Thursday, July 25, 2024

Latest Posts

5ನೇ ವರ್ಷದ ವಿವಾಹ ವಾರ್ಷಿಕೋತ್ಸವದಲ್ಲಿ ರಾಕಿಂಗ್ ದಂಪತಿ..!

- Advertisement -

www.karnatakatv.net:ಚoದನವನದ ಯಂಗ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರು ಮಧುವೆಯಾಗಿ ಇಂದಿಗೆ 5 ವರ್ಷಗಳು ಕಳೆದಿವೆ, ಇದೆ ಖುಷಿಯಲ್ಲಿದ್ದಾರೆ ಯಶ್ ಮತ್ತು ರಾಧಿಕಾ.

ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಜೊತೆಗಿನ ಪೋಟೊವೊಂದನ್ನು ಅಪ್ಲೋಡ್ ಮಾಡಿ, ಲೇಖಕ ಬ್ಯೂ ಟ್ಯಾಪ್ಲಿನ್ ಅವರ ಕೆಲಸಾಲುಗಳನ್ನು ಬರೆದು ರಾಧಿಕಾ ಹಂಚಿಕೊoಡಿದ್ದಾರೆ.
“ನಿಮ್ಮನ್ನು ಉತ್ತಮಗೊಳಿಸುವ, ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವ ಯಾರಾದರೂ, ನೀವು ನಿರ್ಲಕ್ಷಿಸುವ ಕನಸುಗಳು ಮತ್ತು ಗುರಿಗಳ ಕಡೆಗೆ ನಿಮ್ಮನ್ನು ತಳ್ಳಿದವರು, ನಿಸ್ವಾರ್ಥವಾಗಿ ತಮ್ಮ ಸಮಯವನ್ನು ತ್ಯಾಗ ಮಾಡುವವರು ಧೈರ್ಯಶಾಲಿ, ಸುಸಜ್ಜಿತ ಸಂತೋಷದ ವ್ಯಕ್ತಿಯಾಗಲು ಸಹಾಯ ಮಾಡುತ್ತಾರೆ. ಅದು ಪವಿತ್ರವಾದದ್ದು. ನೀವು ಅಂತಹ ಪ್ರೀತಿಯನ್ನು ಹಿಡಿದುಕೊಳ್ಳಿ.” ಎಂಬ ಸಾಲುಗಳನ್ನು ಹಂಚಿಕೊoಡಿದ್ದಾರೆ.

ರಾಧಿಕಾ ಮತ್ತು ಯಶ್ ಇಬ್ಬರು ಕಿರುತೆರೆಯಲ್ಲಿ ಒಟ್ಟಿಗೆ ನಟಿಸಿ, ಸಿನಿಮಾರಂಗದಲ್ಲೂ ಒಟ್ಟಿಗೆ ಪಯಣ ಶುರು ಮಾಡಿದವರು. ಸ್ನೇಹಿತರಾಗಿದ್ದ ರಾಧಿಕಾ ಮತ್ತು ಯಶ್ ಮುಂದೆ ಪ್ರೇಮಿಗಳಾಗಿ ನಂತರ 2016 ಡಿಸೆಂಬರ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು, ಈಗ ಸುಂದರವಾದ ಜೀವನ ನಡೆಸುತ್ತಿದ್ದಾರೆ. ಈ ಮುದ್ದಾದ ಜೋಡಿಗೆ ಈಗ ಐರಾ ಮತ್ತು ಯಥರ್ವ್ ಯಶ್ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಯಶ್ ಮತ್ತು ರಾಧಿಕಾ ಜೋಡಿಗೆ ಸಿನಿಮಾರಂಗದವರು, ಕುಟುಂಬದವರು ಹಾಗೂ ಹೆಚ್ಚಿನದಾಗಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

- Advertisement -

Latest Posts

Don't Miss