಸಾಲೆ ಪದಾರ್ಥ ತಿಂದರೆ, ಸಾಕು. ಆದ್ರೆ ನೀವು ಮಸಾಲೆಯುಕ್ತ ಪದಾರ್ಥ ತಿನ್ನೋದನ್ನ ಹೆಚ್ಚು ಮಾಡಿದ್ರೆ, ನಿಮ್ಮ ಆರೋಗ್ಯ ಬೇಗ ಹಾಳಾಗುತ್ತದೆ.
ನಾಲ್ಕನೇಯ ಆಹಾರ ಫಾಸ್ಟ್ ಫುಡ್. ಇತ್ತೀಚೆಗೆ ಜಂಕ್ ಫುಡ್ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಅದರಂತೆ, ವೆರೈಟಿಯೂ ಹೆಚ್ಚುತ್ತಿದೆ. ಪಾವ್ ಭಾಜಿ, ವಡಾಪಾವ್, ಬಜ್ಜಿ, ಬೋಂಡಾ, ಹೀಗೆ ತರಹೇವಾರಿ ಫಾಸ್ಟ್ ಫುಡ್ ಸಿಗತ್ತೆ. ಆದ್ರೆ ಇದನ್ನು ಹೆಚ್ಚಾಗಿ ತಿನ್ನುವುದರಿಂದಲೂ ಕೂಡ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ.
ಐದನೇಯ ಆಹಾರ ಮಾಂಸಾಹಾರ. ನೀವು ಪ್ರತಿದಿನ ಮಾಂಸಾಹಾರ ಸೇವಿಸಿದ್ರೆ, ಅದರಿಂದಲೂ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ನೀವು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಂಸಾಹಾರ ಸೇವಿಸಬಹುದು. ಅದರಲ್ಲೂ ಆ ಮಾಂಸನ್ನ ಸರಿಯಾಗಿ ಬೇಯಿಸಿ ತಿಂದ್ರೆ, ಮಾತ್ರ ಆರೋಗ್ಯಕ್ಕೆ ಒಳ್ಳೆಯದು. ಅರ್ಧಂಬರ್ಧ ಬೇಯಿಸಿ ಮಾಂಸ ತಿಂದರೆ, ರೋಗ ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ.
ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು..?