Sunday, September 8, 2024

Latest Posts

ಸಾವಿಗೂ ಮುನ್ನ ರಾವಣ 10 ವಿಚಾರಗಳನ್ನು ಹೇಳಿದ್ದ.. ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು ಲಂಕಾಪತಿ ರಾವಣ, ಸಾವಿಗೂ ಮುನ್ನ ಲಕ್ಷ್ಮಣನಲ್ಲಿ ಹೇಳಿದ 10 ವಿಚಾರಗಳಲ್ಲಿ 5 ವಿಚಾರಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗದಲ್ಲಿ ಇನ್ನುಳಿದ 5 ವಿಷಯಗಳ ಬಗ್ಗೆ ತಿಳಿಯೋಣ..

ಆರನೇಯ ವಿಷಯ, ತಪಸ್ಸಿನಿಂದ ನೀನು ಸಕಲವನ್ನೂ ಪಡೆಯಬಹುದು ಎಂದು ರಾವಣ, ಲಕ್ಷ್ಮಣನಿಗೆ ಹೇಳುತ್ತಾನೆ. ಇಲ್ಲಿ ತಪಸ್ಸೆಂದರೆ, ಛಲ ಬಿಡದ ಪ್ರಯತ್ನ. ನಾವು ಆದಷ್ಟು ಗುರಿ ಮುಟ್ಟುವ ಪ್ರಯತ್ನ ಪಡುತ್ತಿರಬೇಕು. ಅದಕ್ಕೆ ಬೇಕಾದ ರೀತಿಯಲ್ಲಿ ಛಲ ಬಿಡದೇ, ನಮ್ಮ ಕೆಲಸವನ್ನು ನಾವು ಮಾಡಬೇಕು ಅನ್ನೋದು ರಾವಣನ ಮಾತಿನ ಅರ್ಥವಾಗಿದೆ.

ಗಂಗೆಯಲ್ಲಿ ಸ್ನಾನ ಮಾಡಿದರೆ ನಿಜವಾಗಲೂ ನಮ್ಮ ಪಾಪ ಕಳೆಯುತ್ತದಾ..?

ಏಳನೇಯ ವಿಷಯ, ದೇವರಲ್ಲಿ ಸದಾ ಭಕ್ತಿ ಮಾಡಿ. ಇಷ್ಟ ದೇವರನ್ನು ಸದಾ ಪೂಜಿಸಿ ಅನ್ನೋದು ರಾವಣನ ಮಾತಾಗಿತ್ತು. ರಾವಣ ಶಿವನ ಭಕ್ತನಾಗಿದ್ದ. ಶಿವನಲ್ಲಿ ಭಕ್ತಿ ಮಾಡಿದ್ದಕ್ಕಾಗಿ ರಾವಣನಿಗೆ ಹಲವು ವರಗಳು ಪ್ರಾಪ್ತಿಯಾಗಿತ್ತು. ಶಿವನ ಕುರಿತಾದ, ಶಿವ ತಾಂಡವ ಸ್ತೋತ್ರವನ್ನು ರಾವಣನೇ ರಚಿಸಿದ್ದ.

ಎಂಟನೇಯ ವಿಷಯ, ಮನುಷ್ಯನಿಗೆ ಆಯುರ್ವೇದದ ಜ್ಞಾನವಿರಬೇಕು. ಯಾಕಂದ್ರೆ ಆಯುರ್ವೇದದ ಜ್ಞಾನ ಶಕ್ತಿಶಾಲಿ ಜ್ಞಾನವಾಗಿದೆ. ಈ ಜ್ಞಾನ ಪಡೆದವನು, ಜಗತ್ತನ್ನೇ ಗೆದ್ದಂತೆ. ಇಂಥವರಿಗೆ ಒಬ್ಬರ ಜೀವ ಉಳಿಸುವ ತಾಕತ್ತಿರುತ್ತದೆ ಎನ್ನುತ್ತಾನೆ ರಾವಣ.

ಸಾವಿಗೂ ಮುನ್ನ ರಾವಣ 10 ವಿಚಾರಗಳನ್ನು ಹೇಳಿದ್ದ.. ಭಾಗ 1

ಒಂಭತ್ತನೇಯ ವಿಷಯ, ಯಾವುದೇ ಕಾರಣಕ್ಕೂ ಗುರಿ ತಲುಪುದನ್ನು ನಿಲ್ಲಿಸಬೇಡಿ. ಜೀವನದಲ್ಲಿ ಎಲ್ಲರಿಗೂ ಒಂದೊಂದು ಗುರಿ ಇರುತ್ತದೆ. ನಾನು ಡಾಕ್ಟರ್ ಆಗಬೇಕು, ಟೀಚರ್ ಆಗಬೇಕು, ಇಂಜಿನಿಯರ್ ಆಗಬೇಕು, ನನ್ನದೇ ಆದಂಥ ಕಂಪೆನಿ ಇರಬೇಕು. ಹೀಗೆ ಹಲವಾರು ಗುರಿ ಇರುತ್ತದೆ. ಇಂಥ ಗುರಿ ಇದ್ದವರು, ಎಂಥದ್ದೇ ಕಷ್ಟ ಬಂದರೂ ಕೂಡ ತಮ್ಮ ಗುರಿ ಮುಟ್ಟುವುದನ್ನು ಬಿಡಬಾರದು. ಕಷ್ಟಪಟ್ಟಾದರೂ, ತಮ್ಮ ಗುರಿ ತಲುಪಬೇಕು.

ಹತ್ತನೇಯ ವಿಷಯ,  ಯಾವಾಗಲೂ ಶಾಸ್ತ್ರಗಳ ಅಧ್ಯಯನ ಮಾಡಬೇಕು. ಯಾಕಂದ್ರೆ ನಮ್ಮ ಶಾಸ್ತ್ರದಲ್ಲಿಯೇ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ. ಹಾಗಾಗಿ ಶಾಸ್ತ್ರಾಭ್ಯಾಸವನ್ನು ಎಲ್ಲರೂ ಮಾಡಬೇಕು ಎನ್ನುತ್ತಾನೆ ರಾವಣ.,

- Advertisement -

Latest Posts

Don't Miss