ಈ 10 ಆಹಾರಗಳನ್ನ ತಿಂದ್ರೆ ರಕ್ತ ಸಂಚಾರಕ್ಕೆ ತೊಂದರೆಯಾಗತ್ತೆ ಹುಷಾರ್.. ಭಾಗ 2

ಇದಕ್ಕೆ ಸಂಬಂಧಿಸಿದಂತೆ ನಾವು ಮೊದಲ ಭಾಗದಲ್ಲಿ ರಕ್ತ ಸಂಚಾರದ ಕೊರತೆಯುಂಟು ಮಾಡುವ ಆಹಾರದಲ್ಲಿ 5 ಆಹಾರದ ಬಗ್ಗೆ ನಾವು ನಿಮಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಆಹಾರಗಳ ಬಗ್ಗೆ ಹೇಳಲಿದ್ದೇವೆ..

ಆರನೇಯ ಆಹಾರ ಐಸ್‌ಕ್ರೀಮ್, ಕೂಲ್‌ ಡ್ರಿಂಕ್ಸ್. ನಾವು ನಿಮಗೆ ಈಗಾಗಲೇ ಕೂಲ್ ಡ್ರಿಂಕ್ಸ್ ಕುಡಿಯೋದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಹೇಳಿದ್ದೇವೆ. ಇದರಿಂದ ಕಿಡ್ನಿ ಫೇಲ್ ಆಗತ್ತೆ. ಹಾಗಾಗಿ ನಿಮಗೆ ಜ್ಯೂಸ್ ಕುಡಿಯಬೇಕು ಅನ್ನಿಸಿದ್ರೆ, ಮನೆಯಲ್ಲೇ ಫ್ರೆಶ್ ಜ್ಯೂಸ್ ಮಾಡಿ ಕುಡಿಯಿರಿ. ಅದೇ ರೀತಿ, ಆ ಜ್ಯೂಸ್‌ಗೆ ಐಸ್‌ ಸೇರಿಸದೇ ಕುಡಿಯಿರಿ. ಯಾಕಂದ್ರೆ ಐಸ್ ಸೇರಿಸಿದ ಪಾನೀಯ, ಐಸ್‌ಕ್ರೀಮ್ ಸೇವನೆ ಹೆಚ್ಚು ಮಾಡಿದ್ರೆ, ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ.

ಏಳನೇಯ ಆಹಾರ ಸಕ್ಕರೆ ಬಳಸಿ ಮಾಡಿದ ಆಹಾರ. ಸಕ್ಕರೆ ಅಂದ್ರೆನೇ ಸ್ಲೋ ಪಾಯ್ಸನ್ ಇದ್ದಂತೆ. ಹಾಗಾಗಿ ಸಕ್ಕರೆ ಬಳಸಿ ಯಾವುದಾದರೂ ಪದಾರ್ಥ ತಯಾರಿಸಿದ್ರೆ, ಅಂದ್ರೆ ಸ್ವೀಟ್ ತಯಾರಿಸಿದ್ರೆ, ಅದನ್ನ ಪ್ರತಿದಿನ ತಿಂದ್ರೆ, ಅದು ನಿಮ್ಮ ರಕ್ತ ಸಂಚಾರವನ್ನ ಹಾಳು ಮಾಡತ್ತೆ. ಇದರಿಂದಲೇ ರೋಗಗಳು ಬಂದು, ಆರೋಗ್ಯ ಹಾಳಾಗುತ್ತದೆ.

ಎಂಟನೇಯ ಆಹಾರ ಹೆಚ್ಚು ಉಪ್ಪು ಬಳಸಿ ಮಾಡಿದ ಪದಾರ್ಥ. ಕೆಲವರಿಗೆ ನಾರ್ಮಲ್ ಆಗಿ ಉಪ್ಪು ಹಾಕಿ ತಯಾರಿಸಿದ ಆಹಾರ ಸೇರುವುದಿಲ್ಲ. ಅದರಿಂದ ಆ ಪದಾರ್ಥಕ್ಕೆ ಕೊಂಚ ಹೆಚ್ಚೇ ಉಪ್ಪು ಹಾಕಬೇಕು. ಇಲ್ಲದಿದ್ದಲ್ಲಿ, ಅವರಿಗೆ ಆ ಅಡುಗೆ ಇಷ್ಟವಾಗುವುದಿಲ್ಲ. ಅಂಥವರ ದೇಹದಲ್ಲೂ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ.

ಒಂಭತ್ತನೇಯ ಆಹಾರ ಮೈದಾ ಬಳಸಿ ತಯಾರಿಸಿದ ಆಹಾರ. ಬ್ರೆಡ್, ಬನ್, ಕೇಕ್ ಹೀಗೆ ಮೈದಾವನ್ನ ಫರ್ಮೆಂಟ್ ಮಾಡಿ, ತಯಾರಿಸಿದ ಆಹಾರ ತಿನ್ನುವುದರಿಂದಲೂ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಮತ್ತು ಇದರ ಸೇವನೆಯಿಂದ ಕ್ಯಾನ್ಸರ್, ಹೃದ್ರೋಗ ಸೇರಿ ಹಲವು ರೋಗಗಳು ಬರುವ ಸಾಧ್ಯತೆ ಇರುತ್ತದೆ.

ಹತ್ತನೇಯ ಆಹಾರ ಮೊಳಕೆ ಬಂದ ಆಲೂಗಡ್ಡೆ. ಆಲೂಗಡ್ಡೆಯಂತಲ್ಲ, ಬದಲಾಗಿ ಯಾವುದೇ ತರಕಾರಿಯಾಗಲಿ, ತಂದ ಹಾಗೆ ಒಂದೆರಡೇ ದಿನದಲ್ಲಿ ಬಳಸಿಬಿಡಬೇಕು. ಅದು ಇಟ್ಟು ಇಟ್ಟು ಅದರ ಫ್ರೆಶ್‌ನೆಸ್ ಹಾಳಾದ ಬಳಿಕ ಬಳಸಿದರೆ, ಅದು ಆರೋಗ್ಯಕ್ಕೂ ಒಳ್ಳೆಯದಲ್ಲ, ಅದಕ್ಕೆ ರುಚಿಯೂ ಇರುವುದಿಲ್ಲ.

ದಹಿ ವಡಾ ತಿಂದ್ರೆ ಆರೋಗ್ಯಕ್ಕಾಗುವ ಸೈಡ್ ಎಫೆಕ್ಟ್ ಏನು ಗೊತ್ತಾ..?

ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು..?

About The Author