Friday, October 18, 2024

Latest Posts

ಸಾವಿಗೂ ಮುನ್ನ ರಾವಣ 10 ವಿಚಾರಗಳನ್ನು ಹೇಳಿದ್ದ.. ಭಾಗ 1

- Advertisement -

ರಾವಣನೆಂದರೆ ರಾಕ್ಷಸ, ಸೀತೆಯನ್ನ ಅಪಹರಿಸಿದ್ದ ದುರುಳ, ರಾಮಾಯಣದಲ್ಲಿ ಬರುವ ದುಷ್ಟ ಎಂದೇ ಪ್ರಸಿದ್ಧನಿದ್ದ. ಆದ್ರೆ ರಾಕ್ಷಸನಾಗಿದ್ದರೂ, ಬ್ರಾಹ್ಮಣನಾಗಿದ್ದ ರಾವಣ, ಸಕಲ ಕಲಾ ವಲ್ಲಭನಾಗಿದ್ದ. ಅವನಲ್ಲಿ ಸಾಗರದಷ್ಟು ವಿದ್ಯೆಗಳಿದ್ದವು. ಶಾಸ್ತ್ರ, ಶಸ್ತ್ರ ಎರಡರಲ್ಲೂ ಪರಿಣಿತಿ ಹೊಂದಿದ್ದ. ಅಂಥ ರಾವಣನ ಮೇಲೆ ರಾಮ ಸಂಹಾರ ನಡೆಸಿದಾಗ, ಸಾಯಲು ಕೆಲವೇ ಗಂಟೆಗಳಿರುವಾಗ, ರಾವಣ, ಲಕ್ಷ್ಮಣದಲ್ಲಿ 10 ವಿಷಯಗಳನ್ನು ಹೇಳಿದ್ದ. ಹಾಗಾದ್ರೆ ಆ 10 ವಿಷಯಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ವಿಷಯ, ಶುಭಸ್ಯ ಶೀಘ್ರಂ. ಅಂದರೆ, ಶುಭಕಾರ್ಯವನ್ನ ಮಾಡಲು ವಿಳಂಬ ಮಾಡದೇ, ಬೇಗ ಆ ಕೆಲಸವನ್ನ ಮಾಡಿ ಮುಗಿಸಬೇಕು. ಮತ್ತು ಕೆಟ್ಟ ಕೆಲಸ ಮಾಡುವ ಯೋಚನೆ ಬಂದರೆ, ಅದನ್ನು ಆದಷ್ಟು ದೂರ ತಳ್ಳಬೇಕು. ನಾನು ಮೊದಲೇ ಶ್ರೀರಾಮನ ಮನಸ್ಸನ್ನು ಅರಿತಿದ್ದರೆ, ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುತ್ತಾನೆ.

ಗಂಗೆಯಲ್ಲಿ ಸ್ನಾನ ಮಾಡಿದರೆ ನಿಜವಾಗಲೂ ನಮ್ಮ ಪಾಪ ಕಳೆಯುತ್ತದಾ..?

ಎರಡನೇಯ ವಿಷಯ, ಶತ್ರುವನ್ನು ಕೀಳಾಗಿ ಎಂದಿಗೂ ನೋಡಬಾರದು. ನಾನು ಶಿವನಲ್ಲಿ ವರ ಬೇಡುವಾಗ, ದೇವತೆಗಳು, ರಾಕ್ಷಸರು, ಕಿನ್ನರರು, ಇವರ್ಯಾರಿಂದಲೂ ನನಗೆ ಸಾವು ಬರಬಾರದು ಅಂತಾ ಬೇಡಿಕೊಂಡಿದ್ದೆ. ಯಾಕಂದ್ರೆ ನಾನು ನರ ಮತ್ತು ವಾನರರನ್ನ ತುಚ್ಛವಾಗಿ ಕಂಡಿದ್ದೆ. ಆದರೆ ನನಗೆ ಮಾನವನಾದ ರಾಮ ಮತ್ತು ವಾನರನಾದ ಹನುಮನಿಂದಲೇ ಸಾವು ಬಂದಿದೆ. ಹಾಗಾಗಿ ಶತ್ರುವನ್ನ ಎಂದಿಗೂ ತುಚ್ಛವೆಂದು ಭಾವಿಸಬೇಡಿ ಎಂದು ಹೇಳುತ್ತಾನೆ ರಾವಣ.

