ಬೆಂಗಳೂರು: 11 ಕೋಟಿಯ ಮೌಲ್ಯದ ಮಾದಕ ವಸ್ತುಗಳನ್ನು ಕೊಡಿಗೆಹಳ್ಳಿ ಪೊಲೀಸರು ಸೀಜ್ ಮಾಡಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಡ್ರೆಸ್ ಮಾಫಿಯಾದವರ ಜೊತೆಗೆ ಲಿಂಕನ್ನು ಹೊಂದಿದಂತಹ ಅನುಪ್ ಎಂಬುವರನ್ನು ಬಂದಿಸಿದ್ದು, ದೊಡ್ಡ ದೊಡ್ಡ ಪಾರ್ಟಿಗಳಿಗೆ, ಪಬ್ ಗಳಿಗೆ ಗಾಂಜಾ ಹಾಗೂ ಆಶಿಶ್ ಆಯಿಲ್ ಇತರ ಮಾದಕ ವಸ್ತುಗಳನ್ನು ರವಾನೆ ಮಾಡುತ್ತಿರುವುದು ಕೊಡಿಗೆಹಳ್ಳಿ ಪೊಲೀಸರ ಗಮನಕ್ಕೆ ಬಂದಿದ್ದು , ಐನಾತಿ ಡ್ರಗ್ಸ್ ಪೆಡ್ಲರ್ ಆಗಿರುವಂತಹ ಅನುಪ್ ನನ್ನು ಮಾದಕ ವಸ್ತುಗಳ ಸಮೇತ ಬಂಧಿಸಿದ್ದಾರೆ. ಕೇರಳದವನಾದ ಈತ ಬೆಂಗಳೂರು, ಮಂಗಳೂರು, ಉಡುಪಿ, ಕೇರಳ, ಇನ್ನಿತರ ಕಡೆ ಮಾದಕ ವಸ್ತುಗಳನ್ನು ಪಾರ್ಟಿಗಳಿಗೆ ರವಾನಿಸುತ್ತಿದ್ದನು. ಡ್ರಗ್ ಮಾಫಿಯಾದ ಕಿಂಗ್ ಪಿನ್ ಒಬ್ಬ ಈತನಿಗೆ ಬಾಡಿಗೆ ಮನೆ ಮಾಡಿಕೊಟ್ಟು ಮಾದಕ ವಸ್ತುಗಳ ರವಾನೆ ಮಾಡುತ್ತಿದ್ದನೆಂಬುದು ಕಂಡುಬಂದಿದ್ದು ಇವನ ಜೊತೆ ಇನ್ನು ಇಬ್ಬರು ಇದ್ದಾರೆ ಎಂದು ತಿಳಿದುಬಂದಿದ್ದು ಅವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರ ಜೊತೆ ದೊಡ್ಡ ದೊಡ್ಡ ಐಷಾರಾಮಿ ಜನರು ಸಂಪರ್ಕದಲ್ಲಿದ್ದು ದೊಡ್ಡ ಡ್ರಗ್ ಮಾಫಿಯಾದ ಸುಳಿವು ಸಿಕ್ಕಂತಾಗಿದೆ.