ಮೂರನೇಯ ವಿಷಯ, ಎಂದಿಗೂ ಯಾರ ಬಳಿಯೂ ನಿಮ್ಮ ರಹಸ್ಯವನ್ನ ಹೇಳಬೇಡಿ. ಅದು ತಂದೆ ತಾಯಿಯೇ ಆಗಿರಬಹುದು. ಪತ್ನಿ, ಮಕ್ಕಳು, ಸಹೋದರ, ಸಹೋದರಿಯರೇ ಆಗಿರಬಹುದು. ಯಾರಲ್ಲಿಯೂ ನಿಮ್ಮ ರಹಸ್ಯವನ್ನು ಹೇಳಬೇಡಿ. ನಾನು ವಿಭೀಷಣನಲ್ಲಿ ನನ್ನ ಸಾವಿನ ರಹಸ್ಯವನ್ನು ಹೇಳಿದ್ದೆ. ನನ್ನ ನಾಭಿಗೆ ಪೆಟ್ಟು ಬಿದ್ದರಷ್ಟೇ ನಾನು ಸಾವನ್ನಪ್ಪುತ್ತೇನೆ ಎಂದು ಅವನಿಗೆ ಗೊತ್ತಿತ್ತು. ಅವನು ರಾಮನಲ್ಲಿ ಈ ವಿಷಯವನ್ನು ಹೇಳಿದ ಹಾಗಾಗಿ ನಾನಿಂದು ಸಾವು ಕಾಣುವ ಪರಿಸ್ಥಿತಿ ಬಂದಿದೆ ಎನ್ನುತ್ತಾನೆ ರಾವಣ.

ಪ್ರತಿದಿನ ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟ ನಿಮ್ಮ ಸ್ವಂತ..!

ನಾಲ್ಕನೇಯ ವಿಷಯ, ಶಕ್ತಿಯನ್ನು ಅರ್ಜಿತಗೊಳಿಸಬೇಕು. ನಮ್ಮಲ್ಲಿ ಶಕ್ತಿ ಇದ್ದರಷ್ಟೇ ನಾವು ನಾಯಕರಾಗಲು ಸಾಧ್ಯ. ಹಾಗಾಗಿ ಯಾವಾಗಲೂ ಶಕ್ತಿವಂತರಾಗಿರಬೇಕು. ಆ ಶಕ್ತಿ ಸುಮ್ಮನೆ ವ್ಯರ್ಥವಾಗಲು ಬಿಡಬಾರದು ಎಂದು ಹೇಳುತ್ತಾನೆ.

ಐದನೇಯ ವಿಷಯ, ಯಾವಾಗಲೂ ಹೊಸ ಹೊಸ ವಿಷಯಗಳನ್ನ ಕಲಿಯಲು ಪ್ರಯತ್ನಿಸಿ. ಸಾಯುವ ತನಕ ಕಲಿಯುವುದು ಸುಮಾರಷ್ಟಿದೆ. ಪ್ರತಿದಿನ ಹೊಸ ಹೊಸ ಪಾಠಗಳನ್ನು ನಾವು ಕಲಿಯುತ್ತಿರುತ್ತೇವೆ. ಅದರೊಂದಿಗೆ ಹೊಸ ಹೊಸ ವಿದ್ಯೆ, ಹೊಸ ಹೊಸ ವಿಷಯಗಳನ್ನ ನಾವು ಆದಷ್ಟು ಕಲಿಯಬೇಕು. ಇದರಿಂದ ನಮ್ಮ ಜ್ಞಾನ ಹೆಚ್ಚುತ್ತದೆ ಎನ್ನುತ್ತಾನೆ ರಾವಣ. ಇನ್ನುಳಿದ ವಿಷಯಗಳನ್ನ ಮುಂದಿನ ಭಾಗದಲ್ಲಿ ತಿಳಿಯೋಣ.

- Advertisement -

Latest Posts

Don't Miss